Headlines

ಬಿಗ್ ಬಾಸ್​ನಲ್ಲಿರೋ ಕೆನಡಾ ಹುಡುಗನ ಹಿಂದೆ ಬಿದ್ದ ರಾಶಿಕಾ-ಸ್ಪಂದನಾ; ಫೇಮ್ ಪಡೆಯಲು ಲವ್ ಸ್ಟೋರಿ?

ಬಿಗ್ ಬಾಸ್​ನಲ್ಲಿರೋ ಕೆನಡಾ ಹುಡುಗನ ಹಿಂದೆ ಬಿದ್ದ ರಾಶಿಕಾ-ಸ್ಪಂದನಾ; ಫೇಮ್ ಪಡೆಯಲು ಲವ್ ಸ್ಟೋರಿ?


ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಸಾಕಷ್ಟು ಲವ್ ಕಥೆಗಳು ಹುಟ್ಟಿಕೊಂಡಿವೆ. ಕೆಲವು ಯಶಸ್ಸು ಕಂಡರೆ, ಇನ್ನೂ ಕೆಲವು ಬಿಗ್ ಬಾಸ್ ಮನೆಯಲ್ಲಿ ಫೇಮ್ ಪಡೆಯಲು ಮಾತ್ರ ಸೀಮಿತವಾಗಿದೆ. ಬಿಗ್ ಬಾಸ್ ಆರಂಭ ಆಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಲವ್ ಸ್ಟೋರಿ ಹುಟ್ಟಿಕೊಂಡಿರಲಿಲ್ಲ. ಈಗ ಆ ರೀತಿಯ ಒಂದು ಕಥೆ ಆರಂಭ ಕಾಣುವ ಸೂಚನೆ ಸಿಕ್ಕಿದೆ.

ಬಿಗ್ ಬಾಸ್ ಮನೆಗೆ ಸೂರಜ್ ಸಿಂಗ್ ಎಂಟ್ರಿ ಆಗಿದೆ. ಅವರು ಕೆನಡಾದಲ್ಲಿ ಇದ್ದಾರೆ, ಈಗ ಭಾರತಕ್ಕೆ ಮರಳಿದ್ದಾರೆ. ಅವರು ತಮ್ಮ ಹ್ಯಾಂಡ್ಸಮ್ ಲುಕ್ನಿಂದ ಗಮನ ಸೆಳೆಯುವ ರೀತಿಯಲ್ಲಿ ಇದ್ದಾರೆ. ಈಗ ಅವರನ್ನು ನೋಡಿ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಆಕರ್ಷಿತ ಇದ್ದಾರೆ. ಅವರು ಬೇರಾರೂ ಅಲ್ಲ, ಸ್ಪಂದನ ಹಾಗೂ ರಾಶಿಕಾ. ಈ ವಿಚಾರ ಚರ್ಚೆ ಹುಟ್ಟುಹಾಕಿದೆ.

ಬಿಗ್ ಬಾಸ್‌ಗೆ ಬಂದ ದಿನವೇ ಸೂರಜ್ ಅವರು ಗುಲಾಬಿ ಹೂವನ್ನು ರಾಶಿಗೆ ನೀಡಿ, ‘ಅವರು ಕ್ಯೂಟ್ ಆಗಿ ಕಾಣಿಸುತ್ತಾರೆ’ ಎಂದರು. ಅಂದಿನಿಂದಲೂ ರಾಶಿಕಾ ಸೂರಜ್ ಅವರನ್ನು ಕಂಡಾಕ್ಷಣ ನಾಚುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಬಳಿ ಈ ವಿಚಾರವನ್ನು ರಾಶಿಕಾ ಮಾತನಾಡಿದ್ದಾರೆ.

ಇದನ್ನೂ ಓದಿ

‘ನಾನು ಬಿಗ್ ಬಾಸ್ ಮನೆಗೆ ಬರೋದಕ್ಕೂ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಬಂದಿತ್ತು. ಹ್ಯಾಂಡ್ಸಮ್ ಆಗಿದ್ದಾನೆ ಅಂತ ಪ್ರಾಫೈಲ್ ಚೆಕ್ ಮಾಡಿದೆ. ಇಲ್ಲಿ ಅವರನ್ನೇ ನೋಡಿದ ಬಳಿಕ ಫ್ಲ್ಯಾಶ್ ಆಯ್ತು’ ಎಂದು ಸೂರಜ್ ಬಗ್ಗೆ ಅಶ್ವಿನಿ ಹೇಳಿದ್ದಾರೆ. ‘ಯಾರಿಗೆ ಅವನು ಇಷ್ಟ’ ಎಂದು ಅಶ್ವಿನಿ ಅವರು ರಾಶಿಕಾ ಹಾಗೂ ಸ್ಪಂದನಾ ಬಳಿ ಪ್ರಶ್ನೆ ಮಾಡಿದರು. ‘ಇಬ್ಬರೂ ಲಿಸ್ಟ್‌ನಲ್ಲಿ ಇದ್ದಾರೆ’ ಎಂಬ ಮಾತು ಅಲ್ಲೇ ಕೇಳಿ ಬಂತು. ಆ ಬಳಿಕ ಅಶ್ವಿನಿ ಅವರು ‘ಇಷ್ಟು ದಿನ ಲವ್ ಟ್ರ್ಯಾಕ್ ಮಿಸ್ ಆಗ್ತಾ ಇತ್ತು’ ಎಂದರು.

ಇದನ್ನೂ ಓದಿ: ‘ಬಿಗ್ ಬಾಸ್ನಲ್ಲಿ ಅವಮಾನ ಆದರೆ ಅದನ್ನು ಮರೆತು ಮುಂದೆ ಹೋಗಲು ಸಾಧ್ಯವಿಲ್ಲ’; ಅಶ್ವಿನಿ ಗೌಡ ಕಣ್ಣೀರು

ಫೇಮ್ ಪಡೆಯಬೇಕು ಎಂದರೆ ಲವ್ ಸ್ಟೋರಿ ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ರಾಶಿಕಾ ಹಾಗೂ ಸ್ಪಂದನಾ ಈ ರೀತಿ ಆಲೋಚಿಸಬಹುದು ಎಂದು ನೋಡಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *