Headlines

ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?


ಚೆನ್ನೈ, ಅಕ್ಟೋಬರ್ 21: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಭಾರತ ಬಹಳ ತಡವಾಗಿ ಕಾಲಿಟ್ಟರೂ ಒಂದೊಂದೇ ದೃಢ ಹೆಜ್ಜೆ ಇಡುತ್ತಿದೆ. ಸಾಲು ಸಾಲಾಗಿ ಫ್ಯಾಬ್ರಿಕೇಶನ್ ಯೂನಿಟ್ಗಳು ಶುರುವಾಗುತ್ತಿವೆ. ಮೊದಲ ಚಿಪ್ ತಯಾರಿಕೆಯಾಗಿ ಅಮೆರಿಕದ ಗ್ರಾಹಕರನ್ನೂ ತಲುಪಿದೆ. ಚಿಪ್ ಡಿಸೈನ್ ಘಟಕಗಳೂ ಬಂದಿವೆ. ಇದೇ ಹೊತ್ತಲ್ಲಿ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗುವುದು 7 ಎನ್ಎಂ ಚಿಪ್ (7nm ಪ್ರೊಸೆಸರ್) ಅಭಿವೃದ್ದಿಯತ್ತಲೂ ಭಾರತ ಸಾಗುತ್ತಿದೆ.

ಐಐಟಿ ಮದ್ರಾಸ್ನ (IIT ಮದ್ರಾಸ್) ಸಂಶೋಧಕರ ತಂಡವೊಂದು 7nm ಪ್ರೋಸೆಸರ್ ಅನ್ನು ಸ್ಥಾಪಿಸುತ್ತಿದೆ. ಇದು ಅಂತಿಮ ಹಂತ ತಲುಪುವ 2028ಕ್ಕೆ ಫ್ಯಾಬ್ರಿಕೇಶನ್‌ಗೆ ಸಿದ್ಧವಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಐಐಟಿ ಮದ್ರಾಸ್ನ ಈ ರಿಸರ್ಚ್ ತಂಡವನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಶಕ್ತಿ ಚಿಪ್ ಎಂದು ಹೆಸರಿಸಲಾಯಿತು ಇದು ಅತ್ಯಂತ ಮಹತ್ವದ ಸಂಗತಿ. ಇನ್ನ 2-3 ಬಿಡುಗಡೆ ಭಾರತವು 7 ಎನ್ ಎಂ ಪ್ರೋಸೆಸರ್ ಅನ್ನು ತಯಾರಿಸುವ ಸಾಮರ್ಥ್ಯ.

ಇದನ್ನೂ ಓದಿ: 800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್‌ಗಳು

7 ಎನ್ ಎಂ ಚಿಪ್ ಮಹತ್ವ ಏನೆಂದು ತಿಳಿದಿರಿ…

nm ಎಂದರೆ ನ್ಯಾನೋ ಮೀಟರ್. ಒಂದು ಮೀಟರ್ 100 ಕೋಟಿ ಭಾಗಗಳಾಗಿ ಮಾಡಿದರೆ ಅದರಲ್ಲಿ ಒಂದು ಭಾಗವೇ ನ್ಯಾನೋಮೀಟರ್. ಟ್ರಾನ್ಸಿಸ್ಟರ್ ಟರ್ಮಿನಲ್ಗಳ ನಡುವಿನ ಅಂತರ ಇದು. 90 ಎನ್ಎಂ, 28 ಎನ್ಎಂ, 7 ಎನ್ಎಂ ಇತ್ಯಾದಿ ಚಿಪ್ಗಳಿವೆ. ಕಡಿಮೆ ಎನ್ಎಂ ಇದ್ದಲ್ಲಿ ಒಂದು ಚಿಪ್ನಲ್ಲಿ ಹೆಚ್ಚು ಟ್ರಾನ್ಸಿಸ್ಟರ್ಗಳನ್ನು ಸೇರಿಸಬಹುದು. ಇದರಿಂದ ಹೆಚ್ಚು ಬಲಿಷ್ಠ ಪ್ರೋಸೆಸರ್‌ಗಳು ಸಿದ್ಧಗೊಳ್ಳುತ್ತವೆ. 28 ಎನ್ ಎಂ ಚಿಪ್ಗಿಂತ 7 ಎನ್ ಎಂ ಚಿಪ್ಗಳು ಹೆಚ್ಚು ಪ್ರಬಲ ಕೆಲಸಗಳನ್ನು ಮಾಡಬಲ್ಲವು.

ಭಾರತದಲ್ಲಿ 28 ಎನ್ಎಂ ಚಿಪ್ಗಳನ್ನು ತಯಾರಿಸಲಾಗುತ್ತಿದೆ. ಆದರೆ, 7 ಎನ್ ಎಂ ಚಿಪ್ಗಳನ್ನು ತಯಾರಿಸಬಲ್ಲ ದೇಶಗಳ ಸಂಖ್ಯೆ ಬಹಳ ಕಡಿಮೆ. 7 ಎನ್ಎಂಗಿಂತ ಕಡಿಮೆಯ ಚಿಪ್ಸೆಟ್ಗಳನ್ನು ತಯಾರಿಸಲಾಗುತ್ತಿದೆ. 3 ಎನ್ ಎಂ ಚಿಪ್ಗಳಿವೆ. 1 ಎನ್ಎಂ ಚಿಪ್ ತಯಾರಿಕೆಗೂ ಪ್ರಯತ್ನಿಸಲಾಗುತ್ತಿದೆ. ಆದರೆ, 7 ಎನ್ ಎಂ ಚಿಪ್ ಮಾಡುವುದೆಂದರೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಒಂದು ಹೊಸ ತಂತ್ರಜ್ಞಾನ ಮೈಲಿಗಲ್ಲು ಎಂದೆಂದಿಗೂ ಪರಿಭಾವಿತವಾಗಿದೆ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ; ರಹಸ್ಯವಾಗಿ 4,000 ಕೋಟಿ ರೂ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡ ಎರಡು ದೇಶಗಳು

ಇಲ್ಲಿಂದ ಮುಂದಿನ ಹಾದಿಯನ್ನು ಭಾರತ ಹೆಚ್ಚು ಸುಗಮವಾಗಿ ಸವೆಸಬಹುದು. ಅಂದರೆ, ಹೆಚ್ಚು ಸೂಕ್ಷ್ಮ ಚಿಪ್‌ಗಳನ್ನು ತಯಾರಿಸುವ ಸಾಮರ್ಥ್ಯ ಭಾರತಕ್ಕೆ ಸಿದ್ಧವಾಗಲಿದೆ. ಅದೇ ರೀತಿ, ಭಾರತಕ್ಕೆ 7 ಎನ್ಎಂ ಚಿಪ್ ತಯಾರಿಕೆಯು ಬಹಳ ಮಹತ್ವದ್ದಾಗಿದೆ.

ಏಳು ವರ್ಷಗಳಿಂದ ನಿರಂತರ ಪ್ರಯತ್ನದ ಫಲ

7 ಎನ್ಎಂ ಚಿಪ್ ತಯಾರಿಸುವ ಸಾಮರ್ಥ್ಯ ಪಡೆಯಲು ಬೇರೆ ದೇಶಗಳಿಗೆ ಹಲವು ಪ್ರಯತ್ನಗಳು ಬೇಕಾಗುತ್ತವೆ. ಭಾರತ ದಿಢೀರನೇ ಈ ಸಾಮರ್ಥ್ಯ ಪಡೆದಿಲ್ಲ ಎಂಬುದು ತಿಳಿದಿರಲಿ. 2018ರಲ್ಲೇ ಐಐಟಿ ಮದ್ರಾಸ್‌ನಲ್ಲಿ ಪ್ರೊ| ವಿ ಕಾಮಕೋಟಿ ಮಾರ್ಗದರ್ಶನದಲ್ಲಿ ಈ ಪ್ರೋಸೆಸರ್ ಅಭಿವೃದ್ಧಿಗೆ ಸಂಶೋಧನೆಯನ್ನು ಪ್ರಾರಂಭಿಸಲಾಯಿತು.

ಇದನ್ನೂ ಓದಿ: ಶಕ್ತಿಶಾಲಿ ಏರ್ ಫೋರ್ಸ್; ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದ ನಂ. 3

ಆರ್ಐಎಸ್ಸಿ-ವಿ ಎಂಬ ಓಪನ್ ಸೋರ್ಸ್ ಆರ್ಕಿಟೆಕ್ಚರ್ ಬಳಸಿ ಶಕ್ತಿ ಪ್ರೋಸೆಸರ್ ಅನ್ನು ರೂಪಿಸಲಾಗುತ್ತಿದೆ. ಆರ್ಮ್ ಹೋಲ್ಡಿಂಗ್ಸ್, ಇಂಟೆಲ್, ಎಂಡಿ ಇತ್ಯಾದಿ ಇತರ ಸಿದ್ಧ ಆರ್ಕಿಟೆಕ್ಚರ್ ಇವೆಯಾದರೂ ಅವುಗಳಿಗೆ ಪೇಟೆಂಟ್ ಇದೆ. ಹೀಗಾಗಿ, ಭಾರತವು ಸ್ವತಂತ್ರವಾಗಿ ಚಿಪ್ ಆಗುವುದಿಲ್ಲ. ಈ ಕಾರಣಕ್ಕೆ ಓಪನ್ ಸೋರ್ಸ್ ಆರ್ಕಿಟೆಕ್ಚರ್ ಬಳಸಿ ಚಿಪ್ ಬಳಸಲಾಗುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *