Headlines

ಎಲ್ಲೆಂದರಲ್ಲಿ ಕಸ ಎಸೆಯುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಲೋಡ್​ಗಟ್ಟಲೆ ತ್ಯಾಜ್ಯ!

ಎಲ್ಲೆಂದರಲ್ಲಿ ಕಸ ಎಸೆಯುತ್ತೀರಾ ಜೋಕೆ: ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಲೋಡ್​ಗಟ್ಟಲೆ ತ್ಯಾಜ್ಯ!


ಬೆಂಗಳೂರು, ಅಕ್ಟೋಬರ್ 26: ಎಲ್ಲೆಂದರಲ್ಲಿ ಕಸ ಹಾಕೋ ಅಭ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಿದ್ದಾರೆ ನಿಮ್ಮ ಮನೆ ಮುಂದೆಯೇ ಇನ್ನು ಲೋಡ್ ಗಟ್ಟಲೆ ಕಸ ಬಂದು ಬೀಳಲಿದೆ. ಹೌದು, ಸಾಕಷ್ಟು ಜನಜಾಗೃತಿ ಬಳಿಕವೂ ಹಲವು ಮಂದಿ ತಮಗೆ ಖುಷಿ ಬಂದಲ್ಲಿ ಕಸ ಎಸೆದು ಹೋಗುವ ಅಭ್ಯಾಸ ಮುಂದುವರಿಸಿದ್ದಾರೆ. ಇಂತಹ ಪ್ರಕರಣಗಳು ಕಡಿವಾಣಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂತಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆಯೇ ಕಸ ಸುರಿಯುವ ಜೊತೆಗೆ ದಂಡ ವಿಧಿಸಲು ತೀರ್ಮಾನಿಸಿದೆ.

ಕಸ ಎಸೆದು ಹೋಗುವುದನ್ನು ಮೊದಲು ಮಾರ್ಷಲ್ ಗಳು ವಿಡಿಯೋ ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಅಂತವರ ಮನೆಗಳನ್ನು ಶೀಘ್ರ ಪತ್ತೆಮಾಡಿ ಅವರ ಮನೆ ಮುಂದೆಯೇ ಕಸ ಸುರಿಯಲಾಗುತ್ತೆ. ಇಷ್ಟೇ ಅಲ್ಲ, ಮನೆ ಮುಂದೆ ಸರಿಯಿಲ್ಲದ ಕಸದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲು ತೀರ್ಮಾನಿಸಲಾಯಿತು, ಆ ಮೂಲಕ ಕಸಿಯುವವರನ್ನು ಜಗಜ್ಜಾಹೀರಗೊಳಿಸಲು ಜಿಬಿಎ ಮುಂದಾಗಿದೆ. ವಿಂಗಡಣೆ ಮಾಡದ ತ್ಯಾಜ್ಯ, ಪ್ಲ್ಯಾಸ್ಟಿಕ್ ಮತ್ತು ಬಾಕ್ಸ್‌ಗಳನ್ನು ಎಸೆದು ಹೋಗುವವರ ವಿಡಿಯೋಗಳನ್ನು ದಾಖಲಿಸುವ ಕೆಲಸ ಆರಂಭಿಸಿದ್ದು, ಕಳೆದ ಒಂದು ವಾರದಿಂದ ಈ ಬಗ್ಗೆ ಮಾರ್ಷಲ್ ಕಾರ್ಯನಿರತವಾಗಿದೆ. ಕಸ ಎಸೆದು ಹೋಗುವವರ ಮನೆಗಳಿಗೆ ಸ್ಥಳೀಯ ಪೊಲೀಸರ ಜೊತೆಗೆ ಮಾರ್ಷಲ್ ಗಳು ತಲುಪಲಿದೆ, ಅವರ ಮನೆ ಬಾಗಿಲಲ್ಲೇ ಕಸದ ಲೋಡ್ ಹಾಕಲಾಗುತ್ತೆ. ಇದರ ಜೊತೆಗೆ ದಂಡವನ್ನೂ ವಿಧಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಸ್ಲೋಚ್ ಹ್ಯಾಟ್ಗೆ ಕೊಕ್: ಎ 28ರಿಂದ ಕರ್ನಾಟಕ ಪೊಲೀಸರು ಕೈಸೇರಲಿವೆ ಹೊಸ ಟೋಪಿ

2-10 ಸಾವಿರ ರೂ.ವರೆಗೆ ದಂಡ

ಮನೆಮುಂದೆ ಸುರಿಯಲಾಗದ ಕಸವನ್ನ ಕೆಲ ಗಂಟೆಗಳ ಬಳಿಕ ತೆರವು ಮಾಡಲಾಗುತ್ತದೆ. ಆದರೆ 2 ರಿಂದ 10 ಸಾವಿರ ರೂಪಾಯಿಗಳಿಗೆ ದಂಡವನ್ನು ಎಲ್ಲೆಂದರಲ್ಲಿ ಕಸ ಹಾಕುವವರು ಕೊಡಬೇಕು. ಈ ಬಗ್ಗೆ ತಕರಾರು, ವಾದ ಮಾಡುವಂತೆಯೂ ಇಲ್ಲ. ನಾವು ಕಸ ಎಸೆದಿಲ್ಲ ಎಂದರೂ ಮಾರ್ಷಲ್ ಗಳು ಅದಾಗಲೇ ಸೆರೆ ಹಿಡಿದ ನೀವು ಕಸ ಎಸೆಯುವ ವಿಡಿಯೋ ತೋರಿಸಲಿದ್ದಾರೆ. ಜನ ಜಾಗೃತಿ ಕೆಲಸಗಳ ಮೂಲಕ 869 ಬ್ಲ್ಯಾಕ್ ಸ್ಪಾಟ್ 150ಕ್ಕೆ ಇಳಿಸುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಸಫಲವಾಗಿದೆ. ಈ ನಡುವೆ ನಗರವನ್ನು ಇರಿಸುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ ಕಸ ತೆಗೆಯುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು BSWML ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ಮುಂದಿಟ್ಟರು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *