ಬೆಂಗಳೂರು, (ಅಕ್ಟೋಬರ್ 22):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಕಿ ಸಮವಸ್ತ್ರ ಧರಿಸಿದ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿಬಂದಿದೆ. ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆ ಸುನೀಲ್ ಅವರು ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 36 ವರ್ಷದ ಸಂತ್ರಸ್ತ ಮಹಿಳೆಯೊಬ್ಬರು ಡಿಜಿ ಮತ್ತು ಐಜಿಪಿ ಕಚೇರಿಗೆ ದೂರು ನೀಡಿದ್ದಾರೆ.
ದೂರುದಾರ ಮಹಿಳೆಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಇನ್ಸ್‌ಪೆಕ್ಟರ್ ಸುನೀಲ್ ಅವರು ಮದುವೆಯಾಗುವ ಆಮಿಷವೊಡ್ಡಿ ಕಳೆದ ಒಂದು ವರ್ಷದಿಂದ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ 3 ಬಾರಿ ಹೆಚ್ಚಾಗಿ ಬಳಸಿಕೊಂಡ ಮಹಿಳೆ ತಮ್ಮ ದೂರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಇನ್ಸ್ ಪೆಕ್ಟರ್ ಹಾಗೂ ಮಹಿಳೆ ನಡುವೆ ನಡೆದ ವಾಟ್ಸಪ್ ಚಾಟ್ ಬಯಲಿಗೆ ಬಂದಿದ್ದು, ಇಬ್ಬರೂ ವಿಡಿಯೋ, ವಾಯ್ಸ್ ಕಾಲ್ ಮಾತನಾಡಿದ್ದಾರೆ. ಫೋಟೋ,ವಿಡಿಯೋ ಹಂಚಿಕೊಂಡು ಮುದ್ದು ಚಿನ್ನ ಎಂದು ಆತ್ಮೀಯವಾಗಿ ಚಾಟಿಂಗ್ ಮಾಡಲಾಗಿದೆ. ಈ ಪ್ರಕರಣ ಗಂಭೀರ ಪ್ರಕರಣ ದಾಖಲಾಗಿರುವುದು ಇಲಾಖೆಗೆ ಮುಜುಗರ ತಂದಿದೆ.
ಹಣದ ಮೋಸದ ವಿಚಾರಕ್ಕೆ ಸ್ಟೇಷನ್ ಗೆ ಹೋದಾಗ ಆಯೇಶಾಳನ್ನ ಬಲೆಗೆ ಬೀಳಿಸಿಕೊಂಡಿದ್ದು, ವಾಟ್ಸಪ್ ಚಾಟಿಂಗ್ ಮೂಲಕ ಆಪ್ತರಾಗಿದ್ದಾರೆ. ಇನ್ಸ್ಕ್ಟರ್ ಸುನಿಲ್ ಮದುವೆಯಾಗಿದ್ದರೂ ಸಹ ಇದೀಗ ಈ ಮಹಿಳೆಯನ್ನು ಮದ್ವೆಯಾಗಿಸಲು ನಂಬಿಸಿ ಅದನ್ನು ಬಳಸಿದ್ದಾರೆ.