Headlines

Viral: ದಿನಕ್ಕೆ 12 ಗಂಟೆ ಕೆಲಸ, ಸರಿಯಾಗಿ ಕೆಲ್ಸ ಮಾಡುತ್ತಿಲ್ಲ ಅನ್ನೋ ಆರೋಪ; ಉದ್ಯೋಗ ಸ್ಥಳದ ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

Viral: ದಿನಕ್ಕೆ 12 ಗಂಟೆ ಕೆಲಸ, ಸರಿಯಾಗಿ ಕೆಲ್ಸ ಮಾಡುತ್ತಿಲ್ಲ ಅನ್ನೋ ಆರೋಪ; ಉದ್ಯೋಗ ಸ್ಥಳದ ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ


ಕೈಯಲ್ಲೊಂದು ಕೆಲಸವಿದ್ದರೇನೇ (ಕೆಲಸ) ಮರ್ಯಾದೆ. ಆದರೆ ಕತ್ತೆ ತರಹ ದುಡಿದ್ರೂ ಬೆಲೆಯೇ ಇಲ್ಲ. ಹೌದು, ಕೆಲಸದ ಸ್ಥಳಗಳಲ್ಲಿ ಅತಿಯಾದ ಒತ್ತಡ, ಮಾನಸಿಕ ಕಿರಿಕಿರಿ ಕೆಲಸ ಬಿಟ್ಟರೆ ಸಾಕು ಎಂದೆನಿಸುತ್ತದೆ. ಆದರೆ ದುಡಿಯುವುದು ಅನಿವಾರ್ಯ ಎನ್ನುವ ಕಾರಣಕ್ಕಾಗಿ ಎಲ್ಲವನ್ನು ಸಹಿಸಿಕೊಂಡು ಹೋಗ್ತಾರೆ. ಇದೀಗ ಭಾರತೀಯ ಉದ್ಯೋಗಿಯೊಬ್ಬರು (ಭಾರತೀಯ ಉದ್ಯೋಗಿ) ದಿನಕ್ಕೆ 12 ಗಂಟೆ ಕೆಲಸ ಮಾಡಿದ್ರು, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳ್ತಾರೆ. ಕಂಪನಿ ತನ್ನನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.

ವಿಚ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಉದ್ಯೋಗಿ ತಮ್ಮ @lunarstarfish ಹೆಸರಿನ ರೆಡ್ಡಿಟ್ ಪೋಸ್ಟ್ ಮಾಡಿದ್ದಾರೆ. ತಮ್ಮ ಕೆಲಸ ಸ್ಥಳಗಳಲ್ಲಿ ದಿನಕ್ಕೆ 12 ಗಂಟೆಗಳ ಕೆಲಸ ಮಾಡಿದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶೀರ್ಷಿಕೆ ಬರೆಯಲಾಗಿದೆ. ಕಂಪನಿಯ 90 ದಿನಗಳ ನೋಟಿಸ್ ಅವಧಿ ನೇಮಕಾತಿದಾರರಿಂದ ಕರೆಗಳನ್ನು ಸ್ವೀಕರಿಸಲು ಕಷ್ಟವಾಗುತ್ತದೆ. ನಾಲ್ಕು ವರ್ಷಗಳ ಹೆಚ್ಚಿನ ಅನುಭವದೊಂದಿಗೆ, ಉದ್ಯೋಗಕ್ಕೆ ಇನ್ನೂ ಕಡಿಮೆ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಕೇಳಿದ್ ಬಜೆಟ್ ಇಲ್ಲ ಎಂಬ ಪದೇ ಪದೇ ವೇತನವನ್ನು ನಿರಾಕರಿಸಲಾಗಿದೆ. ನನ್ನ ಹತಾಶೆಗಳು ಈಗ ಉತ್ತುಂಗಕ್ಕೇರಿವೆ. ನಿಜವಾಗಿಯೂ ಹತಾಶ ಭಾವನೆ ಮೂಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ರೆಡ್ಡಿಟ್ ಪೋಸ್ಟ್

ಇದನ್ನೂ ಓದಿ

ಇದನ್ನೂ ಓದಿ:ಸರ್ ಕೆಲಸ ಮುಗಿಯಿತು, ರೀಲ್ಸ್ ನೋಡಬಹುದೇ? ಹೊಸ ಉದ್ಯೋಗಿಯ ವರ್ತನೆಗೆ ಮ್ಯಾನೇಜರ್ ಶಾಕ್!

ಈ ಪೋಸ್ಟ್ ವೈರಲ್ ಆಗದಂತೆ ಬಳಕೆದಾರರೊಬ್ಬರು, ಇಂತಹ ಕೆಲಸದ ವಾತಾವರಣವಿದ್ದರೆ ಬೇರೆ ಉದ್ಯೋಗ ಹುಡುಕುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ. ಇತರರು ನಿಮ್ಮ ಕೆಲಸದ ಸ್ಥಳಗಳಲ್ಲಿ ಯಾವುದೇ ಬೆಳವಣಿಗೆ ಇಲ್ಲ, ಕಲಿಕೆ ಇಲ್ಲ ಅತಿಯಾದ ಬೆಂಬಲವಿಲ್ಲ ಎಂದು ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬ ಬಳಕೆದಾರ ಅದೇ ನರಕದಲ್ಲಿ ನಾನು ಸಿಲುಕಿಕೊಂಡೆ. ಈ ಪರಿಸರ ಭಯಾನಕವಾಗಿದೆ. ನಾನು ಬಿಟ್ಟು ಬೇರೆಡೆ ನೋಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *