Headlines

Horoscope Today 22 October : ದೀಪಾವಳಿ ಹಬ್ಬದಂದು ಯಾರಿಗೆ ಶುಭ, ಯಾರಿಗೆ ಅಶುಭ? ನಿಮ್ಮ ರಾಶಿ ಭವಿಷ್ಯ ಇಲ್ಲಿದೆ

Horoscope Today 22 October : ದೀಪಾವಳಿ ಹಬ್ಬದಂದು ಯಾರಿಗೆ ಶುಭ, ಯಾರಿಗೆ ಅಶುಭ? ನಿಮ್ಮ ರಾಶಿ ಭವಿಷ್ಯ ಇಲ್ಲಿದೆ


ಶಾಲಿವಾಹನ ಶಕೆ 1848ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ವಾರ್ಷಿಕ : ಶರದ್, ಚಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ವಿಶಾಖ, ಯೋಗ : ವೈಧೃತಿ, 1 ಕರಣ : ಕಿ,6, 1 ಕರಣ : ಕಿರೀಟ ಸೂರ್ಯಾಸ್ತ – 05 – 56 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:04 – 13:32, ಗುಳಿಕ ಕಾಲ 10:36 – 12:04, ಯಮಗಂಡ ಕಾಲ 07:40 – 09:08.

ಇಂದಿನಿಂದ ಕಾರ್ತಿಕ ಮಾಸ ಆರಂಭವಾಗಲಿದೆ, ದೇವರಿಗೆ ತೈಲದೀಪವನ್ನು ಸಂಕಲ್ಪಪುರಸ್ಸರವಾಗಿ ಬೆಳಗಿ. ಧೈರ್ಯ ವೃದ್ಧಿ, ರೋಗನಾಶ, ಭಯ ನಿವಾರಣೆ, ಸಂತಾನದೋಷದಿಂದ ಮುಕ್ತಿ, ಜ್ಞಾನಕ್ಕೆ ಪರಿಹಾರ ಎಲ್ಲವೂ ಸಿಗಲಿದೆ.

ಮೇಷ ರಾಶಿ: :ಖಾಲಿ ಕುಳಿತುಕೊಳ್ಳದೇ ಏನನ್ನಾದರೂ ಮಾಡಿ. ಪರರ ದೃಷ್ಟಿಯಿಂದ ಕೆಳಹಂತಕ್ಕೆ ಹೋಗುವುದು ಬೇಡ. ಇನ್ನೊನ್ಬರ ಮಾತಿಗೆ ಮಣಿದು ಏನನ್ನಾದರೂ ಮಾಡಿ ತೊಂದರೆಪಡುವುದು ಬೇಡ. ಸರಿ ಎನಿಸಿದರೆ ಒಪ್ಪಿ, ಇಲ್ಲವಾದರೆ ಮುನ್ನಡೆಯಿರಿ. ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡುತ್ತಾರೆ. ನಿಮಗೆ ಇಂದು ನೀವು ಮಾಡುವ ಕೆಲಸದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯೂ ನಿಮಗೆ ಲಭ್ಯವಾಗುವುದು. ಅಬಾಧಿತ ಸತ್ಯವನ್ನು ಹೇಳುವುದು ಕಷ್ಟ. ಅಮೂಲ್ಯ ಸಂಪತ್ತನ್ನು ಪ್ರದರ್ಶಿಸುವುದು ಬೇಡ. ನೀವು ಅಧ್ಯಾತ್ಮದಿಂದ ಹೆಚ್ಚು ಪ್ರಭಾವಿತರಾಗಿದ್ದೀರಿ. ನಿಮ್ಮ ಚಂಚಲ ಮನಸ್ಸಿನಿಂದ ಮಾಡಿದ ನಿರ್ಧಾರವು ಕುಟುಂಬಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು. ಅತಿಯಾದ ಭೋಜನವು ನಿಮಗೆ ಸಂಕಟ ಕೊಟ್ಟಿತು. ತಾಯಿಯ ಕಡೆಯ ಬಂಧುಗಳ ಸಹಾಯದಿಂದ ನೀವು ಸ್ವಂತ ವಾಹನವನ್ನು ಖರೀದಿಸಿ. ಗಂಭೀರವಾದ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ. ಉದ್ಯೋಗಕ್ಕೆ ಸೇರಿ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳು ಮನೆಗೆ ಗೊತ್ತಿಲ್ಲದೇ ಸಾಲ ಮಾಡುತ್ತಾರೆ.

ವೃಷಭ ರಾಶಿ: :ಪ್ರಯಾಣದಲ್ಲಿ ಆಗಾಗ ಭಯ, ಬೇಸರಗಳು ಬರಲಿವೆ. ನಿಮ್ಮ ತಾಳ್ಮೆಯು ದೌರ್ಬಲ್ಯದ ಸಂಕೇತವಾಗಿದೆ. ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ನೀವಾಡುವ ಮಾತುಗಳಿಗೆ ಕುಟುಂಬವು ಉತ್ತರಿಸಬೇಕಾದೀತು. ಕೆಲವು ತೀರ್ಮಾನಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನೀವು ಇಂದು ನಿಮ್ಮ ಬಳಿ ಇರುವ ಸಂಪತ್ತನ್ನು ತೋರಿಸುವುದು ಬೇಡ. ದೇಹವನ್ನು ಹೆಚ್ಚು ದಂಡಿಸಬೇಕಾಗುವುದು. ಸಂಗಾತಿಯ ವ್ಯವಹಾರದ ಮೇಲೆ ಪೂರ್ಣ ನಂಬಿಕೆ ಬರದು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ. ಕಛೇರಿಯ ವ್ಯವಹಾರವನ್ನು ಅಲ್ಲಿಯೇ ಬಿಟ್ಟು ಬನ್ನಿ. ಸ್ನೇಹಿತರಿಗಾಗಿ ಧನವು ನಷ್ಟವಾಗುವುದು. ಯಾರದೋ ಮೇಲಿನ ಭಯದಿಂದ ಗೌಪ್ಯ ವಿಚಾರವನ್ನು ಹೇಳುತ್ತಾರೆ. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಿಮ್ಮ ಸ್ವೇಚ್ಛೆಗೆ ಭಂಗವಾಗುವುದನ್ನು ನೀವು ಸಹಿಸಲಾರಿರಿ.

ಮಿಥುನ ರಾಶಿ: :ಸಮಯ ಹೊಂದಿಸುವ ಮೂಲಕ ಇಂದಿನ ಎಲ್ಲ ಕಾರ್ಯವನ್ನೂ ಅವಧಿಗಿಂತ ಮೊದಲೇ ಮುಕ್ತಾಯ ಮಾಡಬಹುದು. ಕೆಲವು ಅವಕಾಶಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು. ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ದೊರೆಯುತ್ತದೆ. ಆರ್ಥಿಕತೆಯ ಕಾರಣಕ್ಕಾಗಿ ನೀವು ಹೆಚ್ಚು ಆತಂಕ ಪಡುವಿರಿ. ಯಂತ್ರೋಪಕರಣಗಳ ದುರಸ್ತಿಯನ್ನು ಮಾಡಿಸುವಿರಿ. ದಾಯಾದಿದಗಳ ಕಲಹವೂ ನಿಮ್ಮ ಅನಾರೋಗ್ಯಕ್ಕೆ ಪೂರಕವಾಗಿರುವುದು. ಸ್ಮರಣಶಕ್ತಿಗೆ ಬಾಧೆಯುಂಟಾಗುವುದು. ನಿಮ್ಮ ಉತ್ಸಾಹಕ್ಕೆ ಭಂಗವಾಗುವ ಸನ್ನಿವೇಶವು ನಿಮ್ಮ ಕಣ್ಣೆದುರಿಗೆ ನಡೆಯುವುದು. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ತೆಗೆಯಬೇಕಾದೀತು. ಮುಖಂಡರ ಬಗ್ಗೆ ನಿಮಗೆ ಪೂರ್ಣತೃಪ್ತಿ ಇರದು. ದೃಷ್ಟಿಯಲ್ಲಿ ದೋಷವು ಕಾಣಿಸಿಕೊಳ್ಳಬಹುದು. ನಿಮ್ಮ ಆರೋಗ್ಯ ಸಮಸ್ಯೆ ಆಪ್ತರ ಜೊತೆ ಹೇಳಿಕೊಳ್ಳಿ. ನಿಮ್ಮದೇ ಆದ ಯೋಜನೆಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ದಾಂಪತ್ಯದ ಸುಖದಲ್ಲಿ ಮರೆಯದಿರಿ. ಬೇಕಾದ ವಸ್ತುಗಳನ್ನು ಮುಚ್ಚುಮರೆಯಿಲ್ಲದೇ ಪಡೆಯುವಿರಿ.

ಕರ್ಕಾಟಕ ರಾಶಿ: : ಸಾರ್ವಜನಿಕರ ಸಂಪತ್ತನ್ನು ಬಿಟ್ಟುಕೊಡುವ ಅನಿವಾರ್ಯತೆ ಬರಲಿದೆ. ನಿಮಗೆ ಧೈರ್ಯವನ್ನು ಕೊಡುವುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ ದುರಭ್ಯಾಸದ ಕಾರಣದಿಂದ ಎಲ್ಲರ ಎದುರು ಮಾನವನನ್ನು ಕಳೆದುಕೊಳ್ಳಬೇಡಿ. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದವು ಬರಬಹುದು. ನಿಮ್ಮ ನಿರುದ್ಯೋಗದ ಸಮಸ್ಯೆ ಸರಿ ಮಾಡಿಕೊಳ್ಳುವಿರಿ. ಬಂಧುಗಳು ಇಂದು ಹಣದಿಂದ ನಿಮ್ಮನ್ನು ಅಳೆಯುವರು. ವೃತ್ತಿಯಲ್ಲಿ ತೊಡಗಿದವರು ಬಡ್ತಿಯನ್ನು ನೀಡುವಂತೆ ಒತ್ತಾಯಿಸಬಹುದು. ನಿಮ್ಮದೇ ಆದ ವ್ಯಕ್ತಿತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ನಿಮ್ಮ ಬಳಿ ಇಲ್ಲದಿರುವದರಿಂದ ಕೇಳಿ, ಕೊಟ್ಟರೆ ಮಾತ್ರ ಪಡೆಯಿರಿ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ಆಸ್ಥೆಯು ಅಧಿಕವಾಗಿದ್ದು ಮಾರ್ಗವನ್ನು ನೀವು ನಿರೀಕ್ಷಿಸುವಿರಿ. ಯಾವುದನ್ನೂ ಅತಿಯಾಗಿ ಮಾಡಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿರುವ ಲಾಭವು ಇರುವುದು.

ಸಿಂಹ ರಾಶಿ: : ಗಂಭೀರ ನಟನೆಗೆ ನಿಮಗೆ ವಿವಿಧ ಅವಕಾಶ ಬರಲಿದೆ. ಜಡಕನ್ನು ಬಿಡಿಸಲು ತಾಳ್ಮೆ ಬೇಕು, ಇಲ್ಲವೋ ಅದನ್ನು ಬಿಡುವುದೇ ಒಳ್ಳೆಯದು. ವಾಹನವನ್ನು ಚಲಿಸುವಾಗ ಯಾವದೇ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಯಾರಾದರೂ ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳುವಿರಿ. ಸಾಲವಾಗಿ ನೀಡಿದ ಹಣವನ್ನು ಹಿಂಪಡೆಯಲು ಕಷ್ಟವಾಯಿತು. ಸಂಗಾತಿಯನ್ನು ನೀವು ಅಲಕ್ಷಿಸುವಿರಿ. ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸಿ. ಎಲ್ಲ ಕಾರ್ಯವನ್ನೂ ನೀವೇ ಮಾಡಲಾಗದು. ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳಳ್ಳುವಿರಿ. ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ವಿಪರೀತ ಜಿಜ್ಞಾಸೆಯೂ ನಿಂದನೆಗೊಳಪಡುವುದು. ಹಣವನ್ನು ಗಳಿಸಬೇಕು ಎಂಬ ಹಂಬಲವು ಅಧಿಕವಾಗಿರುತ್ತದೆ. ನಿಮ್ಮ ಮಾತು ನಡೆಯದ ಕಡೆ ಮೌನದಿಂದ ಇರುವುದು ಒಳ್ಳೆಯದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲಾ ಪ್ರಾರಬ್ಧ ಎಂದು ಸುಮ್ಮನಾಗದೆ ಭಿನ್ನವಾಗಿ ಯೋಚಿಸಿ.

ಕನ್ಯಾ ರಾಶಿ:: ಸೂಕ್ತವಾದ ದಾಖಲೆಗಳಿಲ್ಲದೆ ನಿಮ್ಮ ಮಾತು ಸೋಲುವುದು. ಸಮಯಪಾಲನೆ ಕೆಲವರಿಗೆ ಕಿರಿಕಿರಿ. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ನಿಮ್ಮ ಉದ್ಯಮದ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಲಿದೆ. ಸಮಾಜಮುಖೀ ಕಾರ್ಯಗಳನ್ನು ಯಾವದೇ ಫಲಾಪೇಕ್ಷೆ ಇಲ್ಲದೆ ಮಾಡುವಿರಿ. ತಲೆ ಗಟ್ಟಿಯಾಗಿದೆ ಎಂದು ಬಂಡೆಗೆ ಕುಟ್ಟಲಾಗದು. ನಿಮ್ಮ ತಾಳ್ಮೆಯು ಕಡಿಮೆ ಆದಂತೆ ತೋರುವುದು. ನಿಮ್ಮ ಗುಣಗಳನ್ನು ದುರುಪಯೋಗ ಮಾಡಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೆ ಇದ್ದಕ್ಕೆ ಅವರು ಬೇಸರಿಸುತ್ತಾರೆ. ನಿಮ್ಮ ಹೊಸ ಉದ್ಯೋಗಕ್ಕೆ ಎದುರಾಗುವ ಸವಾಲುಗಳನ್ನು ಚರ್ಚಿಸಿ ಪರಿಹಾರವನ್ನು ನಿಲ್ಲಿಸುವಿರಿ. ಏನೇ ಆದರೂ ಆತ್ಮಗೌರವ ಕಡಿಮೆಯಾಗದಂತೆ ನೋಡಿಕೊಳ್ಳಿ. ಸೋಮಾರಿತನವು ನಿಮ್ಮ ಶತ್ರುವಾಗಬಲ್ಲದು. ಸರ್ಕಾರಿ ಉದ್ಯೋಗಿಗಳ ಆದಾಯವು ಹೆಚ್ಚಾಗಲಿದೆ. ನಿರಾಧಾರವಾದ ನಿಮ್ಮ ದೂರು ಬಿದ್ದು ಹೋಗುವುದು. ಸಾಮರ್ಥ್ಯವನ್ನು ಉಪಯೋಗಿಸುವಲ್ಲಿ ಉಪಯೋಗಿಸಿ.

ತುಲಾ ರಾಶಿ: : ಮಾತಿನ ಒಳ ಮರ್ಮ ಮನಸ್ಸಿಗೆ ಬಾರದೇ ಕಲಹ. ಸ್ವಾವಲಂಬನೆಯು ಮನಸ್ಸಿನಲ್ಲಿ ಎಣಿಸಿದಕೂಡಲೇ ಬರುವುದಲ್ಲ. ಹಂತಹಂತವಾಗಿ ಅತ್ತ ಸಾಗಬೇಕು. ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಮಾನಸಿಕ ಸ್ಥಿತಿ ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಮನೆಯಲ್ಲಿ ಹಿರಿಯರಾದ ಕಾರಣ ನೀವು ಹೆಚ್ಚು ಬೈಗುಳಕ್ಕೆ ಸಿಲುಕುವಿರಿ. ಹೋದ ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿ ಇರದು. ಪ್ರೀತಿಯನ್ನು ನಿಮ್ಮ ನಿಯಂತ್ರಣಕ್ಕೆ ತಂದುಕೊಳ್ಳಲಾಗದು. ನೀವು ಕರ್ತವ್ಯವನ್ನು ಬಿಡದೇ ಕೈಯ್ಯಲ್ಲಿ ಆಗುವ ಕೆಲಸವನ್ನು ಮಾಡಿ. ಎಲ್ಲವೂ ಅನುಕೂಲಕರವಾಗಿದೆ ಎಂದು ಹೇಳಬಹುದು. ಹಿರಿಯರ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ. ಮೋಜಿನ ಹೆಚ್ಚಿನ ಸಮಯ ಕಳೆದುಹೋಗಲಿದೆ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರಿಂದ ಭೀತಿಯು ನಿಮಗೆ ಆಗುವುದು. ವಾಹನ ಸಂಚಾರಕ್ಕೆ ತಡೆಯಬಹುದು.

ವೃಶ್ಚಿಕ ರಾಶಿ: : ತಾನಾಗಿಯೇ ಬರುವ ವಿಶ್ವಾಸದಿಂದ ಬಾಂಧವ್ಯ ಗಟ್ಟಿ. ಕೃತಕತೆಯಿಂದ ಇರುವ ಪ್ರೀತಿಯನ್ನೂ ಕಳೆದುಕೊಳ್ಳುವಿರಿ. ಬೇರೆಯವರ ಮುಖಾಂತರ ಪುಣ್ಯಸ್ಥಳಗಳಿಗೆ ಹೋಗಿಬರುವಿರಿ. ನೀವು ನೋಡಲಷ್ಟೇ ಸುಂದರವಾಗಿದ್ದರೂ ಸಾಲದು. ಕುಟುಂಬದಲ್ಲಿ ಪರಸ್ಪರ ಸಹಬಾಳ್ವೆಯು ಎದ್ದು ತೋರುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿಯು ಇರುವುದು. ವಿದೇಶದ ವ್ಯಾಪಾರವು ಹದತಪ್ಪುವ ಸಾಧ್ಯತೆಯಿದೆ. ಸಂಸ್ಥೆಗೆ ಮುಖ್ಯಸ್ಥರು ಮಾಡುತ್ತಾರೆ. ಹಣದ ಉಳಿಕೆಗೆ ನೀವು ಕಾನೂನು ರೀತಿಯ ಕ್ರಮವನ್ನು ಅನುಸರಿಸಬಹುದು. ಹಣದ ಕಾರಣಕ್ಕೆ ವಂಚನೆಯಲ್ಲಿ ಬೀಳುವಿರಿ. ಕ್ರಯ ಹಾಗೂ ವಿಕ್ರಯಗಳ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸಾಕಷ್ಟು ವಿದ್ಯಾಭ್ಯಾಸಕ್ಕೆ ಅನನುಕೂಕತೆ ಸೃಷ್ಟಿ. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ಸಿಕ್ಕುವ ಯಶಸ್ಸನ್ನು ಹೃದಯದಲ್ಲಿ ಧರಿಸಲು ಯತ್ನಿಸಿ. ತಲೆಗೇರಿದರೆ ಅಪಾಯ.

ಧನು ರಾಶಿ: : ಮನಸ್ಸಿಗೆ ಒಪ್ಪಿಗೆಯಾದವರನ್ನು ಯಾವ ಸಂದರ್ಭದಲ್ಲಿಯೂ ಬಿಟ್ಟುಕೊಡಲಾರಿರಿ. ಸಾಲವನ್ನು ವಸೂಲಿ ಮಾಡಲು ಯಾರನ್ನಾದರೂ ಸಾಲ ಕೊಟ್ಟವರು ಕಳುಹಿಸಬಹುದು. ಯಾವದೂ ನೀವಂದುಕೊಂಡಷ್ಟು ಸುಲಭವಾಗಿ ಆಗದು ಮನವರಿಕೆ ಆಗುವುದು. ಬೇರೆಯವರ ಮೇಲೆ ದೋಷಗಳ ಪಟ್ಟಿಯನ್ನೇ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಮತ್ತಷ್ಟು ಬರಲಿದೆ. ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಮನೆಯ ಬಾಗಿಲಿಗೆ ಅಪರಿಚಿತರ ಹಾವಳಿ ಹೆಚ್ಚಾಗುವುದು. ಸಂಗಾತಿಯ ಮಾತು ನಿಮ್ಮೊಳಗೆ ನಾಟಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಂದೆಯಿಂದ ಸಹಾಯವನ್ನು ಪಡೆದುಕೊಳ್ಳಿ. ಸಾಲದ ವಿಚಾರದಲ್ಲಿ ಹೆಚ್ಚಿನ ತಿಳಿವಳಿಕೆ ಅಗತ್ಯ. ನಿಮ್ಮ ಚರಾಸ್ತಿಯ ಮೌಲ್ಯ ಅಧಿಕವಾಗಲಿದ್ದು, ಜಾಗರೂಕತೆ ಬೇಕು. ರಕ್ಷಣೆಯ ಕ್ರಮವೂ ಗೊತ್ತಿರಲಿ. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ನಿಮಗೆ ಬೇಕಾದವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನೀವು ವಹಿಸಿಕೊಂಡ ಕಾಮಗಾರಿಯ ಬಗ್ಗೆ ಪೂರ್ಣ ವಿಶ್ವಾಸ ಬರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದದ್ದು ಗೊತ್ತಾಗದೇ ಹೋಗಬಹುದು.

ಮಕರ ರಾಶಿ; : ಅನಾರೋಗ್ಯವನ್ನು ಅನುಭವಿಸದೇ ಕರ್ಮ ಎಂದುಕೊಳ್ಳದೇ ವೈದ್ಯಕೀಯ ಚಿಕಿತ್ಸೆಗೂ ಮನಸ್ಸು ಮಾಡಿ. ನಿಮ್ಮ ದೇಹದ ಸೂಕ್ಷ್ಮಪ್ರದೇಶಗಳ ಬಗ್ಗೆ ಎಚ್ಚರವಿರಲಿ. ಶಸ್ತ್ರಗಳಿಂದ ಘಾಸಿಯಾಗುವ ಸಾಧ್ಯತೆಯಿದೆ. ಪ್ರೇಮಕ್ಕೆ ಮಿತ್ರರಿಂದ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳಿಂದಲೂ ಸಾಲವನ್ನು ಪಡೆಯಬೇಕಾಗಬಹುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತವಾಗಿಸಿಕೊಳ್ಳಿ. ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗಬಹುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ತಂದೆ ತಾಯಿಯರನ್ನು ಇಂದು ಸಂತೋಷಪಡಿಸುವಿರಿ. ಏಕಾಂಗಿ ಇರುವುದು ನಿಮಗೆ ಇಷ್ಟವಾಗದೇ ಇರಬಹುದು. ದೊಡ್ಡ ಸಂಭ್ರಮದ ಸಮಾರಂಭಗಳಿಗೆ ಭಾಗವಹಿಸಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡಲ್ಲಿ ಹೋಗಬಹುದು.

ಕುಂಭ ರಾಶಿ:: ಮನೆಯ ಸುಂದರೀಕರಣಕ್ಕೆ ಎಲ್ಲರ ಸಹಕಾರ ಪಡೆಯಿರಿ. ಎಲ್ಲಾದರೂ ಕಾರ್ಯದ ಪ್ರಗತಿಯನ್ನು ಪಡೆದುಕೊಳ್ಳಿ. ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡಿ. ಕೆಲಸದ ಕೆಲಸವು ನಿಮಗೆ ಸಾಕೆನಿಸಬಹುದು. ಸಮಾಧಾನದ ಚಿತ್ತವು ಅನೇಕ ಸಂಗತಿಗಳಿಗೆ ಪೂರಕ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷಿಸುವುದು ಸೂಕ್ತವಲ್ಲ. ನಿಮ್ಮ ಬಲದ ಪ್ರದರ್ಶನವನ್ನು ಮಾಡಬೇಕಾದೀತು. ಕಾರ್ಯಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಸಡಿಲಿಕೆ ಬೇಡ. ನಿಮ್ಮ ಗುರಿಯು ಬದಲಾಗಬಹುದು. ಆಲಸ್ಯವು ನಿಮ್ಮನ್ನು ಅನ್ಯ ಕಾರ್ಯಕ್ಕೆ ಪ್ರೇರೇಪಿಸುವುದು. ಒಂಟಿಯಾಗಿ ಇರುವಾಗ ಪ್ರಾಣಿಗಳಿಂದ ನಿಮಗೆ ಭೀತಿಯು ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬಹುದು. ವೃತ್ತಿಶೀಲರು ತಮ್ಮ ಅತಿಮಾನುಷರಂತೆ ತೋರ್ಪಡಿಸುವವರು. ಅಚ್ಚುಕಟ್ಟಾದ ಕಾರ್ಯದಿಂದ ಅಧಿಕಾರಿಗಳ ಮನಸ್ಸನ್ನು ಗೆಲ್ಲುವಿರಿ.

ಮೀನ ರಾಶಿ:: ಉದ್ದೇಶ ಶುದ್ಧವಿದ್ದರೂ ಬೆಂಬಲ ಸಿಗುವುದೆಂಬ ಭ್ರಮೆ ಬೇಡ. ನಿಮ್ಮನ್ನು ಕಂಡರೆ ಆಗದವರ ಎದುರೇ ನೀವು ಗರ್ವದಿಂದ ಇರುವಿರಿ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗೆ ಇರಬೇಕಾಗುವುದು. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸುತ್ತಾರೆ. ಸೌಂದರ್ಯಕ್ಕೆ ಇಂದು ಬೆಲೆಕೊಡಲಾಗಿದೆ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ನಿಮ್ಮ ಕಾರ್ಯಕ್ಕೆ ಅಡ್ಡಿಬಂದರೆ ಆ ಕಾರ್ಯವನ್ನು ಮುಂದೂಡಲಾಗಿದೆ. ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಂಗತಿಗಳು ಬರಬಹುದು. ಸ್ವಂತ ವಾಹನದಿಂದ ದೂರ ಪ್ರಯಾಣವನ್ನು ಮಾಡುವಿರಿ. ಅಪರೂಪಕ್ಕೆ ಆಗುವ ಭೇಟಿಯೇ ಸಕಾರಾತ್ಮಕವಾಗಿರುವುದು. ನಿಮ್ಮ ನಗಿಸುವ ಸ್ವಭಾವವು ಕೆಲವರಿಗೆ ಇಷ್ಟವಾಗದು. ಮಾತು ನೇರವಾಗಿದ್ದರೂ ಮೃದುವಾಗಿರಲಿ. ಏನೇ ರಾಜಕೀಯದ ದಾಳ ಬಿಟ್ಟರೂ ಹಿರಿತನದ ಆಧಾರದ ಮೇಲೆ ಅಧಿಕಾರ ಪ್ರಾಪ್ತಿಯಾಗುವುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯುವಿರಿ. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ.

– ಲೋಹಿತ ಹೆಬ್ಬಾರ್ – 8762924271 (What’s app only)

ರಂದು ಪ್ರಕಟಿಸಲಾಗಿದೆ – 9:09 am, ಬುಧವಾರ, 22 ಅಕ್ಟೋಬರ್ 25



Source link

Leave a Reply

Your email address will not be published. Required fields are marked *