ಆರೆಸ್ಸೆಸ್‌ ಬಗ್ಗೆ ಮಾತಾಡಿ ಸ್ವಪಕ್ಷದಲ್ಲೇ ಪ್ರಿಯಾಂಕ್ ಖರ್ಗೆ ಒಂಟಿಯಾಗಿದ್ದಾರೆ: ರಮೇಶ್ ಜಿಗಜಿಣಗಿ | Mp Ramesh Jigajinagi Slams Priyank Kharges Rss Statement Remark

ಆರೆಸ್ಸೆಸ್‌ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಂಸದ ರಮೇಶ ಜಿಗಜಿಣಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಖರ್ಗೆಯವರು ಪಾಪ ಮಾಡಿದ್ದು, ಜನರಲ್ಲಿ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯಪುರ (ಅ.22): ದೇಶ ಸೇವೆಯನ್ನೇ ಉಸಿರಾಗಿಸಿಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ದೊಡ್ಡ ಪಾಪ ಮಾಡಿದ್ದು, ಸ್ವಪಕ್ಷದಲ್ಲಿಯೇ ಒಂಟಿಯಾಗುವಂತಾಗಿದ್ದಾರೆ. ಇನ್ನಾದರೂ ಪಾಪಕ್ಕೆ ಪ್ರಾಯಶ್ಚಿತ್ತಪಟ್ಟು ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಆರೆಸ್ಸೆಸ್‌ ಬಗ್ಗೆ ನೆಹರು ಶ್ಲಾಘಿಸಿದ್ದರು:

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂಘ ಪರಿವಾರದ ಕಾರ್ಯದಕ್ಷತೆ, ಸೇವಾ ಮನೋಭಾವವನ್ನು ಶ್ಲಾಘಿಸಿದ್ದನ್ನು ಪ್ರಿಯಾಂಕ್ ಖರ್ಗೆ ಮರೆತಂತೆ ಕಾಣುತ್ತಿದೆ. ಸಂಘ ಪರಿವಾರಕ್ಕೆ ಅಗೌರವ ತೋರುವ ಪ್ರಿಯಾಂಕ್‌ಗೆ ಪಕ್ಷದಲ್ಲಿಯೇ ಬೆಂಬಲ ಇಲ್ಲ. 

ಇದನ್ನೂ ಓದಿ: ಸಂವಿಧಾನ, ಕಾನೂನು ಪಾಠ ಮಾಡುವ ಖರ್ಗೆ ಚಿತ್ತಾಪುರ ಗೋ ಹಂತಕರ ಕೇಸ್ ಪಾಪಸ್ ಪಡೆದಿದ್ದೇಕೆ? ಆರ್ ಅಶೋಕ್ ಕಿಡಿ

ಸಚಿವ ಸಂಪುಟದಿಂದ ವಜಾಗೊಳಿಸಿ:

ಅವರ ಹೇಳಿಕೆಯನ್ನೂ ಯಾರೂ ಸಮರ್ಥಿಸಿಕೊಂಡಿಲ್ಲ. ಮುಗ್ದ ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಮೊದಲು ಸಂಘ ಪರಿವಾರದ ಬಗ್ಗೆ ಅಗೌರವ ತೋರಿದ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಿ ಎಂದು ಆಗ್ರಹಿಸಿದ್ದಾರೆ.

Source link

Leave a Reply

Your email address will not be published. Required fields are marked *