ಬರ್ತ್ ಡೇ ಸಂಭ್ರಮದಲ್ಲಿ ಜ್ಯೋತಿ ರೈ…. ವಯಸ್ಸಾಗ್ತಿದ್ದಂತೆ ಚಾರ್ಮ್ ಕೂಡ ಹೆಚ್ಚಾಯ್ತು!

ಬರ್ತ್ ಡೇ ಸಂಭ್ರಮದಲ್ಲಿ ಜ್ಯೋತಿ ರೈ…. ವಯಸ್ಸಾಗ್ತಿದ್ದಂತೆ ಚಾರ್ಮ್ ಕೂಡ ಹೆಚ್ಚಾಯ್ತು!

ಕನ್ನಡ ಕಿರುತೆರೆಯಲ್ಲಿ ಮಿಂಚಿ, ಇದೀಗ ತೆಲುಗು ಹಿರಿತೆರೆಯಲ್ಲಿ ಸದ್ದು ಮಾಡುತ್ತಿರುವ ನಟಿ ಜ್ಯೋತಿ ರೈ ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ತೆಲುಗು ಸಿನಿಮಾದಲ್ಲಿ ತಮ್ಮ ಕಿಲ್ಲರ್ ಲುಕ್ ನಿಂದ ಭರ್ಜರಿ ಸದ್ದು ಮಾಡುತ್ತಿರುವ ನಟಿ ಜ್ಯೋತಿ ರೈ (Jyothi Rai) ಇಂದು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೇಕ್ ಕತ್ತರಿಸುವ ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ನಟಿ ಜ್ಯೋತಿ ರೈ ಜುಲೈ 4, 1985ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡ ಜ್ಯೋತಿ ರೈ ಸದ್ಯ ತೆಲುಗು ಸಿನಿಮಾ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಈಗ 40ನೇ ವಯಸ್ಸಿನಲ್ಲೂ ಯುವತಿಯರು ನಾಚುವಂತಹ ಸೌಂದರ್ಯ ಹೊಂದಿದ್ದಾರೆ.

ನಟಿ ಜ್ಯೋತಿ ರೈ ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಎರಡೆರಡು ಕೇಕ್ ಗಳನ್ನು ಕತ್ತರಿಸುತ್ತಾ, ಹ್ಯಾಪಿ ಬರ್ತ್ ಡೇ ಟು ಮಿ… (Happy birthday to me) ಶುಭಾಶಯ ತಿಳಿಸಿದ ಎಲ್ಲರಿಗೂ ಥ್ಯಾಂಕ್ಯೂ ಸೋ ಮಚ್ ಎಂದು ಬರೆದುಕೊಂಡಿದ್ದಾರೆ. ನಟಿ ಹಸಿರು ಬಣ್ಣದ ಸಲ್ವಾರ್ ಧರಿಸಿದ್ದು, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ.

ಜ್ಯೋತಿ ರೈ ಸದ್ಯ ಕಿಲ್ಲರ್ ಸಿನಿಮಾದಲ್ಲಿ (Killer Film) ನಟಿಸುತ್ತಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದವು. ನಟಿ ತುಂಬಾನೆ ಬೋಲ್ಡ್ ಆಗಿರುವ ಪಾತ್ರಗಳಲ್ಲಿ ನಟಿಸಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಸೀರಿಯಲ್ ಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದ ಜ್ಯೋತಿ ರೈ ಜೋಗುಳ, ಕಿನ್ನರಿ, ಮೂರು ಗಂಟು, ಜೋ ಜೋ ಲಾಲಿ, ಬಂದೇ ಬರತಾವ ಕಾಲ ಸೇರಿ ಹಲವು ಹಿಟ್ ಸೀರಿಯಲ್ ಗಳು ಹಾಗೂ ಒಂದೆರಡು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಬಳಿಕ ತೆಲುಗು ಕಿರುತೆರೆಗೆ ಹಾರಿದ್ದ ಜ್ಯೋತಿ ರೈ ಅಲ್ಲೂ ಸೀರಿಯಲ್ ಗಳಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಬಳಿಕ ನಿರ್ದೇಶಕ ಪೂರ್ವಜ್ ಜೊತೆ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟಿಯ ಲುಕ್,ಲಕ್ ಎರಡೂ ಕೂಡ ಬದಲಾಯಿತು.

ಪೂರ್ವಜ್ ನಿರ್ದೇಶನದ ಕೆಲವು ಸಿನಿಮಾಗಳಲ್ಲಿ ವೆಬ್ ಸೀರೀಸ್ ಗಳಲ್ಲಿ (web series) ಜ್ಯೋತಿ ರೈ ನಟಿಸುವ ಮೂಲಕ ಸುದ್ದಿಯಾಗಿದ್ದರು. ಜ್ಯೋತಿ ರೈ ಬೋಲ್ಡ್ ಫೋಟೊಗಳು ಇಂಟರ್ನೆಟಲ್ಲಿ ಕಿಚ್ಚು ಹಚ್ಚಿದ್ದವು. ಇವರೇನಾ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಎನ್ನುವಂತಿತ್ತು ಆ ಫೋಟೊಗಳು.

Source link

Leave a Reply

Your email address will not be published. Required fields are marked *