ಸದ್ಯಕ್ಕಂತೂ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (ಗಿಲ್ಲಿ ನಟ) ಹೈಲೈಟ್ ಆಗುತ್ತಿದೆ. ಭಾನುವಾರದ (ಅ.26) ಸಂಚಿಕೆಯಲ್ಲಿ ಅವರ ಬಗ್ಗೆ ಹೆಚ್ಚು ಚರ್ಚೆ ಆಗಲಿದೆ. ಕಿಚ್ಚ ಸುದೀಪ್ ಅವರು ಕೆಲವು ಮೀಮ್ಗಳನ್ನು ತೋರಿಸಿದ್ದಾರೆ. ಅದರಲ್ಲಿ ಗಿಲ್ಲಿ ನಟನ ಹಲವು ಬಗೆಯ ಗೆಟಪ್ಗಳು ಇವೆ. ಒಂದಷ್ಟು ಫೋಟೋ ತೋರಿಸಿ, ‘ನೀವು ಓಕೆ ಎಂದರೆ ಈ ಗೆಟಪ್ ಕೂಡ ಮಾಡಿಸೋಣ’ ಎಂದು ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಹೇಳಿದ್ದಾರೆ. ಫೋಟೋಗಳನ್ನು ನೋಡಿ ಕಾವ್ಯ ಶೈವ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ಗಿಲ್ಲಿಗೆ ಇಂಥ ಗೆಟಪ್ ಓಕೆ ಎಂದು ಕಾವ್ಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.