Headlines

Horoscope Today 25 Oct: ಇಂದು ಈ ರಾಶಿಯವರ ಪ್ರಯತ್ನ ಫಲಿಸುವುದು, ಅದೃಷ್ಟಕ್ಕೆ ಕಾಯಬೇಕಿಲ್ಲ

Horoscope Today 25 Oct: ಇಂದು ಈ ರಾಶಿಯವರ ಪ್ರಯತ್ನ ಫಲಿಸುವುದು, ಅದೃಷ್ಟಕ್ಕೆ ಕಾಯಬೇಕಿಲ್ಲ


ಬೆಂಗಳೂರು, ನಿತ್ಯ ಪಂಚಾಗ, ಅಕ್ಟೋಬರ್ 25: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ಸೂರ್ಯ ನಿತ್ಯನಕ್ಷತ್ರ : ಮೂಲ, ಯೋಗ : ಆಯುಷ್ ಸೂರ್ಯ, – 6ೋದಯ ಆಮ್, – 50 ವಣಿಜಮಾನ್, – 50 ವಣಿಜಮಾನ್, –50. – 54 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:08 – 10:36, ಗುಳಿಕ ಕಾಲ 06:13 – 07:40, ಯಮಗಂಡ ಕಾಲ 13:31 – 14:59.

ಮೇಷ ರಾಶಿ: ಸಹವರ್ತಿಗಳ ಒತ್ತಾಯಕ್ಕೆ ಅತಿಯಾದ ಚಾಲನೆ, ಭಕ್ಷಣ, ಪಾನ ಎಲ್ಲವೂ ಅಪಾಯಕಾರಿ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಸೋಲಾಗಬಹುದು. ಇಂದು ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದು ಬಿಡುವುದು. ಶತ್ರುಗಳ ಬಗ್ಗೆ ನೀವು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಅನಿರೀಕ್ಷಿತ ವಾರ್ತೆಗಳು ನಿಮ್ಮ ಮನಸ್ಸನ್ನು ಖಿನ್ನಗೊಳಿಸುತ್ತವೆ. ಬಂಧುಗಳ ಪ್ರೀತಿಯು ನಿಮಗೆ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ಅತಿಯಾದ ಕೋಪ ಬಂದರೂ ಸ್ಥಾನದ ದೃಷ್ಠಿಯಿಂದ ತಾಳ್ಮೆ ಬಿಡಲಾಗದು. ಸಂಗಾತಿಯ ಆರೋಗ್ಯವು ಚಿಂತೆಗೀಡುಮಾಡಿತು. ನಿಮ್ಮ ಕೊಟ್ಟ ಜವಾಬ್ದಾರಿಯನ್ನು ಸಕಾಲಕ್ಕೆ ಪೂರ್ಣಗೊಳಿಸಿಯೇ ಸಿದ್ಧ ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ. ಸುಳ್ಳು ಹೇಳವ ಸಂದರ್ಭವೂ ಬರಬಹುದು. ಉದ್ವೇಗಕ್ಕೆ ಸಿಲುಕಿ ಏನನ್ನಾದರೂ ಮಾಡಲು ಹೋಗುವಿರಿ. ಸಮೂಹದ ಜೊತೆ ನಿಮ್ಮ ಕೆಲಸ ಆಗುವುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಒತ್ತಡದಿಂದ ಒಳ್ಳೆಯ ಕಾರ್ಯವೂ ಹಾಳಾಗುವುದು.

ವೃಷಭ ರಾಶಿ: ಬರುವ ಅಪರೂಪದ ಅವಕಾಶಗಳಿಗೆ ಕಾರಣ ಕೊಟ್ಟು ದೂರ ಕಳುಹಿಸುವಿರಿ. ಆದರೆ ಇಂದು ಬರುವ ಸಂದರ್ಭವನ್ನು ಅನುಸರಿಸಿದರೆ ಉತ್ತಮ ಮಾರ್ಗವು ನಿಮಗೆ ತೆರೆದುಕೊಳ್ಳುತ್ತದೆ. ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುತ್ತೀರಿ. ಬಂಧುಗಳು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಯಾರ ಮೇಲಾದರೂ ನಿಮ್ಮ ತಪ್ಪನ್ನು ಹಾಕುವಿರಿ. ಬರುವ ಆದಾಯಕ್ಕೆ ಅಡೆತಡೆಗಳು ಬರಬಹುದು. ಸ್ನೇಹವು ಶಿಥಿಲವಾಗುವುದು. ನಿಮಗೆ ಬೇಕಾದುದನ್ನು ಮಾತ್ರ ಇಟ್ಟುಕೊಂಡು ಬೇಡದ್ದನ್ನು ಕೊಡಿ. ಬಹಳ ದಿನಗಳಿಂದ ನಿಮ್ಮ ಕೆಲಸವು ವೇಗವಾಗಿ ಸಾಗುತ್ತಿರುವ ನಿರೀಕ್ಷೆಯಲ್ಲಿ ಮಂದಗತಿಯಲ್ಲಿ ಸಾಗುವುದು. ನಿಮ್ಮೊಳಗೆ ಒತ್ತಡ ನಿರ್ಮಾಣವಾಗಿ ಸಿಟ್ಟಾಗುವ ಸಂದರ್ಭವೂ ಬರುವುದು. ಎಲ್ಲರ ಜೊತೆ ತಾಳ್ಮೆಯಿಂದ ಮಾತನ್ನಾಡಿ. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿ ಪ್ರದರ್ಶನ. ಸಾಹಸ ಮಾಡಲು ಹೋಗಿ ಮುಗ್ಗರಿಸುವಿರಿ.

ಮಿಥುನ ರಾಶಿ: ಮನೆಯ ಬಾಗಿಲಿಗೆ ಬಂದವರಿಗೆ ನಿರಾಸೆ ಮಾಡದೇ ಒಳ್ಳೆಯ ಮಾತುಗಳಿಂದ ಕಳುಹಿಸಿಕೊಡಿ. ಭರವಸೆಯ ಮಾತುಗಳೇ ನಿಮಗೆ ಧೈರ್ಯವನ್ನು ಕೊಡಬಹುದು. ಉದ್ಯೋಗದಲ್ಲಿ ಆಗದ ಸಣ್ಣ ತಪ್ಪಿನಿಂದ ನಷ್ಟವಾಗಲಿದ್ದು ಅದು ನಿಮ್ಮ ಮೇಲೆ ಬರಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಹೆದರಿಕೆ ಆಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮವನ್ನು ತೆಗೆದುಕೊಳ್ಳಿರಿ. ಅನಿರೀಕ್ಷಿತವಾಗಿ ಪ್ರಸಿದ್ಧ ವ್ಯಕ್ತಿಗಳ ಭೇಟಿಯಾಗುವುದು. ಸರಿಯಾದ ಕಡೆ ಹೂಡಿಕೆ ಮಾಡದೇ ಹಣವನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದು ಕಷ್ಟವಾಯಿತು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದರೆ ಯಾವ ವಿಷಯಕ್ಕೂ ಇರಲಾರಿರಿ.

ಕರ್ಕಾಟಕ ರಾಶಿ: ಸೇವಾ ಮನೋಭಾವದಿಂದ ಮಾಡಿದ ಕಾರ್ಯ ನಿಮಗೆ ಪಾಠವೂ ಆಗುವುದು. ಸ್ವಂತಿಕೆಗೆ ಅಧಿಕ ಬಲ ಬರುವುದು. ದುರಸ್ತಿ ಕಾರ್ಯಗಳಿಗೆ ಸಂಪತ್ತನ್ನು ಖಾಲಿಮಾಡಬೇಡಿ. ಅಗತ್ಯವನ್ನು ನೋಡಿ ಮುಂದುವರಿಯಿರಿ. ಇಂದು ನೀವು ಬಹಳ ಅನಂತರ ಸಂಗಾತಿಯ ಜೊತೆ ದೂರದ ದಿನಗಳಲ್ಲಿ ಪ್ರಯಾಣ ಮಾಡುವಿರಿ. ಹಠದ ಸ್ವಭಾವದಿಂದ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಇಂದು ವ್ಯವಹಾರವನ್ನು ಮಾಡಲು ನಿಮಗೆ ಧೈರ್ಯವು ಸಾಕಾಗುವುದಿಲ್ಲ. ವಾಹನದಿಂದ ಇಂದು ಆದಾಯ ಬರಬಹುದು. ವಿವಾಹಕ್ಕೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ. ವಿದೇಶೀಯ ಹೂಡಿಕೆಗೆ ನಿಮಗೆ ಧೈರ್ಯ ಸಾಲದು. ಬಂಧುಗಳು ನಿಮ್ಮನ್ನು ಅಳೆಯುವರು. ಉನ್ನತ ಅಭ್ಯಾಸವನ್ನು ಮಾಡುವ ಅಪೇಕ್ಷೆ ಇರಲಿದೆ. ಅದಕ್ಕಾಗಿ ಆರ್ಥಿಕ ಸಹಾಯವನ್ನು ಇತರರಿಂದ ಕೇಳುವಿರಿ. ಹೂಡಿಕೆಯಿಂದ ಹಿಂಜರಿಯುವ ಸಾಧ್ಯತೆಯಿದೆ. ಆಪ್ತರ ಮಾತಿನಿಂದ ನಿಮಗೆ ಬೇಸರದ ಸಂಗತಿ. ಕುಟುಂಬದ ಮೇಲೆ ಬೇಸರ ಬರಬಹುದು. ನಿಮ್ಮ ಭಾವವನ್ನು ಬಂಧಿಸಿದರೂ ಅದು ಗೊತ್ತಾಗುವುದು.

ಸಿಂಹ ರಾಶಿ: ಪ್ರೀತಿಪಾತ್ರರ ಭಾರವನ್ನೂ ಇಂದು ಹೊರಬೇಕಾಗುವುದು. ಶಿಕ್ಷಕರ ಸಮಸ್ಯೆ ಎದುರಾಗುವುದು. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಗೃಹ ಬಳಕೆಗೆ ಬೇಕಾದ ಸಾಮಾನುಗಳನ್ನು ನೀವು ಖರೀದಿಸುವ ಭರದಲ್ಲಿ ಖರ್ಚಿನ ಬಗ್ಗೆಯೂ ಸೂಕ್ತ ಆಲೋಚನೆಯನ್ನು ಮಾಡಿ. ಶತ್ರುಗಳ ವಿರುದ್ಧ ಸಮರಸಾರದೇ ತಾಳ್ಮೆಯಿಂದ ನಿರ್ವಹಿಸುವಿರಿ. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವು ಚೆನ್ನಾಗಿರುವುದು. ಸಂಗಾತಿಯು ನಿಮ್ಮ ಕೆಲಸದ ಪೂರ್ವಾಪರಗಳನ್ನು ವಿಚಾರಿಸಬಹುದು, ಸಿಟ್ಟಾಗದೇ ಉತ್ತರಿಸಿ. ನಿಮ್ಮ ಗುರಿಯ ಬಗ್ಗೆ ಕೆಲವರು ಆಡಿಕೊಂಡರು. ಅದನ್ನು ಕೇಳದೆ ಮುಂದಡಿಯಿಡಬೇಕಾಗುವುದು. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮದೇ ಕೆಲಸವಾದರೂ ಸಂಪೂರ್ಣ ಯಶಸ್ಸನ್ನು ನೀವು ಪಡೆಯಲಾರಿರಿ. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕವಾಗಿ ಪಡೆಯುವುದು ಬೇಡ. ಸಂಗಾತಿಯ ವಿಷಯದಲ್ಲಿ ವಾಗ್ವಾದ. ಕೆಲವು ತೊಂದರೆಗಳನ್ನು ನೀವು ತೆಗೆದುಕೊಳ್ಳುವುದು ಅನಿವಾರ್ಯ.

ಕನ್ಯಾ ರಾಶಿ: ಸಾಮಾಜಿಕ ಪ್ರತಿಷ್ಠೆಯನ್ನು ತಂತ್ರಗಾರಿಕೆಯ ಮೂಲಕ ತಂದುಕೊಳ್ಳುವಿರಿ, ಸಹಜವಾಗಿ ಅಲ್ಲ. ಕಾರ್ಯದಲ್ಲಿ ಇಂದು ನಿಮ್ಮಿಂದಲೇ ತಪ್ಪಾಗುವುದು. ಇದರಿಂದ ಉತ್ತಮ ಕಲಿಕೆಯೂ ನಿಮಗೇ ಆಗುವುದು. ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಹೇಳಬಹುದು. ಉದ್ಯಮದಲ್ಲಿ ಆಗುವ ಒತ್ತಡವನ್ನು ನಿವಾರಿಸಲು ಅನ್ಯ ಮಾರ್ಗವನ್ನು ಸಾಧಿಸಿ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ನಿಲ್ಲದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉತ್ಸಾಹವನ್ನು ಕೊಡುವುದು. ನಿಮ್ಮ ಆರ್ಥಿಕ ವ್ಯವಸ್ಥೆ ಸರಿಮಾಡಿಕೊಳ್ಳಿ. ಲೆಕ್ಕಪತ್ರದ ವಿಷಯದಲ್ಲಿ ನಿಮಗೆ ಯಾವುದೇ ಅಡ್ಡ ದಾರಿಯನ್ನು ಹಿಡಿಯುವುದು ಬೇಡ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗಬಹುದು. ವಿದೇಶಿ ಕಂಪನಿಗಳ ಜೊತೆ ಒಪ್ಪಂದ ಸಾಧ್ಯವಾಗಿಲ್ಲ. ಸಂಬಂಧಗಳನ್ನು ಬೆಳೆಸಿಕೊಂಡಾಗಲಷ್ಟೇ ಬಾಂಧವ್ಯ ಬೆಳೆಯುವುದು. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ಪ್ರೀತಿಯಿಂದ ಆಡಿದ ಮಾತು ಇಂದು ಉಪಯೋಗಕ್ಕೆ ಬರುವುದು.

ತುಲಾ ರಾಶಿ: ಆಚರಣೆಯು ನಿಮ್ಮಳಗಿನಿಂದ ಆರಂಭವಾದರೆ ಎಲ್ಲ ಕಡೆಗಳಲ್ಲಿ ಅದು ಸಾಧ್ಯವಾಗುವುದು. ಮಾನಸಿಕವಾದ ನೋವನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುವಿರಿ. ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯ ಕೊರತೆಯು ಕಾಣುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಹೆಚ್ಚು ಕೊಡಬೇಕಾದೀತು. ಪ್ರಯೋಜನವಿಲ್ಲದೆ ಯಾವ ಕಾರ್ಯವನ್ನೂ ಮಾಡಲು ಇಷ್ಟಪಡುವುದಿಲ್ಲ. ಜನರ ಜೊತೆ ಬೆರೆಯುವುದು ಕಷ್ಟವಾದೀತು. ವಿದೇಶೀ ವ್ಯಾಪಾರದಿಂದ ನಷ್ಟವಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಮನಃಸ್ಥಿತಿಯು ಖಿನ್ನ ಸಾಧನೆ. ಮಾತಿಗಿಳಿಯುವ ಮೊದಲು ಎದುರಿನವರು ಯಾರು ಎಂಬ ಕಲ್ಪನೆ ಇರಲಿ. ನಿಮಗೆ ಹಣವನ್ನು ಉಳಿಸಿಕೊಳ್ಳುವುದು ಸಮಸ್ಯೆಯಾಗಬಹುದು. ದೂರದವರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ.

ವೃಶ್ಚಿಕ ರಾಶಿ: ಕೃಷಿಯಲ್ಲಿ ಹೂಡಿಕೆ ಮಾಡಿದ ಆರ್ಥಿಕವಾದ ಅನೇಕ ಲಾಭಗಳನ್ನು ಪಡೆದುಕೊಳ್ಳಿ. ನಿಮ್ಮ ಸ್ಥಗಿತಗೊಂಡ ಕಾರ್ಯಗಳಿಗೆ ಅನ್ಯರಿಂದ ಪ್ರೇರಣೆ ಸಿಗುವುದು. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಇಂದಿನ ದೀರ್ಘ ಪ್ರಯಾಣವು ಹಲವು ತೊಡಕುಗಳಿಂದ ಕೂಡಿರಬಹುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು.’ ಸಂಗಾತಿಯ ಮಾತಿಗೆ ನಿಮ್ಮ ಪ್ರತಿಕ್ರಿಯೆ ಇಲ್ಲದಿರುವುದು ಬೇಸರವನ್ನು ತರಬಹುದು. ಮಹಿಳಾ ಉದ್ಯೋಗಿಗಳಿಗೆ ಭಡ್ತಿ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಕಚ್ಚಾ ವಸ್ತುಗಳ ನಿರ್ವಹಣೆ, ಮಾರಾಟ, ಸಂಗ್ರಹವೇ ಮುಖ್ಯ ಕಾರ್ಯವಾಗಿದೆ. ಪಿತ್ತಸಂಬಂಧಿ ರೋಗವು ಕಾಣಿಸಿಕೊಳ್ಳಬಹುದು. ಇತಿಹಾಸಕ್ಕೆ ವಿಚಾರದಲ್ಲಿ ಶೋಧನೆಯನ್ನು ಮಾಡುವಿರಿ. ನಿಮ್ಮ ಕೆಲಸಗಳನ್ನು ಇತರರಿಗೆ ಕೊಟ್ಟುಬಿಡುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ. ಸಮಯದ ಬೆಲೆಯನ್ನು ಅನ್ಯರಿಂದ ಪಡೆದುಕೊಳ್ಳಿ. ವ್ಯಾಪಾರದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು.

ಧನು ರಾಶಿ: ಪ್ರಾಯೋಗಿಕ ಅನುಭವವೇ ನಿಮಗೆ ಆಗುವ ಕಾರಣ ಯಾವುದರಲ್ಲಿ ಹೇಗೆ ಮುಂದುವರಿಯಬೇಕು ಎಂಬ ಸ್ಪಷ್ಟತೆ ಸಿಗಲಿದೆ. ಒಳ್ಳೆಯ ಸುದ್ದಿಯನ್ನು ನಾಲ್ಕು ಜನರ ಜೊತೆ ಹಂಚಿಕೊಳ್ಳುವಿರಿ. ಇಂದು ಕಾರ್ಯಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸುತ್ತಾರೆ. ವಿವಾಹ ಯೋಗವು ಬಂದಿದ್ದು ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ.’ ನಿಮ್ಮ ಮಾತು ಯಾರನ್ನಾದರೂ ಘಾಸಿ ಮಾಡೀತು. ಜಲಮೂಲದ ವ್ಯಾಪಾರದಿಂದ ಲಾಭವನ್ನು ಕಾಣಬಹುದಾಗಿದೆ. ಆದರೆ ಕಡಿಮೆ ಲಾಭವನ್ನು ನಿರೀಕ್ಷಿಸಬಹುದು. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಮನೆಯ ನಿರ್ಮಾಣದಲ್ಲಿ ಹಿನ್ನಡೆಯಾಗುವುದು. ಮನಸ್ಸಿಗೆ ಆದ ಘಾಸಿಯನ್ನು ಹೇಳಿಕೊಳ್ಳಲಾರಿರಿ. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ. ಭವಿಷ್ಯದ ಬಗ್ಗೆ ಬಹಳ ಆಲೋಚನೆಯನ್ನು ಮಾಡಿರಿ. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ. ದೂರದ ಬಂಧುಗಳು ಹತ್ತಿರವಾಗುವರು. ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ನಿಮಗೆ ಪ್ರಶಂಸೆಯು ಬಲವನ್ನು ಕೊಡುವುದು.

ಮಕರ ರಾಶಿ: ಭಡ್ತಿಗಾಗಿ ಸಲ್ಲಿಸಿದ ಮನವಿಯನ್ನು ತಳ್ಳಿಹಾಕಬಹುದು. ನಿಮ್ಮ ವೈಯಕ್ತಿಕ ತೊಂದರೆಯನ್ನು ಎಲ್ಲಿಯೂ ಹೇಳಿಕೊಳ್ಳುವ ಮನಸ್ಸಾಗದು. ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ಇಂದು ಕಾರ್ಯದಲ್ಲಿ ಮ್ಯಾಗ್ನರಾಗಿದ್ದರೆ ಯಾವ ವಿಷಯಕ್ಕೂ ನೀವು ಭಾಗವಹಿಸಲಾರಿರಿ. ಎಲ್ಲವನ್ನೂ ಪಾಲುದಾರಿಕೆಯಲ್ಲಿ ಇರಿಸಿಕೊಳ್ಳುವಿರಿ. ಸರ್ಕಾರದ ಕೆಲಸಕ್ಕೆ ಹೆಚ್ಚು ಚಾಲನೆ ಮಾಡಬೇಕಾದೀತು. ಭೂಮಿಯ ವ್ಯವಹಾರವು ಲಾಭದಾಯಕವಲ್ಲದಿದ್ದರೂ ಅದನ್ನೇ ನಡೆಸಲು ಬಯಸುವಿರಿ. ನಿಮ್ಮ ಅತಿಯಾದ ಮಾತು ಯಾರಿಗೂ ಸುಖ ಕೊಡದು. ನಿರ್ಲಕ್ಷ್ಯದ ಮನೋಭಾವವು ನಿಮಗೆ ಹಿಡಿಸಿದೆ. ನಿಮಗೆ ಆಗಬೇಕಾದ ಕಾರ್ಯಕ್ಕೆ ಯಾರನ್ನೋ ಎತ್ತಿಕಟ್ಟುವಿರಿ. ಪಾಲುದಾರಿಕೆಯು ಬಳಕೆ ಇಲ್ಲದೇ ತಪ್ಪಿಹೋಗುವುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನಿಮ್ಮ ಜವಾಬ್ದಾರಿ ಆಗಿರುವಿರಿ. ಯಾರ ಸರಿ ತಪ್ಪುಗಳ ಬಗ್ಗೆ ನಿಮ್ಮ ವಿಮರ್ಶೆ ಬೇಡ.

ಕುಂಭ ರಾಶಿ: ಸಾಮಾಜಿಕ ತಾಣಗಳ ಮೂಲಕ ಪ್ರತಿಭಟನೆಗೆ ಬೆಂಬಲ. ಕೆಲವು ಕ್ಷಣಗಳನ್ನು ನೀವು ಕಳೆದುಕೊಳ್ಳುವ ಬೇಸರವಿರುವುದು. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ವಿಪರೀತ ಓಡಾಟದಿಂದ ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹ ಸಿಗಲಿದೆ. ಮುಖವಾಡವನ್ನು ಹಾಕಿಕೊಂಡು ವರ್ತಿಸುವ ಜನರ ಜೊತೆ ಮೈಯೆಲ್ಲ ಕಣ್ಣಾಗಬೇಕು. ಅಪರಿಚಿತರ ಸಹವಾಸವನ್ನು ಮಾಡುವಿರಿ. ಇರುವಾಗ ಎಚ್ಚರ ಇರಲಿ. ಎಲ್ಲವನ್ನೂ ಒಬ್ಬರೇ ಮಾಡಿ ಮುಗಿಸಬೇಕು ಎಂಬ ಉತ್ಸಾಹವು ನಿಮ್ಮ ಜೊತೆಗೆ ಜೋಡಿಸಿ ಕಾರ್ಯವನ್ನು ಯಶಸ್ವಿಯಾಗಿಸಿ. ಗ್ರಾಹಕರ ಬೇಡಿಕೆಗೆ ಸ್ಪಂದನೆ ಕೊಡುವಿರಿ. ಇರುವುದನ್ನು ಇದ್ದಂತೆ ಹೇಳುವುದರಿಂದ ನಿಮಗೆ ತೊಂದರೆಯಾದೀತು. ಇಂದಿನ ಒಂದು ಸಂದರ್ಭ ನಿಮ್ಮನ್ನು ಅಪಾಯದಿಂದ ತಪ್ಪಿಸುವುದು. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.

ಮೀನ ರಾಶಿ: ಯಾರಿಂದಲೂ ಕಸಿದುಕೊಳ್ಳುವ ಪ್ರಯತ್ನ ಬೇಡ. ಕೊಟ್ಟರೆ ಪ್ರೀತಿಯಿಂದ ಪಡೆಯಿರಿ. ನೆಮ್ಮದಿ ಬೇಕಾದರೆ ಕೆಲವನ್ನು ಬಿಡುವುದು ಅನಿವಾರ್ಯ. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರುತ್ತದೆ. ಬೇಕೆಂದೇ ನಿಮ್ಮ ಮೇಲೆ ಯಾರಾದರೂ ಎರಗಿ ಬರಬಹುದು. ಪ್ರತಿಕ್ರಯಿಸುವಾಗ ಎಚ್ಚರವಿರಲಿ. ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ನಿಮ್ಮ ಶುದ್ಧ ಮನಸ್ಸಿನಿಂದ ಎಲ್ಲರಿಗೂ ಶುಭವನ್ನೇ ಹಾರೈಸಿ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವಿರಿ. ಉತ್ತಮ ಅವಕಾಶಗಳನ್ನು ವೈರಾಗ್ಯ ಬುದ್ಧಿಯಿಂದ ಬಿಟ್ಟು ಕೊಡುವಿರಿ. ಕುಟುಂಬದಲ್ಲಿ ಐಕಮತ್ಯದ ಕೊರತೆಯು ಕಾಣಿಸುತ್ತದೆ. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ ಹೇರಬಹುದು.

ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *