ಸಮಂತಾ ಋತ್ ಪ್ರಭು (ಸಮಂತಾ ರುತ್ ಪ್ರಭು) ದಕ್ಷಿಣದ ಸ್ಟಾರ್ ನಟಿಯಾಗಿ ಮಿಂಚಿದವರು. ದಕ್ಷಿಣದ ದೊಡ್ಡ ಸ್ಟಾರ್ ನಟರುಗಳೊಂದಿಗೆ ಸಮಂತಾ ರತ್ ಪ್ರಭು ನಟಿಸಿದ್ದಾರೆ. ಆದರೆ ನಟಿ ಸಮಂತಾ ಇತ್ತೀಚೆಗೆ ಸಿನಿಮಾದಲ್ಲೂ ತಮ್ಮ ಖಾಸಗಿ ಜೀವನದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಸಮಂತಾ, ನಟ ನಾಗ ಚೈತನ್ಯ ಅವರಿಗೆ ಪ್ರೀತಿ ಮದುವೆ ಆಗಿದ್ದರು. ಆದರೆ ಕೇವಲ ನಾಲ್ಕು ವರ್ಷದ ದಾಂಪತ್ಯದ ಬಳಿಕ ಇಬ್ಬರೂ ಪರಸ್ಪರ ವಿಚ್ಛೇದನ ಹೊಂದಿದ್ದು ಗೊತ್ತೇ ಇದೆ. ನಾಗ ಚೈತನ್ಯ, ಶೋಭಿತಾ ಜೊತೆಗೆ ವಿವಾಹವಾಗಿದ್ದಾರೆ. ಸಮಂತಾ ಸಹ ತಮಗಾಗಿ ವ್ಯಕ್ತಿಯೊಬ್ಬರನ್ನು ಹುಡುಕಿಕೊಂಡಿದ್ದು, ಇದೀಗ ಅವರೊಟ್ಟಿಗೆ ಸುತ್ತಾಡುತ್ತಿದ್ದಾರೆ. ಇದೀಗ ಅವರ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ್ದಾರೆ ಸಹ.
ನಟಿ ಸಮಂತಾ ಬಾಯ್‌ಫ್ರೆಂಡ್ ಜೊತೆಗೆ ಲಿವಿನ್ ಅವರು ಕಳೆದ ಕೆಲವು ತಿಂಗಳುಗಳಿಂದಲೂ ಹರಿದಾಡುತ್ತಲೇ ಇದ್ದಾರೆ. ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಪ್ರೀತಿಯಲ್ಲಿದ್ದಾರೆ. ಈ ಇಬ್ಬರೂ ಪರಸ್ಪರ ಲಿವಿನ್ ರಿಲೇಷನ್‌ನಲ್ಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವಾರು ತಿಂಗಳುಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಇಬ್ಬರೂ ಸಹ ಇದನ್ನು ಖಾತ್ರಿ ಪಡಿಸಲಿಲ್ಲ. ಇದೀಗ ಸಮಂತಾ, ರಾಜ್ ಅವರ ಕುಟುಂಬದ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದೀಗ ನಟಿ ಸಮಂತಾ, ದೀಪಾವಳಿ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ರಾಜ್ ನಿಧಿಮೋರು ಹಾಗೂ ಅವರ ಕುಟುಂಬದ ಜೊತೆಗೆ ದೀಪಾವಳಿ ಆಚರಣೆ ಮಾಡಿದ್ದಾರೆ. ರಾಜ್ ನಿಧಿಮೋರು ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗಿನ ಚಿತ್ರವನ್ನು ಸಮಂತಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಜ್ ಅವರ ತಂದೆ-ತಾಯಿ ಮತ್ತು ಸಹೋದರರು ಸಹ ಇದ್ದಾರೆ. ಸಮಂತಾ ಸಹ ಅವರ ಜೊತೆಗೆ ಒಟ್ಟಿಗೆ ಕೂತು ‘ಫ್ಯಾಮಿಲಿ ಫೋಟೋ’ ತೆಗೆಸಿದ್ದಾರೆ. ಜೊತೆಗೆ ರಾಜ್ ಅವರ ಮನೆಯ ಹಲವು ಚಿತ್ರಗಳನ್ನು ಸಹ ಸಮಂತಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಗ್ಗೆ ಮತ್ತೆ ಮಾತನಾಡಿದ ಸಮಂತಾ
ರಾಜ್ ನಿಧಿಮೋರು ಜನಪ್ರಿಯ ನಿರ್ದೇಶಕ ಆಗಿದ್ದಾರೆ. ಮೊದಲು ಕಾಮಿಡಿ ಶೋಗೆ ಡಿಕೆ ಕೃಷ್ಣ ಜೊತೆ ಜೊತೆಗೆ ಚಿತ್ರಕತೆ, ಸ್ಕಿಟ್ಸ್ ಗಳನ್ನು ಬರೆಯಲು. ಇವರ ಜೋಡಿ ‘ರಾಜ್ ಆಂಡ್ ಡಿಕೆ’ ಎಂದೆಂದಿಗೂ ಖ್ಯಾತವಾಗಿತ್ತು. ರಾಜ್ ಮತ್ತು ಡಿಕೆ ಕೆಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಚಿತ್ರಕತೆಗಳನ್ನು ಬರೆದಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಗ್ಯಾನ್ಸ್ ಆಂಡ್ ಗುಲಾಬ್ಸ್’ ವೆಬ್ ಸರಣಿಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಕೆಲವು ವೆಬ್ ಸರಣಿಗಳ ಮೇಲೆ ನಿರ್ಮಾಪಕರಾಗಿ ಬಂಡವಾಳ ಸಹ ಹಾಕಿದ್ದಾರೆ.
ರಾಜ್ ನಿಧಿಮೋರು, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ಸಮಯದಲ್ಲಿ ಸಮಂತಾ ಪರಿಚಯಕ್ಕೆ ಬಂದಿದ್ದರು. ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಂದಹಾಗೆ ರಾಜ್ ನಿಧಿಮೋರುಗೆ ಮದುವೆ ಆಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ರಾಜ್‌ಗೆ ಇನ್ನೂ ವಿಚ್ಛೇದನ ಸಹ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ