ಶಬರಿಮಲೆ ಆಯ್ತು, ಗುರುವಾಯೂರ್ ದೇವಸ್ಥಾನದಲ್ಲೂ ಚಿನ್ನದ ಕಳ್ಳತನ ಬೆಳಕಿಗೆ

ಶಬರಿಮಲೆ ಆಯ್ತು, ಗುರುವಾಯೂರ್ ದೇವಸ್ಥಾನದಲ್ಲೂ ಚಿನ್ನದ ಕಳ್ಳತನ ಬೆಳಕಿಗೆ


ತಿರುವನಂತಪುರಂ, ಅಕ್ಟೋಬರ್ 22: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳುವಾಗಿರುವ ಘಟನೆ ಹಿಂದೂ ಧಾರ್ಮಿಕ ಭಕ್ತರಿಗೆ ಕೊಟ್ಟ ಘಟನೆ ಮಾಸುವ ಮುನ್ನವೇ ಕೇರಳದ ಮತ್ತೊಂದು ದೇವಸ್ಥಾನದಲ್ಲಿ ಅಂತಹ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಬಹಳ ಜನಪ್ರಿಯವಾದ ಗುರುವಾಯೂರ್ ದೇವಸ್ಥಾನಗಳಲ್ಲಿ (Guruvayur temple) ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಕೇರಳದಲ್ಲಿ 12 ದೇವಸ್ಥಾನಗಳ ಆಡಳಿತವನ್ನು ನಿಭಾಯಿಸುವ ಗುರುವಾಯೂರ್ ದೇವಸ್ವಂ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಇವೆ. 2019ರಲ್ಲಿ ಮಾಡಲಾದ ಆಡಿಟಿಂಗ್‌ನಲ್ಲಿ ಕೆಲವು ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್ ಸ್ಕೀಮ್ ನಲ್ಲಿ ಇರಲಾಗಿದ್ದ ಠೇವಣಿಗಳಿಂದ 79 ಲಕ್ಷ ರೂ ನಷ್ಟವಾಗಿರುವುದನ್ನು ತೋರಿಸಲಾಗಿದೆ.

ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುತ್ತೆ ಭಾರತ, ಪ್ರಧಾನಿ ಮೋದಿಯಿಂದ ಭರವಸೆ ಸಿಕ್ಕಿದೆ ಎಂದ ಟ್ರಂಪ್

2019-20 ಮತ್ತು 2020-21ರ ಅವಧಿಯಲ್ಲಿ ಗುರುವಾಯುರ್ ದೇವಸ್ವಂನ ಆಡಿಟಿಂಗ್ ಅನ್ನು ಸರ್ಕಾರದಿಂದ ನಡೆಸಲಾಯಿತು. ಅದರ ವರದಿಯು ಈಗ ಬೆಳಕಿಗೆ ಬಂದಿದೆ. ಆದಾಯ ಮತ್ತು ಲೆಕ್ಕದಲ್ಲಿ ವ್ಯತ್ಯಾಸ ಗೊತ್ತಾಗಿದೆ. ಚಿನ್ನ, ಬೆಳ್ಳಿ ಇತ್ಯಾದಿ ಬೆಲೆಬಾಳುವ ವಸ್ತುಗಳ ಪರಿಶೀಲನೆ ಸರಿಯಾಗಿದೆ ಎಂಬುದು ಗೊತ್ತಾಗಿದೆ. ಒಟ್ಟಾರೆ 25 ಕೋಟಿ ರೂ ಮೊತ್ತದ ವಸ್ತುಗಳಿಗೆ ಲೆಕ್ಕ ಸಿಕ್ಕಿಲ್ಲ.

ಕೇರಳ ಸರ್ಕಾರದ ವಿರುದ್ಧ ಟೀಕೆ

ಗುರುವಾಯೂರ್ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವುದು ಹಾಗೂ ಆಡಳಿತ ನಿರ್ವಹಣೆ ಸರಿಯಾಗಿ ಆಗದೇ ಇರುವುದು ಸೋಷಿಯಲ್ ಮೀಡಿಯಾದಲ್ಲಿ ಕೆಲವರಿಂದ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಕೇರಳದ ಎಡಪಂಥಿಯ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಪ್ರದೀಪ್ ಭಂಡಾರಿಯವರು ಎಕ್ಸ್ ಪೋಸ್ಟ್ ನಲ್ಲಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್

ಇದನ್ನೂ ಓದಿ: ತಮಿಳುನಾಡಿನಲ್ಲಿ ವರುಣ ಅಬ್ಬರ; ಚಂಡಮಾರುತ ಸಂಭವ; ಬೆಂಗಳೂರಿಗೂ ರಾಚುತ್ತಾ ಮಳೆ?

ಇದೆ ವೇಳೆ, ಗುರುವಾಯೂರ್ ದೇವಸ್ವಂ ಮಂಡಳಿ ಈ ಆಡಿಟಿಂಗ್ ಬಗ್ಗೆ ಮನವಿ ಸಲ್ಲಿಸಿದೆ, ಈ ಲೋಪದೋಷಗಳನ್ನು ಸರಿಪಡಿಸಲಾಗಿದೆ, ಈ ಅರ್ಜಿಯನ್ನು ಕೇರಳ ಹೈಕೋರ್ಟ್‌ಗೆ ವಿವರವಾಗಿ ಪ್ರಕಟಿಸಲಾಗಿದೆ ಎಂದು ಹೇಳಿದೆ. ಕೇರಳ ಸರ್ಕಾರ ಕೂಡ ಇದೆ ಅಭಿಪ್ರಾಯ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:54 pm, ಬುಧವಾರ, 22 ಅಕ್ಟೋಬರ್ 25





Source link

Leave a Reply

Your email address will not be published. Required fields are marked *