Headlines

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ


ಕಲಬುರಗಿ, ಅಕ್ಟೋಬರ್ 22: ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಆರ್.ಎಸ್.ಎಸ್ (ಆರ್ಎಸ್ಎಸ್) ಪಥಸಂಚಲನಕ್ಕೆ ಹೆಜ್ಜೆ ಹೆಜ್ಜೆಗೂ ಕಂಟಕ ಶುರುವಾಗುತ್ತಿದೆ. ಇಷ್ಟು ದಿನ ಆರ್ ಎಸ್ ಎಸ್ ವರ್ಸಸ್ ಭೀಮ ಆರ್ಮಿ ಮಧ್ಯೆ ಫೈಟ್ ನಡೆದಿತ್ತು. ಇದೆಲ್ಲದರ ಮಧ್ಯೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆರ್ ಎಸ್ ಎಸ್ ಗೆ ಕುರುಬ ಸಮಾಜ (ಕುರುಬ ಸಮುದಾಯ) ಕಂಟಕ ತಂದೊಡ್ಡಿದೆ. ನವೆಂಬರ್ 2 ರಂದು ನಾವೂ ಎಸ್ ಟಿ ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡುವುದಾಗಿ ಕುರುಬ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿದೆ. ಇದರ ಜೊತೆಗೆ ಭೀಮ ಆರ್ಮಿ ಮತ್ತು ಸೌಹಾರ್ದ ಕರ್ನಾಟಕ ಕಲಬುರಗಿ ಎರಡೂ ಸಂಘಟನೆಗಳು ಅನುಮತಿ ನೀಡದಂತೆ ಇದೆ.

ಆರ್ ಎಸ್ ಎಸ್ ಪಥಸಂಚಲನಕ್ಕೆ ಕಂಟಕ

ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಕಂಟಕ ಶುರುವಾಗಿದೆ. ಭೀಮ ಆರ್ಮಿ ಬೆನ್ನಲ್ಲೇ ಗೊಂಡ ಕುರುಬ ಎಸ್ ಟಿ ಹೋರಾಟ ಸಮಿತಿ ಎಂಟ್ರಿ ಕೊಟ್ಟಿದೆ. ನವೆಂಬರ್ 2 ರಂದು ಚಿತ್ತಾಪುರದಲ್ಲಿ ಗೊಂಡ ಕುರುಬ ಎಸ್ ಟಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆಗೆ ಅನುಮತಿ ನೀಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: ಎಲ್ಲರ ಚಿತ್ತ ಚಿತ್ತಾಪುರದತ್ತ: RSS ಪಥಸಂಚಲನಕ್ಕೆ ಎದುರಾಯ್ತು ಮತ್ತೊಂದು ಕಂಟಕ

ಗೊಂಡ ಕುರುಬ ಸಮಾಜ ಎಸ್ಟಿ ಗೆ ಸೇರ್ಪಡೆಯಾಗಬೇಕು ಎಂಬ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲು ಸಜ್ಜಾಗಿದೆ. ಐದು ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸೋದಾಗಿ ಕೂಡ ಉಲ್ಲೇಖ ಮಾಡಿದೆ. ನವೆಂಬರ್ 2 ರಂದು ಆರ್ ಎಸ್ ಎಸ್ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಬೇಕು ಅಂದುಕೊಂಡ ಬೆನ್ನಲ್ಲೇ ಇದೀಗ ಒಂದರ ಹಿಂದೆ ಒಂದರಂತೆ ವಿಘ್ನಗಳು ಎದುರಾಗುತ್ತಿವೆ.

ಸದ್ಯ ಆರ್ ಎಸ್ ಎಸ್ ಪಥಸಂಚಲನ ಸೇರಿ ಉಳಿದ ಸಂಘಟನೆಗಳ ಪಥಸಂಚಲನ ಮತ್ತು ಹೋರಾಟಕ್ಕೆ ಯಾವ ರೀತಿಯಲ್ಲಿ ಅವಕಾಶ ಕೊಡುತ್ತೆ ಅನ್ನೋದು ಸಾಕಷ್ಟು ಕೂತುಹಲ ಮೂಡಿದೆ. ನ್ಯಾಯದ ಈ ಎಲ್ಲಾ ಬೆಳವಣಿಗೆಗಳು ನ್ಯಾಯಾಲಯದ ಗಮನಕ್ಕೆ ತಂದು ಅಂತಿಮ ನಿರ್ಧಾರಕ್ಕೆ ಬಿಟ್ಟು ಕೊಡುತ್ತಾ ಎಂಬ ಕೂತುಹಲ ಕೂಡ ಸೃಷ್ಟಿಯಾಗಿದೆ. ಇದೀಗ ಗೊಂಡ ಕುರುಬ ಎಸ್ ಟಿ ಹೋರಾಟ ಸಮಿತಿ ಕೂಡ ಆರ್ ಎಸ್ ಎಸ್ ಎಸ್ ನಡುವಿನ ಪೈಟ್ ಗೆ ಎಂಟ್ರಿ ಕೊಟ್ಟ ಹಿನ್ನಲೆ ಇದೀಗ ಪಥಸಂಚಲನ ವಿಚಾರ ಮತ್ತಷ್ಟು ಜಿದ್ದಿಗೆ ಬಿದ್ದಿದೆ.

ಇನ್ನು ಆರ್ ಎಸ್ ಎಸ್ ಮತ್ತು ದಲಿತ ಸಂಘಟನೆ ನಡುವಿನ ಪಥಸಂಚಲನ ಮತ್ತೊಂದು ಹಂತಕ್ಕೆ ತಲುಪಿದೆ. ನ್ಯಾಯಲಯದ ಆದೇಶಕ್ಕೂ ಮೊದಲೇ ಭೀಮಿ ಆರ್ ಎಸ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ನೀಡದಂತೆ ಹೊಸ ಬೇಡಿಕೆಯೊಂದು ಇಟ್ಟಿದೆ. ಲಾಠಿ. ಖಡ್ಗ ಇತರ ವಸ್ತುವನ್ನು ಪ್ರದರ್ಶಿಸಿ ಪಥಸಂಚಲನ ಮಾಡುವ ಉದ್ದೇಶ ಧರ್ಮ ರಕ್ಷಣೆ, ಇದು ಉಗ್ರವಾದಕ್ಕೆ ಬೆಳವಣಿಗೆಯಾಗುತ್ತದೆ. ಹೀಗಾಗಿ ಕೂಡಲೇ ಇದನ್ನು ನಿಲ್ಲಿಸಬೇಕಾಗಿ ಎಚ್ಚರಿಕೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಭೀಮ್ ಪೋಸ್ಟ್ ಮಾಡಿದ್ದಾರೆ.

ಭೀಮ ಆರ್ಮಿಯ ಜೊತೆಗೆ ಧ್ವನಿಗೂಡಿಸಿದ ಸೌಹಾರ್ದ ಕರ್ನಾಟಕ ಹೋರಾಟ ಸಮಿತಿ ಕೂಡ ಆರ್ ಎಸ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ನೀಡದಂತೆ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಆರ್ಎಸ್ಎಸ್ ವರ್ಸಸ್ ದಲಿತ ಸಂಘಟನೆಗಳ ನಡುವಿನ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ.

ಒಟ್ಟಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ವಿಚಾರ ಕೋರ್ಟ್‌ನಲ್ಲಿ ಈಗಾಗಲೆ ಹಲವು ಸಂಘಟನೆಗಳು ಕೂಡ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ಹೋರಾಟಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಸಾಕಷ್ಟು ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಲಾಗುತ್ತಿದೆ. ಎಲ್ಲಾ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅರ್ಜಿ ಪೊಲೀಸ್ ಇಲಾಖೆ ಅಂಗಗಳಿಗೆ ಅರ್ಜಿ ಹಸ್ತಾಂತರಿಸಿದೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಎಸ್ ಪಥಸಂಚಲನ ಜಟಾಪಟಿ: ಮಹತ್ವದ ಸೂಚನೆ ನೀಡಿದರು

ಇಲಾಖೆ ಏನು ವರದಿ ನೀಡುತ್ತದೆ ಎಂದು ಪೊಲೀಸರು ಕೂಡ ಸದ್ಯಕ್ಕೆ ಸಾಕಷ್ಟು ಕೂತುಹಲ ಮೂಡಿಸಿದ್ದಾರೆ. ಇದೆಲ್ಲದರ ಬಳಿಕ ಆರ್ ಎಸ್ ಎಸ್ ಪಥಸಂಚಲನಕ್ಕೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದು ಸಾಕಷ್ಟು ಕೂತುಹಲ ಮೂಡಿಸಿದೆ. ಸರ್ಕಾರ ಪಥಸಂಚಲನಕ್ಕೆ ಮಾಡಿ ಕೊಡದೆ ಹೋದರೆ ನ್ಯಾಯಲಯವೇ ಪಥಸಂಚಲನ ವಿಚಾರದಲ್ಲಿ ಅಂತಿಮ ನಿರ್ಣಯ ಮಾಡಲಾಗುವುದು. ಅಕ್ಟೋಬರ್ 24 ರಂದು ನ್ಯಾಯಾಲಯದ ವಿಚಾರಣೆಯ ಮೇಲೆ ಇದೀಗ ಎಲ್ಲರ ಚಿತ್ತ ಕೂಡ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *