Horoscope Today 23 Oct: ಈ ರಾಶಿಯವರ ಆದಾಯ ಮೂಲಕ್ಕೆ ತೊಂದರೆ ಉಂಟಾಗಬಹುದು

Horoscope Today 23 Oct: ಈ ರಾಶಿಯವರ ಆದಾಯ ಮೂಲಕ್ಕೆ ತೊಂದರೆ ಉಂಟಾಗಬಹುದು


ಬೆಂಗಳೂರು, ನಿತ್ಯ ಪಂಚಾಗ, ಅಕ್ಟೋಬರ್ 23: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದ್ವಿತೀಯ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವಿಷ್ಕಂಭ, ಕರಣ – : ಬಾಲವ ೦, ಸೂರ್ಯ – 2, ಸೂರ್ಯ – 2, ಸೂರ್ಯ – 2, 5. 55 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:32 – 14:59, ಗುಳಿಕ ಕಾಲ 10:36 – 12:04, ಯಮಗಂಡ ಕಾಲ 06:12 – 07:40.

ಮೇಷ ರಾಶಿ: ಲೌಕಿಕ ವಿಚಾರದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಪ್ರಭಾವೀ ವ್ಯಕ್ತಿಗಳ ಪರಿಣಾಮವು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳಿ. ನಿಮ್ಮ ಇಂದಿನ ಕೆಲಸಗಳು ಅಡೆತಡೆ ಇಲ್ಲದೇ ಸಾಗುವುದು. ವಾಹನ ಖರೀದಿಗೆ ಹಣವನ್ನು ಹೊಂದಿಸುವಿರಿ. ಅಪಘಾತದ ಭೀತಿಯು ನಿಮ್ಮನ್ನು ಹೆಚ್ಚು ಕಾಡುವುದು. ಎಂತಹ ನಷ್ಟವನ್ನೂ ನೀವು ಆತ್ಮಸ್ಥೈರ್ಯದಿಂದ ಎದುರಿಸಬಲ್ಲಿರಿ. ನಿಮಗೆ ಸಂಬಂಧವಿಲ್ಲದೇ ಇರುವ ವಿಚಾರಕ್ಕೆ ಯೋಚಿಸಿ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಷಯಕ್ಕೆ ಹೆಚ್ಚು ಪ್ರತಿಕ್ರಿಯಿಸುತ್ತದೆ. ದೂರದಲ್ಲಿನ ಸಂಗಾತಿಯಿಂದ ನಿಮ್ಮ ಬಗ್ಗೆ ದೂರು. ಸ್ನೇಹಕ್ಕೆ ನೀವು ಬೆಲೆಯನ್ನು ಕೊಡುವಿರಿ. ಬಂಧುಗಳ ಭೇಟಿಗೆ ದೂರಪ್ರಯಾಣವನ್ನು ಮಾಡಿದೆ. ರಾಜಕೀಯ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಪರಿಚಿತ ಬೆಳವಣಿಗೆಯನ್ನು ಸಹಿಸಲಾಗದು. ಮೇಲಧಿಕಾರಿಗಳ ಭೇಟಿಯಾಗುವ ಸಾಧ್ಯತೆ ಇದೆ. ನೀವು ಕೆಲವು ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದು ಉತ್ತಮ.

ವೃಷಭ ರಾಶಿ: ಬೇರೆ ಕಂಪನಿಯಿಂದ ಉದ್ಯೋಗಕ್ಕೆ ಬರಬಹುದು. ಇರುವುದನ್ನು ಬಿಡುವ ಗೊಂದಲವಿರುವುದು. ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ ಇರದು. ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ನಿಮ್ಮವರು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಲು ಬಿಡರು. ನಿಮ್ಮ ಮಾತು ಇತರರಿಗೆ ಬೇಸರವನ್ನು ತರಿಸಿತು. ಮಕ್ಕಳ ವಿಚಾರದಲ್ಲಿ ನೀವು ಸಹಕಾರ ಕೊಡುವಿರಿ. ನಿಮ್ಮನ್ನು ನಿಮಗಿಂತ ಮೇಲಿನವರು ಬಯಸುತ್ತಾರೆ. ಏಕಾಂತಕ್ಕೆ ನೀವು ಹೆಚ್ಚಿನ ಒತ್ತನ್ನು ಕೊಡುವಿರಿ. ಸಹೋದರರ ನಡುಯವೆ ವಾಗ್ವಾದವು ಆಗಬಹುದು. ಅಪರಿಚಿತರಿಂದ ನಿಮಗೆ ಖಾತೆಗೆ ಹಣ ವರ್ಗಾವಣೆಯಾಗಲಿದೆ. ವಿದ್ಯಾಭ್ಯಾಸವು ನಿಮಗೆ ಸಾಕು ಎನಿಸಬಹುದು. ಯಾರದೋ ಒತ್ತಾಯಕ್ಕೆ ನೀವು ಇಷ್ಟವಿಲ್ಲದ ಕೆಲಸಕ್ಕೆ ಸೇರಿಕೊಳ್ಳಿ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆಯಾಗಿದೆ ಎಂದು ಅನ್ನಿಸುವುದು. ಸಂಗಾತಿಯ ನೋವಿಗೆ ಸ್ಪಂದಿಸುವುದು ಕಷ್ಟವಾದೀತು.

ಮಿಥುನ ರಾಶಿ: ಮನೆಯವರಿಗೆ ಗೊತ್ತಾಗದಂತೆ ಆಸ್ತಿ ಖರೀದಿಸಿದರೂ ಗೊತ್ತಾಗಲಿದೆ. ನಿಮ್ಮ ಬಲವನ್ನು ಯಾರದೋ ಮೂಲಕ ನಿಲ್ಲಿಸುವ ಬದಲು, ನೀವೇ ಅರಿತುಕೊಂಡರೆ ಸುಖ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗುವಂತೆ ಸರಿಮಾಡಿಕೊಳ್ಳುತ್ತೀರಿ. ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳಿ. ಬಹಳ ಜಾಣ್ಮೆಯಿಂದ ಕಾರ್ಯವನ್ನು ಸಾಧಿಸುವಿರಿ. ನಿರೀಕ್ಷಿತ ಸ್ಥಾನವನ್ನು ನೀವು ಪಡೆದುಕೊಳ್ಳಿ. ನಿಮಗೆ ಇಷ್ಟವಾದ ಸ್ಥಳಗಳಿಗೆ ಹೋಗುವಿರಿ. ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗುವುದು. ನಿಮ್ಮ ಸಾಮರ್ಥ್ಯವು ಇತರರಿಗೂ ತಿಳಿಯವಹದು. ದೇವತಾರಾಧನೆಗೆ ತಿಳಿದವರ ಜೊತೆ ಚರ್ಚಿಸಿ. ಮನೆಯ ಹಿರಿಯರಿಂದ ಮಾನಸಿಕ ಹಿಂಸೆ. ವೈವಾಹಿಕ ಜೀವನ ಒತ್ತಡದಿಂದ ನಿರ್ವಹಿಸಬೇಕಾಗುವುದು. ಹಣವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಬೇಡದ ಮಾತುಕತೆಯಲ್ಲಿ ಇಂದಿನ ದಿನವು ಕಳೆಯುವುದು.

ಕರ್ಕಾಟಕ ರಾಶಿ: ನಿರರ್ಗಳವಾದ ಮಾತು ನಿಮ್ಮ ಮನಸ್ಸನ್ನು ತಿಳಿಸುವುದು. ಸಂದೇಹದಿಂದ ಮನಸ್ಸು ಹಾಳಾಗುತ್ತದೆ. ಹಾಳಾದ ಮನಸ್ಸಿನಿಂದ ಕೆಲಸವೂ ಹಾಳು. ಇಂದು ಹೆಚ್ವಿನ ಸಮಯ ಆಟ, ಓಟಗಳಲ್ಲಿ ಕಳೆಯುವಿರಿ. ಸಹೋದರಿಯ ಸಹಾಯವು ನಿಮಗೆ ಸಿಗಲಿದೆ ನಿಮ್ಮ ಜವಾಬ್ದಾರಿಯು ಹೆಚ್ಚಾಗಲಿದೆ. ಭೂಮಿಯ ವ್ಯವಹಾರವು ಸುಗಮವಾಗಿ ಸಾಗುವುದು. ಆರ್ಥಿಕ ಸಮಸ್ಯೆ ನೀವು ದೂರ ಮಾಡಿಕೊಳ್ಳುವಿರಿ. ವಾತಾವರಣದಿಂದ ಹೊರಬಂದಾಗಲೇ ಗೊತ್ತಾಗುವುದು. ಬಂಧುಗಳು ಅರ್ಥಿಕ ಸಹಾಯವನ್ನು ಬಯಸಿದರೂ ಕೇಳಲು ಹಿಂದೇಟು ಹಾಕುವರು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೋಗಬಹುದು. ಅಸೂಯೆ ಕಾರಣಕ್ಕೆ ಅಭಿವೃದ್ಧಿಗೆ ಹಸ್ತಕ್ಷೇಪ, ಮಕ್ಕಳ ಜೊತೆಗೆ ಕಳೆಯುವ ನಿಮ್ಮ ಸಮಯವು ಬಹಳ ಆಪ್ತವಾಗಿರುತ್ತದೆ. ಶುಭವಾರ್ತೆಯ ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ರೋಗಗಳು ಹೋದಂತೆ ಅನಿಸಬಹುದು, ಮತ್ತಾವುದೋ ದಾರಿಯಿಂದ ನುಸುಳುತ್ತವೆ.

ಸಿಂಹ ರಾಶಿ: ಉತ್ತಮ ನಾಯಕರನ್ನು ಭವಿಷ್ಯ ಸ್ವಾಗತಿಸುವುದು. ಅದಕ್ಕೆ ಬೇಕಾದ ಪೂರ್ವತಯಾರಿಯೂ ಇರಲಿ. ಸಿಟ್ಟನ್ನು ಮಾಡಿಕೊಳ್ಳುವುದು ಸರಿ ಎನಿಸಿದರೂ ಆಗುವ ತೊಂದರೆಯಿಂದ ಸುಮ್ಮನಿರುವುದೇ ಜಾಣತನ. ನೀವು ಮನೆಯವರ ಬಗೆಗಿನ ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ವಾಸಸ್ಥಳದ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಮಾತೇ ನಡೆಯುತ್ತಿದೆ ಎಂದು ಇಟ್ಟುಕೊಳ್ಳಬಾರದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾಗರೂಕತೆಯ ಕ್ರಮಗಳನ್ನು ಮಾಡಿಕೊಳ್ಳಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಜಾಣತನ. ಸ್ತ್ರೀಯರ ಒಡನಾಟ ಅತಿಯಾಗಿ ಬೇಡ. ನೇರ ನುಡಿಗಳನ್ನು ನೀವು ಸಹಿಸುವುದು ಕಷ್ಟವಾದೀತು. ಒಪ್ಪಿಕೊಂಡಂತೆ ವಿಹರಿಸುವ ಮನಸ್ಸು ಇರಲಿದೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದೆ ಸ್ವಲ್ಪ ನೆಮ್ಮದಿ ಸಿಗುವುದು. ಬಹಳ ನಾಜೂಕಿನಿಂದ ಮುಂದುವರಿಯಬೇಕು.

ಕನ್ಯಾ ರಾಶಿ: ಇತರರನ್ನು ಸಮಾಧಾನ ಮಾಡುತ್ತೇನೆ ಎಂಬ ವಿಶ್ವಾಸವಿದ್ದರೂ ಫಲಕಾರಿಯಾಗದು. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುತ್ತಾರೆ. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟರು. ಸಂಗಾತಿಗೆ ನಿಮ್ಮ ಕಾರಣದಿಂದ ಉತ್ತಮ ಕೆಲಸವು ಸಿಗಲಿದೆ. ಕಛೇರಿಯಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ನೀವು ತಿಳಿದುಕೊಳ್ಳುತ್ತೀರಿ. ಸಾಮಾಜಿಕ ಸೇವಾಕಾರ್ಯದಲ್ಲಿ ಭಾಗವಹಿಸುವಿರಿ. ಹೂಡಿಕೆಯ ವಿಚಾರದಲ್ಲಿ ನೀವು ಹಿಂದುಳಿಯಬೇಕಾಗುವುದು. ಆಲಂಕಾರಿಕ ಉದ್ಯಮವನ್ನು ಮಾಡಿದರೆ ನಿಮಗೆ ಶ್ರೇಯಸ್ಸು ಆದಾಯ ಎಲ್ಲವೂ ಸಿಗಲಿದೆ. ವ್ಯಾಪಾರವನ್ನು ಬಹಳ ಮುತುವರ್ಜಿಯಿಂದ ಮಾಡಬೇಕಾಗುವುದು. ಮನೆಯ ಕೆಲಸವು ಮುಗಿಯದಷ್ಟು ಇರಲಿದೆ. ನಿಮ್ಮನ್ನು ಯಶಸ್ಸನ್ನು ಕಂಡು ಅದನ್ನು ನಿಯಂತ್ರಿಸಲು ಸಹೋದ್ಯೋಗಿಗಳ ಮೇಲಧಿಕಾರಿಗಳಿಗೆ ದೂರನ್ನು ಕೊಡಬಹುದು. ಸ್ನೇಹಿತರ ಜೊತೆ ಹರಟೆಯಲ್ಲಿ ಕಾಲಕಳೆಯುವಿರಿ. ಆರ್ಥಿಕ ವಿಷಯವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ.

ತುಲಾ ರಾಶಿ: ಯಾರಾದರೂ ತಮಗೆ ಆಗಬೇಕಾದ ಕಾರ್ಯಕ್ಕೆ ಆಯ್ಕೆಗಳನ್ನು ಕೊಡಬಹುದು. ನ್ಯಾಯಾಲಯದ ಹೋರಾಟಕ್ಕೆ ಸ್ನೇಹಿತರ ಬೆಂಬಲ ಸಿಗುವುದು. ಇಂದು ನಿಮಗೆ ನಿಮ್ಮವರು ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಮನಸ್ಸಿನಲ್ಲಿ ಹತಾಶೆ, ಗೊಂದಲ, ಸಿಟ್ಟು ಎಲ್ಲವೂ ಕೂಡಿಕೊಂಡು ಯಾವುದನ್ನೂ ಮಾಡಲಾಗದ ಸ್ಥಿತಿಯು ನಿಮ್ಮದಾಗಲಿದೆ. ಅನ್ಯಾಯಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮದಲ್ಲದ ಕೆಲಸಕ್ಕೆ ನೀವೇ ಜವಾಬ್ದಾರರಾಗಬೇಕಾಗಬಹುದು. ವೈವಾಹಿಕ ವಿಚಾರದ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟವಾದೀತು. ದೈವದ ಮೊರೆ ಬಿಟ್ಟರೆ ಮತ್ತಾವುದೂ ಕಾಣಸಿಗದು. ಹೊಸ ಸಾಕ್ಷಿಗಳನ್ನು ಹುಡುಕುವ ಬದಲು ಇರುವುದನ್ನು ಗಟ್ಟಿಮಾಡಿಕೊಳ್ಳಿ. ಸುಮ್ಮನೆ ಕುಳಿತರೇ ಹತ್ತಾರು ಆಲೋಚನೆಗಳು ನಿಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತವೆ. ಆಪ್ತರಾದ ಮಾತ್ರಕ್ಕೆ ಸರಿಯಾಗಿ ಹೇಳುವುದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿ ಕೊಡುವಿರಿ.

ವೃಶ್ಚಿಕ ರಾಶಿ: ಸಾಮಾನ್ಯ ದಿನದಂತೆ ಆಲಸ್ಯ ಮಾಡುವುದು ಬೇಡ. ಚುರುಕುತನ ನಿಮ್ಮಲ್ಲಿ ಇಂದು ಬೇಕು. ಎಲ್ಲವನ್ನೂ ಬಿಟ್ಟು ಸುಮ್ಮನಿದ್ದರೂ ಜೊತೆಗಾರರು ಸುಮ್ಮನಿರಲಾರರು. ಇಂದು ನಿಮ್ಮ ಜೊತೆಗಾರರ ​​ನಿಧಾನಗತಿಯ ಕೆಲಸವು ನಿಮ್ಮ ಮನಸ್ಥಿತಿಗೆ ಹೊಂದಿಕೆಯಾಗಿರಬಹುದು. ಸಾಲದಿಂದ ನೀವು ತಲೆ ಮರೆಸಿಕೊಳ್ಳುವ ಸ್ಥಿತಿ ಬರಬಹುದು. ಅದಕ್ಕೆ ಬೇಕಾದ ಸಿದ್ಧತೆಯನ್ನು ಇಂದೇ ಮಾಡಿಕೊಳ್ಳುವುದು ಉತ್ತಮ. ಸ್ಥಿರಾಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಸಾಹಸಮಾಡಬೇಕಾದೀತು. ದಾಂಪತ್ಯ ಜೀವನವು ಅನೇಕ ತಿರುವಗಳನ್ನು ಇದ್ದರೆ ಮುಂದೆ ಸಾಗುವುದು. ಹಿರಿಯರನ್ನು ಗೌರವಿಸಿ ಆಶೀರ್ವಾದವನ್ನು ಪಡೆದುಕೊಳ್ಳಿ. ಮೆಚ್ಚಿಕೊಳ್ಳದೇ ಇರುವುದು ನಿಮ್ಮ ದೌರ್ಬಲ್ಯವನ್ನು ಹೇಳುವುದು. ಪ್ರೀತಿಯಿಂದ ಮಾತನಾಡಿದರೆ ಎಲ್ಲವೂ ನಿಮ್ಮದಾಗುವುದು. ಅದನ್ನು ನೀವು ಜಾಣ್ಮೆಯಿಂದ ಸರಿ ಮಾಡಿಕೊಳ್ಳಿ. ಅನಾರೋಗ್ಯದಿಂದ ನಿಮಗೆ ಉತ್ಸಾಹ ಕಡಿಮೆಯಾಗುವುದು. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ದೂರದ ಬಂಧುಗಳ ಭೇಟಿಯ ನಿರೀಕ್ಷೆಯಲ್ಲಿ ಇರುವಿರಿ.

ಧನು ರಾಶಿ: ನಿಮ್ಮ ಉಪಕಾರವನ್ನು ಇಂದು ಸ್ಮರಿಸಿಕೊಳ್ಳುತ್ತಾರೆ. ಹಿತಶತ್ರುಗಳಿಂದ ನಿಮಗೆ ನೆಮ್ಮದಿ ಕಡಿಮೆಯಾಗಬಹುದು. ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯ ಲಭ್ಯ. ವಿದ್ಯಾರ್ಥಿಗಳ ಪ್ರಗತಿಯ ವಿಷಯವು ಮಂದಗತಿಯಲ್ಲಿಯೇ ಇರುವುದು. ಸಕಾರಾತ್ಮಕ ಚಿಂತನೆಯನ್ನೇ ಮಾಡಿಕೊಳ್ಳಿ. ನಂಬಿಕೆಯನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಕಷ್ಟವಾದೀತು. ಕಾರ್ಯದ ಸ್ಥಳದಲ್ಲಿ ಅಪವಾದ ಬರಬಹುದು. ಕಛೇರಿಯಲ್ಲಿ ನಿಮಗೆ ಆಗದವರ ಸಂಗವು ನಿರ್ಮಾಣ ಕಾರ್ಯಕ್ರಮ. ಶುಭ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಮನೆಯ ಕೆಲಸವು ಸರಿಯಾಗಿ ಆಗದೇಹೋಗಬಹುದು. ಭೂವ್ಯವಹಾರಕ್ಕೆ ಸರ್ಕಾರದ ಕೆಲಸವು ಸ್ವಲ್ಪ ವೇಗವನ್ನು ಪಡೆದುಕೊಳ್ಳುವುದು. ವೈದ್ಯಕೀಯ ವ್ಯತ್ಯಾಸದಿಂದ ಆರೋಗ್ಯ ಇನ್ನಷ್ಟು ಕೆಡಬಹುದು. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆ ನೀವು ಮಾಡಿಕೊಳ್ಳಬೇಕಾದೀತು. ವ್ಯಾಪಾರದಲ್ಲಿ ಚಾಣಾಕ್ಷತೆಯಿಂದ ಲಾಭವನ್ನು ಪಡೆದುಕೊಳ್ಳಿ. ಇಂದು ನೀವು ಯಾವುದೋ ಚಿಂತೆಯಲ್ಲಿ ಇರುವಿರಿ.

ಮಕರ ರಾಶಿ: ಬೇಜವಾಬ್ದಾರಿಯ ಕಾರಣಕ್ಕೆ ನಿಮ್ಮನ್ನು ನಿಂದಿಸುತ್ತಾರೆ. ನಿಮ್ಮ ಹಳೆಯ ನೌಕರರನ್ನು ಕೈಬಿಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ಆಲೋಚನೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿಮ್ಮ ಕುಶಲ ಕಾರ್ಯಗಳು ಇತರರಿಗೂ ಗೊತ್ತಾದೀತು. ವೇತನವು ಹೆಚ್ಚಾಗುವ ಸಾಧ್ಯತೆಯಿದೆ. ತಾಯಿಗೆ ನಿಮ್ಮ ಕಡೆಯಿಂದ ಅಮೂಲ್ಯವಾದ ಕೊಡುಗೆ ಕೊಡುವಿರಿ. ನಿಮ್ಮ ಸಭ್ಯತೆಯನ್ನು ಬಳಸುತ್ತಾರೆ. ಸಂಗಾತಿಯ ಜೊತೆ ಸಂತೋಷದಿಂದ ಇರಲು ಆಗದು. ಸಂಪತ್ತಿನ ಉಳಿತಾಯದ ಮಾರ್ಗವನ್ನು ನೀವು ವಿಫಲಗೊಳಿಸಿರಿ. ನಿಮಗೆ ಸಿಗದೇ ಇರುವ ಜವಾಬ್ದಾರಿಯ ಬಗ್ಗೆ ನಿಮಗೆ ಸ್ವಲ್ಪ ಅಸಮಾಧನ ಇರಬಹುದು. ರಾಜಕೀಯದಲ್ಲಿ ಮರ್ಯಾದೆ ಬಿಡಬೇಕಾಗುವುದು. ಮುಚ್ಚು ಮರೆ ಇಲ್ಲದೇ ಎಲ್ಲವೂ ಆಪ್ತರ ಜೊತೆ ಹಂಚಿಕೊಳ್ಳುವ ಸಂಭವವಿದೆ. ಶಿಸ್ತನ್ನು ಬಿಡದೆ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಪರಿಚಿತರು ನಿಮ್ಮನ್ನು ಹಳಿಯಬಹುದು.

ಕುಂಭ ರಾಶಿ: ಯಾರೋ ಯಾವುದೋ ಕಾರ್ಯದಲ್ಲಿದ್ದರೂ ಮನೆಯ ಬಗ್ಗೆ ಆಲೋಚನೆ. ಒತ್ತಡದ ಕಾರಣ ಕೆಲಸವನ್ನು ನೀವು ಬಿಡಬೇಕಾಗುವುದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಬರುವ ಅಲ್ಪ ಆದಾಯವನ್ನು ನೀವು ರಕ್ಷಿಸಲು ಪ್ರಯತ್ನಿಸುವಿರಿ. ಕುಟುಂಬಕ್ಕೆ ನಿಮ್ಮ ಮೇಲೆ ಪ್ರೀತಿಯು ಅಧಿಕ ಪ್ರದರ್ಶನ. ಓಡಾಟದಿಂದ ಆಯಾಸಗೊಳ್ಳುವಿರಿ. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳಬಹುದು. ಆಸ್ತಿಯ ವಿಚಾರದಲ್ಲಿ ವಾದಗಳು ಆಗಬಹುದು. ಆಲಸ್ಯದಿಂದ ನಿಮ್ಮ ಎಲ್ಲ ಕೆಲಸಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಇಷ್ಟಪಡುವುದು ಉತ್ತಮ. ನಿಮ್ಮ ಮುಖಸ್ತುತಿಯನ್ನು ಮಾಡಬಹುದು. ನಿಮ್ಮೊಳಗಿರುವ ಖಾಯಿ ಆಹಾರದ ವ್ಯತ್ಯಾಸದಿಂದ ಎಚ್ಚರಿಕೆಯ ವಸ್ತು. ಯಾರನ್ನಾದರೂ ನಂಬಲು ನಿಮ್ಮ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿ. ದೂರದವರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ.

ಮೀನ ರಾಶಿ: ನಿಮ್ಮ ಹೊಣೆಗಾರಿಕೆಯನ್ನು ಪೂರ್ಣ ಮಾಡಿಕೊಂಡ ಸಂತೃಪ್ತಿ ನಿಮ್ಮಲ್ಲಿರುವುದು. ನಿಮ್ಮ ಜೀವನಕ್ಕೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸುವಿರಿ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಸಾಮಾಜಿಕ ಕಾರ್ಯಗಳು ನಿಮಗೆ ಪ್ರಶಂಸೆಯನ್ನು ತಂದುಕೊಡುವುದು. ಅಂದುಕೊಂಡ ಕಾರ್ಯವು ಪೂರ್ಣವಾಗಿ ಆಗುವುದಿಲ್ಲ. ಮಾತುಗಳನ್ನು ಇಂದು ಕಡಿಮೆ ಮಾಡಿಕೊಳ್ಳುವಿರಿ. ಎಂದೋ ಆಗುವ ತೊಂದರೆಯನ್ನು ಇಂದು ನೆನೆಯುವುದು ಬೇಡ. ಸಂಪತ್ತಿನ ನಿರ್ವಹಣೆಯನ್ನು ಮಾಡಲು ನೀವು ಸಮರ್ಥರಾಗುವಿರಿ. ಅಪರಿಚಿತರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಿ. ಕೃಷಿಯಲ್ಲಿ ನಿಮಗೆ ಸ್ವಲ್ಪ ಆಸಕ್ತಿ ಬರುವುದು. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ನಿಮ್ಮ ಪಾಲೂ ಇರುವುದು. ನಿಮ್ಮನ್ನು ನೇರವಾಗಿ ಕೇಳಿದ್ದಕ್ಕೆ ಮಾತ್ರ ಉತ್ತರಿಸುವುದು ಒಳ್ಳೆಯದು. ತಂತ್ರಜ್ಞಾನದಲ್ಲಿ ನಿಮಗೆ ಒಳ್ಳೆಯ ಹಿಡಿತಕ್ಕೆ ಗೊತ್ತಾಗುವುದು.

ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *