Headlines

ಚಿತ್ತಾಪುರದಲ್ಲಿ ಪಥಸಂಚಲನ ಫೈಟ್: RSS, ಭೀಮ ಆರ್ಮಿ ಬಳಿಕ ಮತ್ತೆರಡು ಸಂಘಟನೆಗಳಿಂದ ಅರ್ಜಿ

ಚಿತ್ತಾಪುರದಲ್ಲಿ ಪಥಸಂಚಲನ ಫೈಟ್: RSS, ಭೀಮ ಆರ್ಮಿ ಬಳಿಕ  ಮತ್ತೆರಡು ಸಂಘಟನೆಗಳಿಂದ ಅರ್ಜಿ


ಕಲಬುರಗಿ, (ಅಕ್ಟೋಬರ್ 23): ಸಚಿವ ಪ್ರಿಯಾಂಕ್ ಖರ್ಗೆ (ಪ್ರಿಯಾಂಕ್ ಖರ್ಗೆ)ಅವರ ತವರು ಕ್ಷೇತ್ರ ಚಿತ್ತಾಪುರ (ಚಿತ್ತಾಪುರ) ಸದ್ಯ ರಾಜ್ಯಾಧ್ಯಂತ ಸುದ್ದಿಯಲ್ಲಿದೆ. ಆರ್ಎಸ್ಎಸ್ (ಆರ್ಎಸ್ಎಸ್)ಪಥಸಂಚಲನ ಸಂಬಂಧ ಭಾರೀ ಪೈಪೋಟಿ ನಡೆದಿದ್ದು, ನ್ಯಾಯಾಲಯದ ಮೆಟ್ಟಿಲೇರಿ ಇದೀಗ ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ ಎಸ್ ಎಸ್ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆ ಭೀಮ್ ಆರ್ಮಿ ಸಹ ಅಂದೇ ಪಥಸಂಚಲನಕ್ಕೆ ಅನುಮತಿ ನೀಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಹಾಗೇ ಕುರುಬ ಸಮುದಾಯ ಸಹ ಎಸ್ಟಿ ಮೀಸಲಾತಿಗಾಗಿ ಪ್ರತಿಭಟನೆ ಮಾಡಲು ಮುಂದಾಗಿದೆ. ಇದರ ನಡುವೆ ಇದೀಗ ರೈತ ಸಂಘಟನೆ ಹಾಗೂ ಕ್ರಿಶ್ಚಿಯನ್ ಸಮುದಾಯ (ರೈತರು ಮತ್ತು ಕ್ರಿಶ್ಚಿಯನ್) ಸಹ ಪಥಸಂಚಲನ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಎಲ್ಲರ ಚಿತ್ತ ಇದೀಗ ಚಿತ್ತಾಪುರದತ್ತ ನೆಟ್ಟಿದೆ.

ರೈತ ಪಥಸಂಚಲನ

ಯಾವಾಗ ಇಲ್ಲಿ ಆರ್ ಎಸ್ ಪಥಸಂಚಲನ ಮಾಡಲು ಹೈಕೋರ್ಟ್ ಮೆಟ್ಟಿಲೇರಿತೋ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಸದ್ಯ ಆರ್ ಎಸ್ ಎಸ್ ನವೆಂಬರ್ 2ರಂದು ಪಥಸಂಚಲನ ನಡೆಯಲಿದೆ ಎಂದು ಹೇಳಿದ್ದೆ ತಡ ನಾನು ಮುಂದು ತಾ ಮುಂದು ಎಂಬಂತೆ ಬೇರೆ ಬೇರೆ ಸಂಘಟನೆಗಳು ಆರ್ಜಿ ಸಲ್ಲಿಸುತ್ತಲೇ ಇವೆ. ಇವತ್ತು ರೈತಸಂಘಟನೆ ಕೂಡ ಎಂಟ್ರಿ ಕೊಟ್ಟಿದೆ. ಹೌದು…ನವೆಂವರ್ 2ರಂದೇ ಕೇಂದ್ರ ಸರ್ಕಾರದ ವಿರುದ್ಧ ಅತಿವೃಷ್ಟಿ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಲು ಮುಂದಾಗಿದೆ. ರೈತ ಪಥಸಂಚಲನ ಸಂಬಂಧ ರಾಜ್ಯ ರೈತ ಸಂಘಟನೆ ಹಸಿರ ಸೇನೆ ಬಣ ಅನುಮತಿಗಾಗಿ ಅರ್ಜಿ ಹಾಕಿದೆ. ಆರ್ ಎಸ್ ಎಸ್ ರೈತರ ಉದ್ದಾರಕ್ಕಾಗಿ ಮಾಡುತ್ತಿದೆ. ನಾವು ಹಾಗೂ ಎನ್ ಡಿಆರ್ ಎಫ್ ನಲ್ಲಿ ಕೇಂದ್ರ ಸರ್ಕಾರ ನಮಗೆ ಕಡಿಮೆ ಅನುದಾನ ನೀಡುವುದನ್ನು ವಿರೋಧಿಸಿ ರೈತ ಪಥಸಂಚಲನ ಮಾಡಲಾಗುತ್ತೆ ಎಂದು ರೈತರು.

ಇದನ್ನೂ ಓದಿ: ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್ ಎಸ್ ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ

ಕ್ರಿಶ್ಚಿಯನ್ ಸಮುದಾಯದಿಂದ ಪ್ರಾರ್ಥನ ನಡಿಗೆ

ಇನ್ನು ನವೆಂಬರ್ 2 ರಂದು ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನ ರಾಜ್ಯ ಕ್ರಿಶ್ಚಿಯನ್ ವೆಲ್ಪೇರ್ ಸೊಸೈಟಿ ಸಹ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ನವೆಂಬರ್ 2 ಭಾನುವಾರದಂದು ಕ್ರಿಶ್ಚಿಯನ್ ಸಮುದಾಯ ಸಹಜವಾಗೇ ಪ್ರಾರ್ಥನೆ ಮಾಡುತ್ತೆ. ಅಂದು ಚರ್ಚ್ ಬದಲಿಗೆ ಪ್ರಾರ್ಥನ ನಡಿಗೆ ಮಾಡುತ್ತೆವೆ ಎಂದು ಆರ್ಜಿ ಸಲ್ಲಿಕೆ ಮಾಡಿದೆ. ಆರ್ ಎಸ್ ಎಸ್ ಗೆ ಕೌಂಟರ್ ಆಗಿ ನಾವು ಪ್ರಾರ್ಥನ ನಡಿಗೆ ಮಾಡುತ್ತಿಲ್ಲ.ಬದಲಾಗಿ ಶಾಂತಿ ಸುವ್ಯವಸ್ಥೆ ಅರಿವು ಮೂಡಿಸಲು ಸಾಧ್ಯವಾಗುತ್ತಿದೆ. ಇದನ್ನೇ ಆರ್ ಎಸ್ ಎಸ್ ಕೌಂಟರ್ ಅಂತ ತಿಳಿದುಕೊಂಡರೆ ಸ್ವಾಗತ ಎಂದು ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಹೇಳುತ್ತಿದ್ದಾರೆ.

ನ.2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 7 ಅರ್ಜಿ

ಸದ್ಯ ಇಲ್ಲಿಯವರೆಗೆ ಚಿತ್ತಾಪುರದಲ್ಲಿ ನವೆಂಬರ್ 2 ರಂದು ಪಥಸಂಚಲನ ಮಾಡಲು ಒಟ್ಟು ಏಳು ಅರ್ಜಿ ಸಲ್ಲಿಕೆಯಾಗಿದೆ. ಎಲ್ಲಾ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ.ಅಲ್ಲದೇ ಈ ಬಗ್ಗೆ ನ್ಯಾಯಾಲಯ ಸಹ ಕೋಟ್೯ ವರದಿ ನೀಡಲಿದೆ, ಅದರ ಆಧಾರದ ಮೇಲೆ ಕೋಟ್೯ ನಾಳೆ (ಅಕ್ಟೋಬರ್ 24) ವಿಚಾರಣೆ ನಡೆಸುತ್ತದೆ. ಇದರಿಂದ ನಾಳೆ ನ್ಯಾಯಾಲಯದಲ್ಲಿ ಯಾರಿಗೆ ಅವಕಾಶ ಸಿಗುತ್ತೆ ಅಂತ ಕೂತುಹಲ ಮೂಡಿಸಿದೆ.

ಒಟ್ಟಿನಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅರ್ಜಿ ಸಲ್ಲಿಸಿ ಉಳಿದವರು ಜಿದ್ದಿಗೆ ಬಿದ್ದವರಂತೆ ಆರ್ಜಿ ಸಲ್ಲಿಸಿದ್ದಾರೆ. ಅವೆಲ್ಲವೂ ನಾಳೆ ನ್ಯಾಯಾಲಯದ ಮುಂದೆ ಬರುತ್ತಿವೆ. ಹೀಗಾಗಿ ಎಲ್ಲರ ಚಿತ್ತ ನಾಳೆ ಕೋಟ್೯ ಕಲಾಪದ ನೆಟ್ಟಿದೆ.

ರಂದು ಪ್ರಕಟಿಸಲಾಗಿದೆ – 7:10 pm, ಗುರುವಾರ, 23 ಅಕ್ಟೋಬರ್ 25



Source link

Leave a Reply

Your email address will not be published. Required fields are marked *