ನಕಲಿ ನಾಣ್ಯಗಳಿಗಾಗಿ ಹಣಾ-ಹಣಿ: ಕಳ್ಳರು, ರೌಡಿಗಳಾದ ಮನೆ ಮಂದಿ

ನಕಲಿ ನಾಣ್ಯಗಳಿಗಾಗಿ ಹಣಾ-ಹಣಿ: ಕಳ್ಳರು, ರೌಡಿಗಳಾದ ಮನೆ ಮಂದಿ


ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಶುರುವಾಗಿದೆ. ಮನೆಯ ಮೊದಲ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು ಬುಧವಾರ ಬಿಗ್ಬಾಸ್ ಮೊದಲ ಟಾಸ್ಕ್ ಅನ್ನು ಪ್ರಾರಂಭಿಸಲಾಗಿದೆ. ಮನೆಯಲ್ಲಿರುವ ಸದಸ್ಯರನ್ನು ಮೂರು ತಂಡಗಳಾಗಿ ವಿಂಗಡಿಸಿದರು. ಕ್ಯಾಪ್ಟೆನ್ಸಿ ಟಾಸ್ಕ್ ನೇಮಿಸಿಕೊಳ್ಳಲು ಅವಕಾಶ ಸಿಗದ ಕಾಕ್ರೂಚ್ ಸುಧಿ ಮತ್ತು ಅಶ್ವಿನಿ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಿದರು. ನಕಲಿ ನಾಣ್ಯಗಳ ಬಿಗ್ಬಾಸ್ ಸ್ಪರ್ಧಿಗಳಿಗೆ ಅವಕಾಶ. ಸಾಧ್ಯವಾದಷ್ಟು ಹೆಚ್ಚು ನಾಣ್ಯಗಳನ್ನು ಸಂಗ್ರಹಿಸಬೇಕು ಎಂಬುದು ಆಟದ ನಿಯಮ.

ಅದರಂತೆ ಮೂರು ತಂಡದ ಸದಸ್ಯರು ನಾಣ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಪರಸ್ಪರ ಸ್ಪರ್ಧಿಗಳಿಂದ ನಾಣ್ಯಗಳನ್ನು ಕಿತ್ತುಕೊಳ್ಳಬಹುದು ಎಂದು ಸಹ ಬಿಗ್ಬಾಸ್ ಹೇಳಿದ್ದಾರೆ. ಹೀಗಾಗಿ ಮನೆಯ ಬಲಾಢ್ಯರಾದ ರಘು, ಗಿಲ್ಲಿ ಇನ್ನೂ ಕೆಲವರನ್ನು ಎಳೆದೆಳೆದು ಬಿಸಾಡಿ ನಾಣ್ಯಗಳನ್ನು ಬಾಚಿಕೊಂಡರು. ಆದರೂ ಸಹ ಗಿಲ್ಲಿ, ಧ್ರುವಂತ್, ಅವಿನಾಶ್ ಇನ್ನೂ ಸಾಕಷ್ಟು ನಾಣ್ಯಗಳನ್ನು ಬಾಚಿಕೊಂಡರು.

ಆದರೆ ಗಿಲ್ಲಿ ತಮಾಷೆ ಮಾಡುತ್ತಾ ತಮ್ಮಲ್ಲಿರುವ ನಾಣ್ಯಗಳನ್ನು ರಘುಗೆ ತೋರಿಸಿದರು. ಬಳಿಕ ರಘು ಅವರ ತಂಡದವರು ಗಿಲ್ಲಿಯನ್ನು ಬಲವಂತವಾಗಿ ಹಿಡಿದುಕೊಂಡು ಅವರ ಬಳಿ ಇದ್ದ ನಾಣ್ಯಗಳನ್ನೆಲ್ಲ ದೋಚಿದರು. ಬಳಿಕ ನಾಣ್ಯಗಳು ಸಂಗ್ರಹಿಸುವ ಆಟ ಪರಸ್ಪರ ಕಿತ್ತಾಡುವ, ದೋಚಿಕೊಳ್ಳುವ ಆಟವಾಗಿ ಬದಲಾಯ್ತು. ಸ್ಪರ್ಧಿಗಳು ಗುಂಪು-ಗುಂಪಾಗಿ ಇತರ ಗುಂಪಿನವರ ಮೇಲೆ ದಾಳಿ ಮಾಡಿದರು. ರಘು ಅಂತೂ ತಮ್ಮ ದೈತ್ಯ ದೇಹ ಬಳಸಿ ಹಲವರನ್ನು ದೋಚಿದರು. ಈ ವೇಳೆ ರಿಶಾ, ರಘು ವಿರುದ್ಧ ಕೂಗಾಡಿದರು.

ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಈ ದೋಚುವಿಕೆಯಿಂದ ಪಾರಾಗಲು ಸ್ಪರ್ಧಿಗಳು ಗುಟ್ಟಾಗಿ ನಾಣ್ಯಗಳನ್ನು ಅಡಗಿಸಿಡಲು ಮುಂದಾದರು. ಹಲವು ಕಡೆಗಳಲ್ಲಿ ನಾಣ್ಯಗಳನ್ನು ಅಡಗಿಸಿಟ್ಟರು. ಆದರೆ ಆ ನಂತರ ಸ್ಪರ್ಧಿಗಳು ಕಳ್ಳರಾಗಿ ಬದಲಾದರು. ರಶಿಕಾ ಇಟ್ಟ ನಾಣ್ಯವನ್ನು ಚಂದ್ರಪ್ರಭ ಕದ್ದರು. ಧನುಷ್ ಜೇಬಿನಲ್ಲಿದ್ದ ನಾಣ್ಯಗಳನ್ನು ಅವರು ಮಲಗಿದ್ದಾಗ ರಕ್ಷಿತಾ ಕದ್ದು ತಮ್ಮ ಖಾತೆಗೆ ಹಾಕಿಕೊಂಡರು. ಈ ನಾಣ್ಯಗಳನ್ನು ಕಾಪಾಡುವ ಭರದಲ್ಲಿ ಕೆಲ ಸ್ಪರ್ಧಿಗಳು ಊಟವನ್ನು ಸಹ ಬಿಟ್ಟರು. ನಾಣ್ಯಗಳ ಆಟ ಇನ್ನೂ ಮುಂದುವರೆದಿದ್ದು, ಯಾರು ಹೆಚ್ಚು ನಾಣ್ಯ ಸಂಪಾದಿಸಿದ್ದಾರೆ ಎಂಬುದು ನಾಳಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *