Headlines

ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹಭರಿತರಾಗಿರುತ್ತೀರಿ

ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹಭರಿತರಾಗಿರುತ್ತೀರಿ


ಸಹ ಎಲ್ಲಿಯೂ ಸಹ ಆಯಾಸಗೊಳ್ಳದೆ ದಿನವಿಡೀ ಚುರುಕುತನದಿಂದ (ಶಕ್ತಿಯುತ) ಇರಬೇಕು, ಅಂದುಕೊಂಡ ಕೆಲಸವನ್ನೆಲ್ಲಾ ಮಾಡಿ ಮುಗಿಸಬೇಕು ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಹೆಚ್ಚಿನವರು ಸ್ವಲ್ಪ ಕೆಲಸ ಮಾಡುವಷ್ಟರಲ್ಲಿ ಉಸ್ಸಪ್ಪಾ ತುಂಬಾನೇ ಸುಸ್ತಾಗ್ತಿದೆ ಎನ್ನುತ್ತಾರೆ, ಈ ಕೆಲಸವನ್ನೆಲ್ಲಾ ನಾಳೆ ಮಾಡಿದ್ರೆ ಆಯ್ತು ಎಂದು ಸೋಮಾರಿತನವನ್ನು ತೋರಿಸುತ್ತಾರೆ. ಹೀಗೆ ದೇಹ ಮತ್ತು ಮನಸ್ಸಿಗೆ ಜಡತ್ವ ಆವರಿಸಲು ಮುಖ್ಯ ಕಾರಣವೇ ಬೆಳಗ್ಗಿನ ಅಭ್ಯಾಸಗಳು. ಹೌದು ನೀವು ಬೆಳಗ್ಗೆ ಎದ್ದಾಗಲೇ ಜಡತ್ವ ಆವರಿಸಿದರೆ ಸಂಪೂರ್ಣ ದಿನವೇ ಜಡತ್ವದಿಂದ ಕೂಡಿರುತ್ತದೆ. ಇದರ ಬದಲಾಗಿ ನೀವು ಒಳ್ಳೆಯ ಅಭ್ಯಾಸಗಳನ್ನು ಪಾಲಿಸುವುದರಿಂದ ದಿನಪೂರ್ತಿ ಆಕ್ಟಿವ್ ಆಗಿರುವಿರಿ, ಫಟಾಫಟ್ ಅಂತ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಹಾಗಿದ್ರೆ ದಿನವಿಡೀ ಉತ್ಸಾಹಭರಿತರಾಗಿರಲು ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಎಂದು ತಿಳಿದುಕೊಳ್ಳಿ.

ದಿನವಿಡೀ ಉತ್ಸಾಹಭರಿತರಾಗಿರಲು ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು?

ನೀರು ಕುಡಿಯುವ ಮೂಲಕ ದೇಹವನ್ನು ನಿರ್ವಿಷಗೊಳಿಸಿ: ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಹೀಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ದೇಹಕ್ಕೆ ಉತ್ತಮವಾದ ಕ್ರಿಯೆ ಮತ್ತು ದೇಹವು ನಿರ್ವಿಷವಾಗುತ್ತದೆ. ಈ ಅಭ್ಯಾಸವು ದೇಹದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

10-15 ನಿಮಿಷಗಳ ಕಾಲ ಸ್ಟ್ರೆಚಿಂಗ್ ಅಥವಾ ಯೋಗ ಮಾಡಿ: ಬೆಳಿಗ್ಗೆ ಎದ್ದು ಲಘು ವ್ಯಾಯಾಮ ಅಥವಾ ಯೋಗ, ಧ್ಯಾನ ಮಾಡುವ ಅಭ್ಯಾಸವನ್ನು ತೆಗೆದುಕೊಳ್ಳಿ. ವ್ಯಾಯಾಮ ಮಾಡುವುದರಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ. ಇನ್ನೂ ಬೆಳಗ್ಗಿನ, ವ್ಯಾಯಾಮ ನಮ್ಯತೆಯನ್ನು ಸುಧಾರಿಸುತ್ತದೆ, ಸ್ನಾಯುಗಳ ಆಯಾಸವನ್ನು ನಿವಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಮೂಲಕ ನೀವು ದಿನವಿಡೀ ಆಕ್ಟಿವ್ ಆಗಿ ಇರಬಹುದು.

ಇದನ್ನೂ ಓದಿ

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ

ನಿಮ್ಮ ದಿನವನ್ನು ಸರಿಯಾದ ರೀತಿಯಲ್ಲಿ ಯೋಜಿಸಿ: ಬೆಳಗ್ಗೆ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು, ದಿನದಲ್ಲಿ ನೀವು ಮಾಡಿ ಮುಗಿಸಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ. ಯಾವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಯೋಜಿಸಿ. ಈ ಯೋಜನೆಯ ಪ್ರಕಾರ ಕೆಲಸ ಮಾಡಿದರೆ, ಆ ದಿನವೇ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಜೊತೆಗೆ ಈ ಅಭ್ಯಾಸ ಸಮಯ ನಿರ್ವಹಣೆಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಉತ್ಪಾದಕತೆಯನ್ನು ಹೊಂದಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *