ಅಮ್ಮನಂತೆಯೇ ಮಗಳು: ಪುತ್ರಿ ಜೊತೆ ಬಾಲಿವುಡ್​ ಸ್ಟಾರ್ಸ್​ ಬಾಲ್ಯದ ಫೋಟೋ- ಗೆಸ್​ ಮಾಡುವಿರಾ?

ಅಮ್ಮನಂತೆಯೇ ಮಗಳು: ಪುತ್ರಿ ಜೊತೆ ಬಾಲಿವುಡ್​ ಸ್ಟಾರ್ಸ್​ ಬಾಲ್ಯದ ಫೋಟೋ- ಗೆಸ್​ ಮಾಡುವಿರಾ?

ಅಮ್ಮನಂತೆಯೇ ಮಗಳು: ಪುತ್ರಿ ಜೊತೆ ಬಾಲಿವುಡ್​ ಸ್ಟಾರ್ಸ್​ ಬಾಲ್ಯದ ಫೋಟೋ- ಗೆಸ್​ ಮಾಡುವಿರಾ?

ಬಾಲಿವುಡ್ ತಾರಾ ದಂಪತಿ  ತಮ್ಮ ಮಗಳ ಮುಖವನ್ನು ದೀಪಾವಳಿಯಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಅಮ್ಮನನ್ನೇ ಹೋಲುವ ಮಗಳ ಫೋಟೋ ವೈರಲ್ ಆಗಿದ್ದು, ನಟಿ ‘ದೀಪಾವಳಿ’ ಎಂದು ಬರೆದಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.ಹಾಗಿದ್ದರೆ ಯಾರ ಫೋಟೋ ಇದು ಎಂದು ಹೇಳಬಲ್ಲಿರಾ?

ಬಾಯಲ್ಲಿ ಬೆರಳಿಟ್ಟುಕೊಂಡಿರುವ ಈ ಇಬ್ಬರು ಪುಟಾಣಿಗಳು ಅಮ್ಮ-ಮಗಳು. ಪಕ್ಕದಲ್ಲಿಯೇ ಅಪ್ಪ ಕೂಡ ಇದ್ದಾನೆ. ಇವರು ಬಾಲಿವುಡ್​ ಸ್ಟಾರ್​ ದಂಪತಿ. ಈಚೆಗಷ್ಟೇ ಮೊದಲ ಮಗುವಿಗೆ ಪಾಲಕರಾಗಿದೆ ಈ ಜೋಡಿ. ಹಾಗಿದ್ದರೆ ಇವರಿಬ್ಬರೂ ಯಾರೆಂದು ಗೆಸ್​ ಮಾಡುವಿರಾ?

ಮಗಳನ್ನು ನೋಡಿದವರಿಗೆ ಅಮ್ಮ ಇವರೇ ಇದ್ದಿರಬಹುದು ಎಂದು ಅನ್ನಿಸಲಿಕ್ಕೆ ಸಾಕು. ಕನ್ನಡದ ಮೂಲ ಹೊಂದಿರೋ ಈ ಅಮ್ಮ ಯಾರು ಗೊತ್ತಾಯ್ತಾ? ಗರ್ಭಿಣಿ ಇದ್ದಾಗಿನಿಂದಲೂ ಫೇಕ್​ ಗರ್ಭ ಧರಿಸಿ, ಪ್ರಚಾರ ಪಡೆಯುತ್ತಿದ್ದಾರೆ ಎಂದು ಕೊನೆಯವರೆಗೂ ಟ್ರೋಲ್​ಗೆ ಒಳಗಾಗಿದ್ದ ಫೇಮಸ್​ ನಟಿ. ಯಾರೆಂದು ತಿಳಿಯಿತಾ?

ಇವರೇ ದೀಪಿಕಾ ಪಡುಕೋಣೆ (Deepika Padukone). ಫೋಟೋದಲ್ಲಿ ಇರುವ ಅಪ್ಪ ಯಾರೆಂದು ಬೇರೆ ಹೇಳಬೇಕಾಗಿಲ್ಲ. ನಟ ರಣವೀರ್​ ಸಿಂಗ್​.

ಅಂದಹಾಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರಲ್ಲಿ ವಿವಾಹವಾಗಿದ್ದಾರೆ. ಅವರಿಗೆ 2024ರ ಸೆಪ್ಟೆಂಬರ್ 8ರಂದು ಹೆಣ್ಣು ಮಗುವಾಗಿದ್ದು, ಮಗಳಿಗೆ ‘ದುವಾ ಪಡುಕೋಣೆ ಸಿಂಗ್’ ಎಂದು ಹೆಸರಿಟ್ಟಿದ್ದಾರೆ. ಅವರು ಇತ್ತೀಚೆಗೆ ದೀಪಾವಳಿಯ ಸಂದರ್ಭದಲ್ಲಿ ತಮ್ಮ ಮಗಳ ಮುಖವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ‘ದಿವಾಲಿ’ ಎನ್ನುತ್ತಾರೆ. ಆದರೆ ಕನ್ನಡದ ದೀಪಿಕಾ ‘ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಬರೆದಿರುವಾಗಿ ದಿವಾಲಿ ಬದಲು ದೀಪಾವಳಿ ಎಂದು ಬರೆದುಕೊಂಡಿರುವುದು ಇಲ್ಲಿಯ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ದೀಪಿಕಾ ಪಡುಕೋಣೆ ಹಂಚಿಕೊಂಡ ಮಗಳ ಫೋಟೋಗಳಿಗೆ ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್ ಲೈಕ್ಸ್ ಸಿಕ್ಕಿವೆ. ಸೆಲೆಬ್ರಿಟಿಗಳಾದ ಹನ್ಸಿಕಾ, ಅನನ್ಯಾ ಪಾಂಡೆ, ಸೋನು ಸೂದ್, ಶಿಲ್ಪಾ ಶೆಟ್ಟಿ, ಅಟ್ಲೀ ಸೇರಿದಂತೆ ಹಲವರು ಕಮೆಂಟ್ಸ್ ಮಾಡಿದ್ದಾರೆ.

Source link

Leave a Reply

Your email address will not be published. Required fields are marked *