ಬಾಗಲಕೋಟೆ, ಅಕ್ಟೋಬರ್ 22: ಪತಿ ಕಿರುಕುಳದಿಂದ ಬೇಸತ್ತು 3 ವರ್ಷದ ಮಗನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ (ಸಾವು) ಮಾಡಿಕೊಂಡಿರುವಂತಹ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ. ತಾಯಿ ಫಾತಿಮಾ(21) ಮತ್ತು ಪುತ್ರ ಅಬ್ದುಲ್ (3) ಮೃತರು. ಮಗಳ ಸಾವಿಗೆ ಪತಿ (ಗಂಡ) ಮಸ್ತಾನ್ ಸಾಬ್ ಕಿರುಕುಳವೇ ಕಾರಣ ಎಂದು ಫಾತಿಮಾ ಆರೋಪ ಮಾಡಿದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
8 ವರ್ಷದ ಹಿಂದೆ ಜಮೇಲಾ ಎಂಬ ಯುವತಿ ಮಸ್ತಾನ್ ಸಾಬ್ ಮದುವೆ ಆಗಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಪ್ರೀತಿಸಿ ವಿವಾಹವಾಗಿದ್ದರು. ಗ್ರಾಮಸ್ಥರ ಸಮ್ಮುಖದಲ್ಲೇ ಮದುವೆ ಆಗಿದ್ದ. ಇತ್ತೀಚೆಗೆ ಫಾತಿಮಾಳಿಗೆ ಪತಿ ಮಸ್ತಾನ್ ಸಾಬ್ ಹೆಚ್ಚು ಕಿರುಕುಳ ನೀಡುತ್ತಿದ್ದ ಆರೋಪ ಕೂಡ ಕೇಳಿಬಂದಿದೆ. ಪತಿ ಕಿರುಕುಳದಿಂದ ಬೇಸತ್ತು ಮೂರು ದಿನದ ಹಿಂದೆ ಫಾತಿಮಾ ತವರಿಗೆ ಬಂದಿದ್ದಳು. ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು ಪ್ರತ್ಯೇಕ ದೂರದಲ್ಲಿ ಉಲ್ಲೇಖಿಸಲಾಗಿದೆ.
ಮದುವೆಯಾದ 11 ತಿಂಗಳಿಗೆ ಸಾವಿನ ಮನೆ ಸೇರಿದ ಗೃಹಿಣಿ
11 ತಿಂಗಳಿನಿಂದ ನೂರಾರು ಕನಸುಗಳನ್ನು ಕಟ್ಟಿಕೊಂಡು ಮನೆಯವರು ನೋಡಿದ ಯುವಕನ ಜೊತೆ ದಾಂಪತ್ಯ ಜೀವನಕ್ಕೆ ಯುವತಿ ಕಾಲಿಟ್ಟಿದ್ದಳು. ಇನ್ನೊಂದು ತಿಂಗಳು ಕಳೆದಿದ್ದರೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಳ್ಳಬೇಕಿತ್ತು. ಆದರೆ ಅಷ್ಟರಲ್ಲಿ ಅತ್ತೆ ಮತ್ತು ಗಂಡನ ಕಿರುಕುಳು ಗೃಹಿಣಿ ವಿಡಿಯೋ ಮಾಡಿ ಆಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು.
ವೇಣು ಎಂಬುವವರ ಜೊತೆಗೆ ನವಂಬರ್ 2024 ರಲ್ಲಿ ಪುಷ್ಪಾಂಜಲಿ ಹಸೆಮಣೆ ಏರಿದ್ದಳು. ಆರಂಭದಲ್ಲಿ ಚೆನ್ನಾಗೆ ಇದ್ದ ಗಂಡ ನಂತರ ತನ್ನ ಮನೆಯವರ ಜೊತೆ ಸೇರಿಕೊಂಡು ಅಸಲಿ ಆಟ ಶುರುಮಾಡಿದ್ದು ನಿತ್ಯ ಹಣ, ನಿವೇಶನ ಬೇಕು ಅಂತ ಪುಷ್ಪಾಂಜಲಿಗೆ ಕಿರುಕುಳ ನೀಡಲು ಆರಂಭಿಸಿದನಂತೆ. ಜೊತೆಗೆ ಎಷ್ಟು ಹೇಳಿದರೂ ತವರು ಮನೆಯಿಂದ ಸೈಟ್ ತೆಗೆಸಿಕೊಡುತ್ತಿಲ್ಲ ಅಂತ ಕಳೆದ 9 ತಿಂಗಳಿನಿಂದ ಗೃಹಿಣಿಯ ಜೊತೆ ಸಂಸಾರ ಮಾಡುವುದನ್ನೇ ಬಿಟ್ಟಿದ್ನಂತೆ.
ಇದನ್ನೂ ಓದಿ: ಲೇಡಿ ವಾರ್ಡನ್ ಲವ್ವಿಡವ್ವಿ ಫೋಟೋ, ವಿಡಿಯೋ ಇಟ್ಟುಕೊಂಡಿದ್ದಕ್ಕೆ ಸಹಾಯಕ ಕೊಲೆಯಾದ್ನಾ?
ತಾಳಿ ಕಟ್ಟಿದ ಪತ್ನಿ ಅನ್ನೋದನ್ನು ನೋಡದೆ ಹೀನಾಯಮಾನವಾಗಿ ಪತ್ನಿ ಜೊತೆ ನಡೆದುಕೊಂಡ ಗಂಡನಿಂದ ಪತ್ನಿ ಸಾಕಷ್ಟು ಮನನೊಂದಿದ್ದು ಎರಡು ಮೂರು ಭಾರಿ ಮನೆಯವರಿಗೆ ಹೇಳಿದ್ದರಂತೆ. ಆದರೆ ಸಂಸಾರ ಅಂದ ಮೇಲೆ ಇದೆಲ್ಲ ಇರೋದೆ ಅಂತ ಮನೆಯವರೇ ಮಗಳಿಗೆ ಬುದ್ಧಿವಾದ ಹೇಳಿ ಕಳೆದ ತಿಂಗಳು ಗಂಡನ ಮನೆಗೆ ಕಳಿಸಿದ್ದರು. ಆದರೆ ಗಂಡನ ಮನೆಗೆ ಬಂದ ನಂತರವೂ ತಮ್ಮ ಹಳೆ ಚಾಳಿಯನ್ನ ಕುಟುಂಬಸ್ಥರು ಮುಂದುವರಿದಿದ್ದು, ಮನೆಯವರು ಕಿರುಕುಳ ತಾಳಲಾರದ ಪುಷ್ಪಾ ಕಾಲೇಜಿಗೆ ಕೆಲಸಕ್ಕೆ ಅಂತ ಹೋದವಳು ವಾಪಸ್ ಬಂದಿರಲಿಲ್ಲ. ಎಲ್ಲೆಡೆ ಹುಡುಕಾಡಿದ ಪೋಷಕರಿಗೆ ಘಾಟಿ ಸುಬ್ರಮಣ್ಯದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನಲ್ಲಿ ಮೃತದೇಹ ಪತ್ತೆ ಆಗುತ್ತಿದೆ.
ಸದ್ಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೃತಳ ಬಂಧನ ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಪ್ರಚೋದನೆ ಸಂಬಂಧ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗಂಡ ವೇಣು ಮತ್ತು ಮಾವ ಗೋವಿಂದಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.