ಆನೇಕಲ್: ಆರ್​​​ಟಿಓ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ತೆರಿಗೆ ಕಟ್ಟದ 25 ಬಸ್​​​ಗಳು ಜಪ್ತಿ

ಆನೇಕಲ್: ಆರ್​​​ಟಿಓ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ತೆರಿಗೆ ಕಟ್ಟದ 25 ಬಸ್​​​ಗಳು ಜಪ್ತಿ


ಆನೇಕಲ್, ಅಕ್ಟೋಬರ್ 24: ರಾಜ್ಯದ ಸಾರಿಗೆ ಇಲಾಖೆಗೆ ನಿಗದಿತ ತೆರಿಗೆ (ತೆರಿಗೆ) ಕಟ್ಟದೆ ಪ್ರಯಾಣಿಕರನ್ನ ಹೊತ್ತು ಅಕ್ರಮವಾಗಿ ಸಂಚರಿಸುತ್ತಿದ್ದ ಅನ್ಯ ರಾಜ್ಯಗಳ ಪ್ರವಾಸಿ ಬಸ್ಸುಗಳಿಗೆ (ಪ್ರವಾಸಿ ಬಸ್ಸುಗಳು) ಆರ್ ಟಿಓ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ. ಅತ್ತಿಬೆಲೆ ಚೆಕ್ ಪೋಸ್ಟ್‌ನಲ್ಲಿ ಬರೋಬ್ಬರಿ ಇಪ್ಪತ್ತೈದು ಬಸ್‌ಗಳನ್ನು ವಶಕ್ಕೆ ಪಡೆದು ಸೀಜ್ ಮಾಡಿದ್ದು, ಟ್ಯಾಕ್ಸ್‌ಗೆ ಬಸ್‌ಗೆ ನೋಟೀಸ್ ನೀಡಲಾಗಿದೆ.

ತೆರಿಗೆ ಕಟ್ಟದೇ ಸಂಚಾರ: ರಾಜ್ಯ ಸಾರಿಗೆ ಇಲಾಖೆಗೆ ನಷ್ಟ

ಹೌದು. ಬೆಳ್ಳಂಬೆಳಗ್ಗೆ ಅತ್ತಿಬೆಲೆ ಟೋಲ್ ಬಳಿ ಫಿಲ್ಡಿಗಿಳಿದ ಆರ್‌ಓಟಿ ಅಧಿಕಾರಿಗಳು ಕರ್ನಾಟಕ ರಾಜ್ಯಕ್ಕೆ ತೆರಿಗೆ ಕಟ್ಟದ ಬಸ್‌ಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಅಪರ ಸಾರಿಗೆ ಆಯುಕ್ತೆ ಓಮ್ಕಾರೇಶ್ವರಿ ನೇತೃತ್ವದಲ್ಲಿ ಜಂಟಿ ಸಾರಿಗೆ ಆಯುಕ್ತೆ ಶೋಭಾ ಹಾಗೂ ಗಾಯತ್ರಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತಮಿಳುನಾಡು, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಬಸ್ಸುಗಳನ್ನು ತಡೆದು ಪರಿಶೀಲನೆ ನಡೆಸಿದಾಗ ತೆರಿಗೆ ಕಟ್ಟದೇ ಸಂಚಾರ ನಡೆಸುತ್ತಿರುವುದು ರಾಜ್ಯ ಸಾರಿಗೆ ಇಲಾಖೆಗೆ ನಷ್ಟ ಉಂಟು ಮಾಡಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಬಸ್ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್; ಡಿಎಲ್ ರದ್ದಿಗೂ ಶಿಫಾರಸು

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಆನೇಕಲ್‌ನ ಅತ್ತಿಬೆಲೆಯ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿ 25 ಖಾಸಗಿ ಟೂರಿಸ್ಟ್ ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ಬಸ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 25 ಬಸ್‌ಗಳಿಂದ ಒಟ್ಟಾರೆ 44 ಲಕ್ಷಕ್ಕೂ ಅಧಿಕ ಟ್ಯಾಕ್ಸ್ ಬಾಕಿ ಇದೆ. ಅದಲ್ಲದೆ ಪರವಾನಗಿ ನಿಯಮಗಳ ಉಲ್ಲಂಘನೆ, ಕರ್ನಾಟಕ ಸ್ಟೇಟ್ ಟ್ಯಾಕ್ಸ್ ಕಟ್ಟಿಲ್ಲ ಹೀಗಾಗಿ ನಮ್ಮ ರಾಜ್ಯದ ತೆರಿಗೆ ಕಟ್ಟಿಸಿಕೊಳ್ಳಲು ಈ ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದು ಅತ್ತಿಬೆಲೆ ಚೆಕ್ ಪೋಸ್ಟ್ನ ಹಿರಿಯ ವಾಹನ ವಾಹನ ನಿರೀಕ್ಷಕ ರಂಜಿತ್ ಆರಂಭ.

ಬಸ್ ಮಾಲೀಕ ಮಹದೇವ್ ಹೇಳಿದ್ದಿಷ್ಟು

ಈ ಆಲ್ ಇಂಡಿಯಾ ಪರ್ಮಿಟ್ ತಮಿಳುನಾಡಿನಿಂದ ಕರ್ನಾಟಕಕ್ಕೆ ಟೂರಿಸ್ಟ್ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿತ್ತು. ನಮಗೆ ಟ್ಯಾಕ್ಸ್ ಕಟ್ಟಬೇಕಿರುವ ಬಗ್ಗೆ ತಿಳಿದಿರಲಿಲ್ಲ ಬೆಳಿಗ್ಗೆ ಪ್ರಯಾಣಿಕರನ್ನು ಕರೆತರುವಾಗ ಅತ್ತಿಬೆಲೆ ಪೋಸ್ಟ್‌ನಲ್ಲಿ ಆರ್ಟಿಓ ವಾಹನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈಗ 1 ಲಕ್ಷ 80 ಸಾವಿರ ರೂ ಟ್ಯಾಕ್ಸಿ ಹಣವನ್ನ ಕಟ್ಟಿ ಬಸ್ಸು ಹೋಗುತ್ತಿತ್ತು ಎಂದು ಬಸ್ ಮಾಲೀಕ ಮಹದೇವ್.

ಇದನ್ನೂ ಓದಿ: ಬೆಂಗಳೂರು ಸಂಚಾರ ಸಲಹೆ: 21 ದಿನಗಳ ಕಾಲ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಒಟ್ಟಿನಲ್ಲಿ ರಾಜ್ಯಕ್ಕೆ ಟ್ಯಾಕ್ಸ್ ಕಟ್ಟದೆ ಹೊರರಾಜ್ಯದ ಬಸ್‌ಗಳಿಗೆ ಆರ್‌ಟಿಓ ಅಧಿಕಾರಿಗಳು ಕಡಿವಾಣ ಹಾಕಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *