
ಬೆಂಗಳೂರು, (ಅಕ್ಟೋಬರ್ 20): ಆರ್ ಎಸ್ ಎಸ್ ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯ ಚಟುವಟಿಕೆಗಳನ್ನು ರದ್ದುಗೊಳಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಪತ್ರ ಬರೆದಿದ್ದರು. ಇದರಲ್ಲೇ ಎಲ್ಲೆಡೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆರ್ ಎಸ್ ಎಸ್ ಎಸ್ ಹೆಸರು ಹಿಂದೆ ಬಿದ್ದದ್ದೇ ಅದನ್ನೇ ಸರ್ಕಾರ ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಂಡಿದೆ. ಇನ್ನು ಮುಸ್ಲಿಮರು ಸಹ ಸಾರ್ವಜನಿಕ ಸ್ಥಳಗಳಿಗೆ ಅನುಮತಿ ಪಡೆಯುತ್ತಾರಾ ಎಂದು ಹಿಂದೂ ಹಾಗೂ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ, ಈ ಸಂಬಂಧ ಪ್ರಿಯಾಂಕ್ ಖರ್ಗೆ ಮನವಿ, ಕಾನೂನು ಎಲ್ಲರಿಗೂ ಒಂದೆ. ಮುಸ್ಲಿಮರು ಸಹ ಸರ್ಕಾರಿ ಮೈದಾನದಲ್ಲಿ ನಮಜ್ ಮಾಡಬೇಕೆಂದು ಅನುಮತಿ ಪಡೆಯಬೇಕೆಂದು ಖಡಕ್ ಆಗಿ ಹೇಳಿದ್ದಾರೆ.