ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಿದ ವ್ಯಕ್ತಿ, ಒಂದು ಗಂಟೆಯಲ್ಲಿ ಎಲ್ಲವನ್ನು ಹಾಳು ಮಾಡಿದ ನೀರಿನ ಟ್ಯಾಂಕರ್

ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಿದ ವ್ಯಕ್ತಿ, ಒಂದು ಗಂಟೆಯಲ್ಲಿ ಎಲ್ಲವನ್ನು ಹಾಳು ಮಾಡಿದ ನೀರಿನ ಟ್ಯಾಂಕರ್


ಬೆಂಗಳೂರು, ಅ.22: ಒಳ್ಳೆಯ ಕೆಲಸ ಮಾಡುವವರಿಗೆ ಸಪೋರ್ಟ್ (ಬೆಂಗಳೂರು ಗುಂಡಿ ದುರಸ್ತಿ) ಮಾಡಬೇಕೇ ಹೊರತು ಕೆಟ್ಟದ್ದನ್ನು ಯಾರಿಗೂ ಬಯಸಬಾರದು, ಇಲ್ಲೊಂದು ಅಂಥಹದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲೊಬ್ಬ ತನ್ನ ಸ್ವಂತ ಖರ್ಚಿನಿಂದ ತಮ್ಮ ಏರಿಯಾದಲ್ಲಿ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ಆದರೆ ಗುಂಡಿ ಸರಿ ಮಾಡಿದ ಒಂದು ಗಂಟೆಯೊಳಗೆ ನೀರಿನ ಟ್ಯಾಂಕರ್ ಎಲ್ಲವನ್ನು ಹಾಳು ಮಾಡಿದೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಈ ವ್ಯಕ್ತಿ ಮಾಡಿದ್ದಾರೆ, ಆದರೆ ಆ ಕೆಲಸಕ್ಕೆ ಫಲ ಸಿಗುವ ಮೊದಲೇ ಎಲ್ಲವೂ ಹಾಳಾಗಿದೆ. ಇದರ ಜೊತೆ ಗುಂಡಿ ಮುಚ್ಚಲು ಮಾಡಿದ ಖರ್ಚು ವ್ಯರ್ಥವಾಗಿದೆ ಎಂದು ಹೇಳಿದ್ದಾರೆ. ಹೊಸದಾಗಿ ಹಾಕಲಾದ ಸಿಮೆಂಟ್ ರಸ್ತೆ ಮೇಲೆ ನೀರಿನ ಟ್ಯಾಂಕರ್ ಹೋಗಿ ಎಲ್ಲವು ಹಾಳಾಗಿದೆ ಎಂದು ಬೇಸರದಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಜನ ಯಾವತ್ತೂ ಸರಿಯಾಗುವುದಿಲ್ಲ ಎಂದು ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ನಗರವು ಎಂದಿಗೂ ಉತ್ತಮವಾಗುವುದಿಲ್ಲ ಎಂದು ಬೇಸರದಿಂದ ಈ ಪೋಸ್ಟ್ ಅನ್ನು ಪ್ರಕಟಿಸಲಾಗಿದೆ. ಪೋಸ್ಟ್‌ನಲ್ಲಿನ ಘಟನೆಯ ಬಗ್ಗೆ ಹೀಗೆ ವಿವರಿಸಲಾಗಿದೆ, “ನನ್ನ ಬೀದಿಯಲ್ಲಿರುವ ರಸ್ತೆಯ ರಸ್ತೆಗಳ ಸ್ವಂತ ಹಣದಿಂದ ಸರಿಯಾಗಲು ನಿರ್ಧರಿಸಿದೆ. ನೀವು ರಾತ್ರಿ ವೇಳೆ ರಸ್ತೆ ರಿಪೇರಿ ಮಾಡಬೇಕಾಗಿತ್ತು ಎಂದು ನನಗೆ ಗದರಿದ್ದಾರೆ” ಎಂದು ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಇದು ರಾಜ್ಯದ ದುಸ್ಥಿತಿ: ಹಳೆ ಸೋಫಾದಿಂದ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಜನ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಈ ನಗರವು ಎಂದಿಗೂ ಉತ್ತಮವಾಗುವುದಿಲ್ಲ byu/chimichangas_69 inbangalore

ಚಾಲಕನ ಮಾತಿನಿಂದ ಬೇಸರಗೊಂಡು, ನನ್ನ ಶ್ರಮ ಮತ್ತು ಹಣ ಎಲ್ಲವೂ ವ್ಯರ್ಥ, ಇದರೊಂದಿಗೆ ಭಾನುವಾರ ನನಗೆ ರಜೆ ಇತ್ತು. ಅದು ಕೂಡ ಹಾಳು, ನೀವು ಯಾವ ಕಾರಣಕ್ಕೂ ಸರಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಪೋಸ್ಟ್ ಅನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ಹಲವು ಬಳಕೆದಾರರೂ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೂರ್ಖರು ನಿಮ್ಮ ಕೆಲಸವನ್ನು ಎಂದಿಗೂ ಪ್ರಶಂಸಿಸುವುದಿಲ್ಲ. ಅವರ ಬಗ್ಗೆ ಯೋಚನೆ ಮಾಡಬೇಡಿ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ನೀವು ಒಳ್ಳೆಯ ವ್ಯಕ್ತಿ, ನಿಮ್ಮ ಈ ಶ್ರಮಕ್ಕೆ ಖಂಡಿತ ಫಲ ಸಿಗಬೇಕು. ನಿಮ್ಮಂತಹ ವ್ಯಕ್ತಿಗಳು ಸಿಗುವುದು ಕಷ್ಟ, ಹಾಗೆ ನಿಮ್ಮಂತೆ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಕ್ಷಮಿಸಿ ಗೆಳೆಯ, ನೀವು ಸರಿಯಾದ ಕೆಲಸ ಮಾಡಿದ್ದೀರಿ. ದುರದೃಷ್ಟವಶಾತ್ ತುಂಬಾ ಮೂರ್ಖರಿದ್ದಾರೆ. ನಿಮ್ಮ ಕೆಲಸಕ್ಕೆ ನನ್ನ ಗೌರವ ಇದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *