Headlines

RSS ಪಥಸಂಚಲನದ ವಿಡಿಯೋ ಜೊತೆ, ಬಾಲ್ಯದ ಕಹಿ ಸತ್ಯವನ್ನೂ ಅನಾವರಣಗೊಳಿಸಿದ ನಟ ಜಗ್ಗೇಶ್ | Actor Jaggesh Reveals The Bitter Truth Of His Childhood Suc

RSS ಪಥಸಂಚಲನದ ವಿಡಿಯೋ ಜೊತೆ, ಬಾಲ್ಯದ ಕಹಿ ಸತ್ಯವನ್ನೂ ಅನಾವರಣಗೊಳಿಸಿದ ನಟ ಜಗ್ಗೇಶ್ | Actor Jaggesh Reveals The Bitter Truth Of His Childhood Suc



RSS ಪಥಸಂಚಲನದ ವಿಡಿಯೋ ಜೊತೆ, ಬಾಲ್ಯದ ಕಹಿ ಸತ್ಯವನ್ನೂ ಅನಾವರಣಗೊಳಿಸಿದ ನಟ ಜಗ್ಗೇಶ್ | Actor Jaggesh Reveals The Bitter Truth Of His Childhood Suc

ನಟ ಜಗ್ಗೇಶ್ ಅವರು ಆರ್​ಎಸ್​ಎಸ್​ ಪಥಸಂಚಲನದಲ್ಲಿ ಭಾಗಿಯಾದ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ತಾವು ಹುಟ್ಟಿಬೆಳೆದ ಗುಡಿಸಲಿನ ಫೋಟೋ ಶೇರ್ ಮಾಡಿ, ಬಡತನದಿಂದ ನವರಸನಾಯಕನಾಗಿ ಬೆಳೆದ ತಮ್ಮ ಗೆಲುವಿನ ಕಥೆಯನ್ನು ವಿವರಿಸಿ, ಕೊರಗುವವರಿಗೆ ಸ್ಫೂರ್ತಿದಾಯಕ ಪಾಠ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಸದನದಲ್ಲಿ ಆರ್​ಎಸ್​ಎಸ್​ ಗೀತೆ “ನಮಸ್ತೆ ಸದಾ ವತ್ಸಲೆ” ಹೇಳಿದ್ದ ಕೆಲವೇ ದಿನಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್​ಎಸ್​ಎಸ್​ ವಿರುದ್ಧ ಸಮರ ಸಾರಿರುವ ವಿಷಯ ಈಗ ಬಹು ಚರ್ಚಿತ. ಇದರ ಬಗ್ಗೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಲೇ ಇದೆ. ಆರ್​ಎಸ್​ಎಸ್​ ಕಾರ್ಯಕ್ರಮದ ಈ ಗಲಾಟೆ ನಮಾಜ್​ ವರೆಗೂ ಹೋಗಿ ಸದ್ಯ ರಾಜಕೀಯ ಪಕ್ಷಗಳ ನಡುವೆ ಕೆಸರು ಎರೆಚಾಟ ನಡೆಯುತ್ತಲೇ ಇದೆ. ಖರ್ಗೆ ಅವರ ಮಾತನ್ನು ಸಮರ್ಥಿಸುವ ಗುಂಪು ಒಂದೆಡೆಯಾದರೆ, ಆರ್​ಎಸ್​ಎಸ್​ನ ಗುಣಗಾನ ಮಾಡುತ್ತಾ, ತಾವೂ ಆರ್​ಎಸ್​ಎಸ್​ ಎಂದು ಹೆಮ್ಮೆಯಿಂದ ಹೇಳಿಕೊಂಡು ಪೋಸ್ಟ್​ ಹಾಕುತ್ತಿರುವ ಗುಂಪು ಮತ್ತೊಂದೆಡೆ. ಅದೇ ಮತ್ತೊಂದೆಡೆ, RSS ಎಂದರೆ ಏನು ಎಂದು ತಿಳಿಯದ ಒಂದಷ್ಟು ವರ್ಗ ಗೂಗಲ್​ನಲ್ಲಿ ಅದರ ಬಗ್ಗೆ, ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ.

ಪಥಸಂಚಲನದ ಹೆಮ್ಮೆಯ ಕ್ಷಣ

ಇದೀಗ ನಟ ಜಗ್ಗೇಶ್​ ಅವರು ತಾವು ಆರ್​ಎಸ್​​ಎಸ್​​ ಪಥಸಂಚಲನಲ್ಲಿ ಭಾಗಿಯಾಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಪಥಸಂಚಲನದಲ್ಲಿ ಹೆಜ್ಜೆಹಾಕಿದ ಹೆಮ್ಮೆಯ ಕ್ಷಣ. ಭಾಗಿಯಾದ ಎಲ್ಲಾ ಸ್ವಯಂಸೇವಕರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಶ್ರಮವಹಿಸಿದ ಆತ್ಮೀಯ ಮಾಜಿ ಶಾಸಕ ಮಸಾಲೆ ಜಯರಾಮ ರವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದರಲ್ಲಿ ಆರ್​ಎಸ್ಎಸ್​ ಗೀತೆ “ನಮಸ್ತೆ ಸದಾ ವತ್ಸಲೆ” ಹಿನ್ನೆಲೆಯಲ್ಲಿ ಜಗ್ಗೇಶ್​ ಅವರು ಪಥಸಂಚಲನದಲ್ಲಿ ಭಾಗಿಯಾಗಿರುವುದನ್ನು ನೋಡಬಹುದಾಗಿದೆ.

ಬಾಲ್ಯದ ಫೋಟೋ

ಅದೇ ಇನ್ನೊಂದೆಡೆ, ತಾವು ಹುಟ್ಟಿಬೆಳೆದ ಮನೆಯ ಫೋಟೋ ಶೇರ್ ಮಾಡಿಕೊಂಡಿರುವ ನಟ ಜಗ್ಗೇಶ್​ (Jaggesh) ಕೆಲವೊಮ್ಮ ಜಾಲತಾಣದಲ್ಲಿ “ಬಡವರ ಮಕ್ಕಳು ಬೆಳಿಬೇಕು” ಅವಕಾಶ ಸಿಗುತ್ತಿಲ್ಲಾ ಎಂಬ ಕೂಗು ನೋಡಿ ದುಃಖವಾಗುತ್ತೆ ಜೊತೆಗೆ ಸಣ್ಣ ಸಿಟ್ಟು ಬರುತ್ತದೆ ಕಾರಣ ಕೆಲವರು ನೀವೇನು ಬಿಡಿ ಸಾರ್ ನಿಮ್ಮತ್ರ ಇದೆ ಸಂತೋಷವಾಗಿ ಇದ್ದೀರ ನಾವು ಏನು ಮಾಡೋದು ಬಡವರು ಸಾರ್ ಎಂದು ಕಾಮೆಟ್ ಹಾಕುತ್ತಾರೆ. ಮಹನೀಯರೆ ಚನ್ನಾಗಿ ನೋಡಿ ಇದೆ ಮನೆಯಲ್ಲೆ ನಮ್ಮ ವಂಶ ಬೆಳೆದು ಬಂದದ್ದು ಎಂದು ಗುಡಿಸಲನ್ನು ತೋರಿಸಿದ್ದಾರೆ.

ಇದೇ ಮನೆಯಲ್ಲಿ ನಾನು…

ಇದೇ ಜಗಲಿ ನನ್ನ ಆಟದ ಮೈದಾನ, ಇದೇ ಜಗಲಿ ತಾತನ ತೊಡೆಯ ಮೇಲೆ ನಿದಿರೆ, ಇದೇ ಜಗಲಿಯ ಮೇಲೆ ರಾಗಿ ರೊಟ್ಟಿ ಉಚ್ಚೆಳ್ಳು ಚಟ್ನಿ ಬೆಣ್ಣೆ ತಿಂದು ಜಟ್ಟಿಯಂತೆ ಬೆಳೆದದ್ದು, ಇದೇ ಜಗಲಿಯ ಮುಂದೆ ಅಜ್ಜಿ ಸೀಗೆಕಾಯಿ ಅರೆದು ಸ್ನಾನ ಮಾಡಿಸಿದ್ದು, ಇದೇ ಜಗಲಿಯ ಮುಂದೆ ಈಚಲು ಚಾಪೆ ಮೇಲೆ ಮಲಗಿ ಚಂದಿರ ನಕ್ಷತ್ರ ನೋಡುತ್ತ ಧ್ರುವ ನಕ್ಷತ್ರದಂತೆ ಅಜರಾಮರ ಬೆಳೆಯಬೇಕು ಕಂದ ಎಂದು ತಾತ ಕಥೆ ಹೇಳಿ ಹರಸಿದ್ದು, ಇದೇ ಮನೆಯ ಮುಂದೆ ಅಪ್ಪನ ತಮ್ಮ ತಂಗಿಯರ ಮದುವೆ ಕಂಡಿದ್ದು, ಇದೇ ರಸ್ತೆಯ ಹನುಮಂತನ ಮುಂದೆ ಊರು ಮಂದಿಯ ನಾಟಕ ನೋಡಿದ್ದು oh my god ಇದೇ ಪರಿಸರದ ಹುಡುಗ ನವರಸನಾಯಕ ಆಗಿದ್ದು… ಎಂದಿದ್ದಾರೆ.

ಕೊರಗುವವರಿಗೆ ಪಾಠ

ನಾನು ಬಡವರ ಮಗ ಎಂದು ಕೊರಗಿದ್ದರೆ ಇದೇ ರಸ್ತೆಯಲ್ಲೆ ಮುದಿಯ ವಯಸ್ಸು ಕಳೆಯಬೇಕಿತ್ತು ಅಲ್ಲವೆ? So ನನ್ನ advice ಸಿಕ್ಕ ಕೆಲಸ ಶ್ರದ್ಧೆಯಿಂದ ಮಾಡಿ ಪೈಸ ಪೈಸ ಕೂಡಿಸಿ ಇಡಿ,ಯಾವ ದುರಭ್ಯಾಸ ಕಲಿಯದಿರೆ, ತಂದೆತಾಯಿ ದೇವರಂತೆ ಕಾಣಿರಿ ಒಂದುದಿನ ಜಗಗೆದ್ದು ನನ್ನಂತೆ ಮುಂದಿನವರಿಗೆ ಗೆಲುವಿನ ಕಥೆ ಹಂಚಿಕೊಳ್ಳಿ. Love you all ಬಡವರ ಮಗ ಗೆದ್ದ ಕಥೆ ಇಷ್ಟವಾಯಿತ ಮನಸಿದ್ದರೆ ಮಾರ್ಗ ಎಂದು ಹೇಳಿದ್ದಾರೆ. ಈ ಮೂಲಕ ಒಂದು ಉನ್ನತ ಸ್ಥಾನಕ್ಕೆ ಬರಬೇಕಾದರೆ ಅದೆಷ್ಟೋ ಮಂದಿ ಯಾವ ಮಟ್ಟಿಗಿನ ಪರಿಶ್ರಮ ಪಟ್ಟಿರುತ್ತಾರೆ, ಆಮೇಲೆ ಜನ ಏನು ಮಾತನಾಡಿಕೊಳ್ತಾರೆ ಎನ್ನುವ ಕಹಿ ಸತ್ಯವನ್ನು ನಟ ಅನಾವರಣಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *