Lakshmi Nivasa ಜಯಂತ್​ಗೆ ಪ್ರಶಸ್ತಿಯಲ್ಲಿ ಅನ್ಯಾಯ? ನಟ ದೀಪಕ್​ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ

Lakshmi Nivasa ಜಯಂತ್​ಗೆ ಪ್ರಶಸ್ತಿಯಲ್ಲಿ ಅನ್ಯಾಯ? ನಟ ದೀಪಕ್​ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ

Lakshmi Nivasa ಜಯಂತ್​ಗೆ ಪ್ರಶಸ್ತಿಯಲ್ಲಿ ಅನ್ಯಾಯ? ನಟ ದೀಪಕ್​ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರದ ಮೂಲಕ ದೀಪಕ್ ಸುಬ್ರಹ್ಮಣ್ಯ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದಾರೆ. ಆದರೆ, ಈ ಬಾರಿಯ ಜೀ ಕುಟುಂಬ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಯಾವುದೇ ಪ್ರಶಸ್ತಿ ಲಭಿಸದಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ಬೇರೆ ಬೇರೆ ಕಥೆಗಳು ಇದ್ದರೂ, ಈ ಸೀರಿಯಲ್​ನ ಹೆಸರು ಹೇಳಿದಾಕ್ಷಣ ಸೀರಿಯಲ್​ ಪ್ರೇಮಿಗಳ ಕಣ್ಣಿಗೆ ಮೊದಲು ಬರುವುದೇ ಸೈಕೋ ಜಯಂತ್​. ನನ್ನ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕು ಅಂದುಕೊಳ್ಳುವ ಹೆಣ್ಣುಮಕ್ಕಳೆಲ್ಲಾ ಬೆಚ್ಚಿಬಿದ್ದು, ದೇವರೇ ನನ್ನ ಗಂಡ ಪ್ರೀತಿಸದಿದ್ದರೂ ಪರವಾಗಿಲ್ಲ, ಇಂಥ ಗಂಡ ಬೇಡಪ್ಪಾ ಎಂದು ಬೇಡಿಕೊಳ್ಳುವ ಹಾಗೆ ಮಾಡ್ತಿರೋದು ಜಯಂತ್​!

ಈಗ ಆತನ ವಿಪರೀತ ಸೈಕಿಕ್​ ಪ್ರೀತಿಯನ್ನು ತಡೆದುಕೊಳ್ಳಲಾಗದೇ ಪತ್ನಿ ಜಾಹ್ನವಿ ತಲೆಮರೆಸಿಕೊಂಡಿದ್ದಾಳೆ. ಪತ್ನಿಗಾಗಿ ಜಯಂತ್​ ಪರಿತಪಿಸುತ್ತಿರುವ ರೀತಿ ನೋಡಿದ ಎಂಥ ವೀಕ್ಷಕರಿಗೂ ಕಣ್ಣಲ್ಲಿ ನೀರು ಬರುವುದು ಇದೆ. ಅಬ್ಬಬ್ಬಾ ಅದೆಂಥ ನಟನೆ, ಅದೆಂಥ ನಟನೆ ಎಂದು ಎಲ್ಲರೂ ಹೇಳಿಕೊಳ್ಳುವಂಥ ಅತ್ಯದ್ಭುತ ನಟನೆ ಮಾಡ್ತಿರೋದು ನಟ ದೀಪಕ್​ ಸುಬ್ರಹ್ಮಣ್ಯ (Deepak Subrahmanya).

ಇವರ ನಟನೆಯ ಪ್ರೊಮೋ ಬಂದರೆ, ಸರ್​ ನಿಮ್ಮ ನಟನೆಯ ವಿಡಿಯೋ ಪುನಃ ಪುನಃ ನೋಡ್ತೇವೆ, ಅದೆಂಥ ಭಾವನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಪತ್ನಿ ಹತ್ತಿರದಲ್ಲಿ ಇದ್ದಾಗ ಆಕೆಯ ಮೇಲೆ ತೋರಿಸ್ತಿದ್ದ ಕಾಳಜಿ, ಈಗ ಆಕೆ ದೂರವಾದ ಮೇಲೆ ಅವಳು ಬದುಕಿದ್ದಾಳೆ ಎಂದು ಅವಳಿಗಾಗಿ ಪರಿತಪಿಸುವ ಪರಿ ಎಂಥವರದ್ದೂ ಮಂತ್ರಮುಗ್ಧರನ್ನಾಗಿಸುತ್ತದೆ.

ಇಂಥ ನಟ ದೀಪಕ್​ ಅವರಿಗೆ ಈ ಬಾರಿಯ ಜೀ ಕುಟುಂಬ ಅವಾರ್ಡ್ಸ್​ (Zee Kutumba Awards 2025) ಒಂದೇ ಒಂದು ಪ್ರಶಸ್ತಿ ಸಿಗದೇ ಇರುವುದು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಈ ಬಾರಿ ಹಲವಾರು ಪ್ರಶಸ್ತಿಗಳನ್ನು ಹಲವು ನಟರಿಗೆ ನೀಡಲಾಗಿದೆ. ಕೆಲವರಿಗೆ 2-3 ಪ್ರಶಸ್ತಿಗಳೂ ಸಿಕ್ಕಿರುವಾಗ, ಜಯಂತ್​ಗೆ ಒಂದೇ ಒಂದು ಪ್ರಶಸ್ತಿ ಯಾಕೆ ಕೊಟ್ಟಿಲ್ಲ ಎಂದು ಟೀಕೆಗಳ ಮಹಾಪೂರವೇ ಹರಿದುಬಂದಿದೆ.

ಅಂದಹಾಗೆ, ದೀಪಕ್​ ಸುಬ್ರಹ್ಮಣ್ಯ ಅವರಿಗೆ ಕಳೆದ ವರ್ಷ ಅಂದರೆ 2024ರಲ್ಲಿ ಬೆಸ್ಟ್​ ನಟ ಅವಾರ್ಡ್​ ಸಿಕ್ಕಿತ್ತು. ಅದಕ್ಕೂ ಮೊದಲು ಜಯಂತ್​ಗಿಂತಲೂ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಲರ್ಸ್​ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ದಾಸ ಪುರಂದರ ಪೌರಾಣಿಕ ಸೀರಿಯಲ್​ನ ಶ್ರೀನಿವಾಸ ನಾಯಕ ಸೀರಿಯಲ್​ಗೆ ಈ ವಾಹಿನಿಯ ಅನುಬಂಧ ಅವಾರ್ಡ್​ ಕೂಡ ಸಿಕ್ಕಿದೆ. ಆದರೆ ಕಳೆದ ವರ್ಷ ಜೀ ಅವಾರ್ಡ್​ ಸಿಕ್ಕ ಕೆಲವರಿಗೆ ಈ ವರ್ಷವೂ ಸಿಕ್ಕಿರುವಾಗ, ಇಂಥ ಅದ್ಭುತ ನಟನಿಗೆ ಏಕೆ ಸಿಕ್ಕಿಲ್ಲ ಎಂದು ಭಾರಿ ಗರಂ ಆಗಿದ್ದಾರೆ ವೀಕ್ಷಕರು.

ಲಕ್ಷ್ಮೀ ನಿವಾಸ ಸೀರಿಯಲ್​ ಪ್ರೊಮೋಗಳಲ್ಲಿ, ಪದೇ ಪದೇ ಇದೇ ಪ್ರಶ್ನೆಯನ್ನು ಕೇಳಲಾಗುತ್ತಿದೆ. ನಮಗೆ ಉತ್ತರ ಬೇಕಿದೆ. ಇವರಿಗೆ ಯಾಕೆ ಸಿಕ್ಕಿಲ್ಲ ಎನ್ನುವುದೊಂದೇ ಪ್ರಶ್ನೆಗಳನ್ನು ಅಭಿಮಾನಿಗಳು ಇಡುತ್ತಿದ್ದಾರೆ.

ಈಚೆಗಷ್ಟೇ ಇವರು ಮಿಸ್ಟರ್‌ ರಾಣಿ ಸಿನಿಮಾದಲ್ಲಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದಾರೆ. ಇವರು ಪುರುಷ ಎಂದು ತಿಳಿಯದಷ್ಟು ಮಟ್ಟಿಗೆ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಷ್ಟೋ ಗಂಡಸರು ಕಿರುಕುಳ ಕೊಟ್ಟಿದ್ದನ್ನೂ ಹೇಳಿಕೊಂಡಿದ್ದರು ದೀಪಕ್​.

Source link

Leave a Reply

Your email address will not be published. Required fields are marked *