ದಾವಣಗೆರೆ, (ಅಕ್ಟೋಬರ್ 23): ನವೆಂಬರ್ ಕ್ರಾಂತಿನೋ, ಡಿಸೆಂಬರ್ ಕ್ರಾಂತಿನೋ ಗೊತ್ತಿಲ್ಲ. ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಸರ್ಕಾರಕ್ಕೆ ಬಂದಾಗಿನಿಂದ ನಾಯಕತ್ವ ಬದಲಾವಣೆ ವಿಚಾರ, ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ತಿ ಆಗ್ತಿರುವ ಈ ಹೊತ್ತಲ್ಲಿ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ಯತೀಂದ್ರ ಆಡಿದ ಮಾತು ರಾಜ್ಯ ಕಾಂಗ್ರೆಸ್ ನಲ್ಲಿ ಆಕ್ರೋಶಗೊಂಡು ಕಿಡಿ ಕಾರಿದೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.
ಇನ್ನು ಈ ದಾವಣಗೆರೆಯಲ್ಲಿಂದು ಶಾಸಕ ಶಿವಗಂಗಾ ಬಸವರಾಜ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉತ್ತರಾಧಿಕಾರಿ ನೇಮಕ ಮಾಡಲು ಇದು ಮೈಸೂರು ರಾಜರ ಮನೆ ಅಲ್ಲ. ರಾಜರ ವಂಶದಲ್ಲಿ ಉತ್ತರಾಧಿಕಾರದ ಪದ್ಧತಿ ಇರುತ್ತೆ. ಕಾಂಗ್ರೆಸ್ ಹೈಕಮಾಂಡ್ ಪಕ್ಷ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯಗೆ ತಿವಿದಿದ್ದಾರೆ.