Headlines

ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ

ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ

ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ

ರಿಯಲ್ ಸ್ಟಾರ್ ಉಪೇಂದ್ರ  ವಿಧಾನಸೌಧದ ಬಾಗಿಲು ಹಾಕಿಸುವುದಾಗಿ ಶಿವರಾಜ್ ಕುಮಾರ್ ಜೊತೆಗಿನ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅವರು ಹೀಗೆ ಹೇಳಿದ್ಯಾಕೆ? ಅದಕ್ಕೆ ಕಾರಣವೇನು?

ರಿಯಲ್​ ಸ್ಟಾರ್​ ಎಂದೇ ಫೇಮಸ್​ ಆಗಿರೋ ನಟ ಉಪೇಂದ್ರ ಅವರು, ಇದಾಗಲೇ ವಿಭಿನ್ನ ರೀತಿಯ ಲುಕ್​ಗಳನ್ನು ತಮ್ಮ ಸಿನಿಮಾಗಳಲ್ಲಿ ನೀಡಿಯೇ ಫೇಮಸ್​ ಆದವರು. ತಮ್ಮ ಚಿತ್ರಗಳನ್ನು ಮೂರ್ನಾಲ್ಕು ಬಾರಿ ನೋಡಿದರಷ್ಟೇ ಅರ್ಥ ಆಗತ್ತೆ ಎನ್ನುವ ಮೂಲಕ ಕೆಲವು ಸಿನಿಮಾಗಳ ಮೂಲಕವೂ ಕ್ರೇಜ್​ ಹೆಚ್ಚಿಸಿಕೊಂಡವರು.

ಇದೀಗ ನಟ ಉಪೇಂದ್ರ ಅವರು ತೆಲುಗಿನಲ್ಲಿಯೂ ಬಿಜಿ ಆಗಿದ್ದಾರೆ. ‘ಎನರ್ಜಿಟಿಕ್ ಸ್ಟಾರ್’ ಎಂದೇ ಫೇಮಸ್​ ಆಗಿರೋ ರಾಮ್ ಪೋತಿನೇನಿ ಅವರ ‘ಆಂಧ್ರ ಕಿಂಗ್ ತಾಲೂಕಾ’ ಸಿನಿಮಾವನ್ನು ಮಹೇಶ್ ಬಾಬು ನಿರ್ದೇಶಿಸುತ್ತಿದ್ದು, ಇದರಲ್ಲಿ ಉಪೇಂದ್ರ ಅವರು ಸೂರ್ಯಕುಮಾರ್ ಎಂಬ ‘ಸೂಪರ್ ಸ್ಟಾರ್’ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್​ 18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಪಾತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು.

ಅಷ್ಟಕ್ಕೂ ತೆಲುಗು ಚಿತ್ರರಂಗ ಅವರಿಗೆ ಹೊಸತಲ್ಲ. ಮೂರು ದಶಕಗಳಿಂದ ತೆಲುಗಿನಲ್ಲೂ ಫೇಮಸ್ ಆಗಿದ್ದಾರೆ ಉಪೇಂದ್ರ ಕನ್ನಡದಲ್ಲಿ ರಿಯಲ್ ಸ್ಟಾರ್ ಎಂದೇ ಹೆಸರಾಗಿರುವ ಉಪೇಂದ್ರಗೆ ತೆಲುಗಿನಲ್ಲಿಯೂ ಅಭಿಮಾನಿಗಳಿದ್ದಾರೆ. ಅವರ ‘ಎ’, ‘ಉಪೇಂದ್ರ’ ಮತ್ತು ‘ಬುದ್ಧಿಮಂತ’, ‘ಯುಐ’ ಇನ್ನಿತರ ಚಿತ್ರಗಳು ತೆಲುಗಿಗೂ ಡಬ್ ಆಗಿವೆ.

ಇನ್ನು ನಟನಾಗಿ ಎಷ್ಟು ಫೇಮಸ್​ ಆದರೋ, ರಾಜಕೀಯದಲ್ಲಿಯೂ ಅಷ್ಟೇ ಫೇಮಸ್​ ಆಗಬೇಕು ಎನ್ನುವ ಕಾರಣಕ್ಕೆ ಪ್ರಜಾಕೀಯ ಎನ್ನುವ ಪಕ್ಷವನ್ನೂ ಆರಂಭಿಸಿದ್ದಾರೆ. ಇದಾಗಲೇ ರಾಜ್ಯದ ಹಲವು ಚುನಾವಣೆಯಲ್ಲಿ ಇದೇ ಪಕ್ಷದಿಂದ ಇವರ ಅಭ್ಯರ್ಥಿಗಳು ಕೂಡ ಸ್ಪರ್ಧಿಸಿದ್ದರು. ಸದ್ಯ ಆ ಪಕ್ಷ ಅವರು ಅಂದುಕೊಂಡಷ್ಟು, ಅವರ ನಿರೀಕ್ಷೆಯಷ್ಟು ಉತ್ತಮ ಫಲಿತಾಂಶ ನೀಡಲಿಲ್ಲ.

ಇದರ ನಡುವೆಯೇ, ಹೊಸದಾಗಿ ಪ್ರಜಾಕೀಯ ಶುರು ಮಾಡಿದ ಸಂದರ್ಭದಲ್ಲಿ, ನಟ ಶಿವರಾಜ್​ ಕುಮಾರ್​ ಅವರು ನಟ ಉಪೇಂದ್ರ ಅವರು ಸಂದರ್ಶನ ಮಾಡಿದ್ದರು. ಅದರಲ್ಲಿ ಅವರು, ರಾಜ್ಯದ ಮುಖ್ಯಮಂತ್ರಿಯಾದರೆ ಮಾಡುವ ಮೊದಲ ಕೆಲಸ ಏನು ಎಂದು ಕೇಳಿದ್ದರು. ಈ ಹಳೆಯ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ.

ಅದಕ್ಕೆ ಉಪೇಂದ್ರ ಅವರು, ನಾನು ಸಿಂಎ ಆದರೆ, ಮಾಡುವ ಮೊದಲ ಕೆಲಸ ವಿಧಾನಸೌಧದ ಬಾಗಿಲು ಹಾಕಿಸುವುದು ಎಂದರು. ಇದಕ್ಕೆ ಶಿವರಾಜ್​ ಕುಮಾರ್​ (Shiva Raj Kumar) ಕಾರಣ ಕೇಳಿದಾಗ ನನ್ನದು ಪ್ರಜಾಕೀಯ. ವಿಧಾನಸೌಧ ನೋಡಿದರೆ ರಾಜಕೀಯ ಎನಿಸುತ್ತದೆ. ರಾಜರ ರೀತಿಯಲ್ಲಿ ಅರಮನೆ ಕಟ್ಟಿಕೊಂಡಿದ್ದಾರೆ. ಅದಕ್ಕಾಗಿಯೇ ಅದನ್ನು ಮುಚ್ಚಿಸುತ್ತೇನೆ ಎಂದರು.

ನನ್ನ ಪ್ರಕಾರ ಎಲ್ಲಾ ಶಾಸಕರು ಕ್ಷೇತ್ರಕ್ಕೆ ಬಂದು ಕೆಲಸ ಮಾಡಬೇಕು. ವಿಧಾನಸೌಧವನ್ನು ಮ್ಯೂಸಿಯಂ ಮಾಡಬೇಕು. ವೀಕೆಂಡ್​ನಲ್ಲಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು. ಪ್ರವಾಸಿ ತಾಣ ಮಾಡಬೇಕು ಎಂದು ಉಪೇಂದ್ರ ಅವರು ಹೇಳಿದ್ದಾರೆ. ಈ ವೇಳೆ ಶಿವರಾಜ್‌ ಕುಮಾರ್‌ ಅವರು, ನೀವು ಸಿನಿಮಾ ರೀತಿ ಆಲೋಚನೆ ಮಾಡಿದ್ದೀರಿ ಅದು ನನಗೆ ಇಷ್ಟ ಆಯಿತು ಎಂದರು.

ಇದರ ವಿಡಿಯೋ ನೋಡಲು ಈ ಲಿಂಕ್​ ಮೇಲೆ ಕ್ಲಿಕ್​  ಮಾಡಿ

Source link

Leave a Reply

Your email address will not be published. Required fields are marked *