ಡಿಜೆ ಹಳ್ಳಿ ಇನ್ಸ್​ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಚಿನ್ನು, ಮುದ್ದು ಚಾಟಿಂಗ್ ವೈರಲ್

ಡಿಜೆ ಹಳ್ಳಿ  ಇನ್ಸ್​ಪೆಕ್ಟರ್ ವಿರುದ್ಧ  ಅತ್ಯಾಚಾರ ಆರೋಪ: ಚಿನ್ನು, ಮುದ್ದು ಚಾಟಿಂಗ್ ವೈರಲ್


ಬೆಂಗಳೂರು, (ಅಕ್ಟೋಬರ್ 22): ಡಿ.ಜೆ.ಹಳ್ಳಿ ಪೊಲೀಸ್ ಠಾಣೆ (ಡಿಜೆ ಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್) ಇನ್ಸ್ ಪೆಕ್ಟರ್ ಸುನೀಲ್ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಮಹಿಳೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಸುನಿಲ್ ರಿಜಿಸ್ಟರ್ ಅವರು ನಂಬಿಸಿದ್ದು, 1 ವರ್ಷದಿಂದ 3 ಬಾರಿ ನ್ಯಾಯವಾಗಿ ಯಾರನ್ನು ಬಳಸಿದ್ದಾರೆ.ಅಲ್ಲದೇ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ನಮ್ಮ ವಿಚಾರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ಪೊಲೀಸ್ ಮಹಾನಿರ್ದೇಶಕರ ಮೊರೆ ಹೋಗಿದ್ದಾರೆ.

ಡಿ.ಜೆ.ಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಸುನೀಲ್ ಅವರು ಮದುವೆ ಆಗಿದ್ದಾರೆ ಎಂದು ನಂಬಿಸಿ ಒಂದು ವರ್ಷ 3 ಬಾರಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮನೆ ಕೊಡುಸ್ತೀನಿ, ಬ್ಯೂಟಿ ಪಾರ್ಲರ್ ಕೊಡಿಸುವುದಾಗಿ ಹೇಳಿ ತಮ್ಮ ಮನೆ ಹಾಗೂ ಹೋಟೆಲ್‌ಗೆ ಕರೆಸಿ ಅತ್ಯಾಚಾರವೆಸಗಿದ್ದಾರೆ. ಪ್ರತಿಬಾರಿ ವಿಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ. ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡಿದ್ದು, ನಮ್ಮ ವಿಚಾರ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅರ್ಜೆಂಟ್ ಮಗು ಬೇಕಂದ್ರೆ ಮೈದುನ ಜತೆ ಮಲಗು ಎಂದ ಅತ್ತೆ: ಮುಂದಾಗಿದ್ದು ದುರಂತ

ಇನ್ನು ಇನ್ಸ್ ಪೆಕ್ಟರ್ ಸುನಿಲ್ ಹಾಗೂ ಸಂತ್ರಸ್ತೆಯ ನಡುವಿನ ವಾಟ್ಸಪ್ ಚಾಟಿಂಗ್ ಬಯಲಿಗೆ ಬಂದಿದ್ದು, ಇದರಲ್ಲಿ ಇಬ್ಬರು ಅನ್ಯೋನ್ಯವಾಗಿ ಚಿನ್ನು ಮುದ್ದು ಎಂದು ಮೆಸೇಜ್ ಮಾಡಿದ್ದಾರೆ. ವಿಡಿಯೋ ಹಾಗೂ ವಾಯ್ಸ್ ಕಾಲ್ ಮಾಡಿದ್ದಾರೆ.

ಸದ್ಯ ಸಂತ್ರಸ್ತೆ ಮಹಿಳೆ, ಡಿಜಿ ಹಳ್ಳಿ ಇನ್ಸ್ ಪೆಕ್ಟರ್ ಸುನಿಲ್ ವಿರುದ್ಧ ಪೊಲೀಸ್ ಮಹಾನಿರ್ದೇಶಕರ ಕಚೇರಿ ಮೆಟ್ಟಿಲೇರಿದ್ದು, ಮುಂದೆ ಈ ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *