ಬೆಂಗಳೂರು, ಅಕ್ಟೋಬರ್ 22: ಚಿನ್ನದ ಬೆಲೆ (ಚಿನ್ನದ ದರ) ಏರಿಳಿಕೆ ಆಟ ನಡೆಯುತ್ತಿದೆ. ಹಳದಿ ಲೋಹದ ಬೆಲೆ ಗ್ರಾಮಕ್ಕೆ 500ಕ್ಕೂ ಹೆಚ್ಚು ರೂ ಹೆಚ್ಚು ಕಡಿಮೆಯಾಗಿದೆ. ಭಾರತದಲ್ಲಿ, ವಿದೇಶದಲ್ಲಿ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಂತೂ ಭರ್ಜರಿ ಇಳಿಕೆಯಾಗಿದೆ. ಇಂದು ಅದರ ಬೆಲೆ ಗ್ರಾಮಕ್ಕೆ ಬರೋಬ್ಬರಿ 8 ರೂಗಳಷ್ಟು ಕಡಿಮೆಯಾಗಿದೆ. 162 ರೂಗೆ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,16,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,200 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 16,200 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,16,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 16,390 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 22ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,720 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,660 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,540 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,720 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,660 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 163.90 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 11,660 ರೂ
- ಬೆಲೆ: 11,700 ರೂ
- ಮುಂಬೈ: 11,660 ರೂ
- ದೆಹಲಿ: 11,675 ರೂ
- ಕೋಲ್ಕತಾ: 11,660 ರೂ
- ಕೇರಳ: 11,660 ರೂ
- ಅಹ್ಮದಾಬಾದ್: 11,665 ರೂ
- ಜೈಪುರ: 11,675 ರೂ
- ಲಕ್ನೋ: 11,675 ರೂ
- ಭುವನೇಶ್ವರ್: 11,660 ರೂ
ಇದನ್ನೂ ಓದಿ: ದಾಖಲೆಗಳಿಲ್ಲದ ಒಡವೆ ಸೀಜ್; ಅಧಿಕಾರಿ ಮಾಡಿದ ತಪ್ಪು ಮತ್ತು ಹೆಂಡತಿ ದೆಸೆಯಿಂದ ಕೇಸ್ ಗೆದ್ದ ಬೆಂಗಳೂರಿಗ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 550 ರಿಂಗಿಟ್ (11,409 ರೂಪಾಯಿ)
- ದುಬೈ: 458.75 ಡಿರಾಮ್ (10,956 ರೂಪಾಯಿ)
- ಅಮೆರಿಕ: 128.50 ಡಾಲರ್ (11,270 ರೂಪಾಯಿ)
- ಸಿಂಗಾಪುರ: 165.90 ಸಿಂಗಾಪುರ ಡಾಲರ್ (11,212 ರೂಪಾಯಿ)
- ಕತಾರ್: 459 ಕತಾರಿ ರಿಯಾಲ್ (11,054 ರೂ)
- ಸೌದಿ ಅರೇಬಿಯಾ: 467 ಸೌದಿ ರಿಯಾಲ್ (10,921 ರೂಪಾಯಿ)
- ಓಮನ್: 48.65 ಒಮಾನಿ ರಿಯಾಲ್ (11,083 ರೂಪಾಯಿ)
- ಕುವೇತ್: 37.73 ಕುವೇತಿ ದಿನಾರ್ (10,797 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 163.90 ರೂ
- ಬೆಲೆ: 180 ರೂ
- ಮುಂಬೈ: 162 ರೂ
- ದೆಹಲಿ: 162 ರೂ
- ಕೋಲ್ಕತಾ: 162 ರೂ
- ಕೇರಳ: 180 ರೂ
- ಅಹ್ಮದಾಬಾದ್: 162 ರೂ
- ಜೈಪುರ: 162 ರೂ
- ಲಕ್ನೋ: 162 ರೂ
- ಭುವನೇಶ್ವರ್: 180 ರೂ
- ಪುಣೆ: 162
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ