Headlines

ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ

ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ


ನಟಿ ತನಿಷಾ ಕುಪ್ಪಂಡ (ತನಿಶಾ ಕುಪ್ಪಂಡ) ಅವರು ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದರು. ಈಗ ಅವರು ನಿರ್ಮಾಪಕಿ ಆಗಿದ್ದಾರೆ. ‘ಕೋಣ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಅವರು ಹೀರೋ ಆಗಿ ನಟಿಸಿದ್ದಾರೆ. ‘ನಮ್ಮನ್ನು ಹಿಯಾಳಿಸಿದವರ ಮುಂದೆ ಎದ್ದು ನಿಲ್ಲಬೇಕು. ಒಂದಷ್ಟು ಜನರಿಗೆ ಕೆಲಸ ಕೊಡಬೇಕು’ ಎಂಬ ಉದ್ದೇಶದಿಂದ ಅವರು ನಿರ್ಮಾಪಕಿ ಆಗಿದ್ದಾರೆ. ತನಿಷಾ ಕುಪ್ಪಂಡ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವರ್ತೂರು ಸಂತೋಷ್ (ವರ್ತೂರು ಸಂತೋಷ್) ಕುರಿತ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ.

‘ಕೋಣ’ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ನಟಿಸಿದ್ದಾರೆ ಎಂಬುದು ವಿಶೇಷ ಆದರೆ ವರ್ತೂರು ಸಂತೋಷ್ ಅವರು ನಟಿಸಿಲ್ಲ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ಅವರು ತುಂಬಾ ಆಪ್ತವಾಗಿದ್ದರು. ಆದರೆ ತನಿಷಾ ನಿರ್ಮಾಣದ ಸಿನಿಮಾದಲ್ಲಿ ವರ್ತೂರು ಸಂತೋಷ್ ಯಾಕೆ ನಟಿಸಲ್ಲ ಎಂಬದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಕಾರ್ತಿಕ್ ಮಹೇಶ್ ಮತ್ತು ವರ್ತೂರು ಸಂತೋಷ್ ಅವರನ್ನು ನಾನು ಕೇಳಿದ್ದೇನೆ. ಕಾರಣಾಂತರಗಳಿಂದ ಅವರು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅದೇ ಸತ್ಯ. ನನ್ನ ಪಟ್ಟಿಯಲ್ಲಿ ಇರುವ ಯಾರನ್ನೂ ನಾನು ಆ ರೀತಿ ಬಿಡಲು ಸಾಧ್ಯವಿಲ್ಲ. ನನ್ನ ಕಡೆಯಿಂದ ನಾನು ಯಾರನ್ನೂ ಬಿಟ್ಟುಕೊಡಲ್ಲ. ಅವರು ಇಲ್ಲ ಅಂದರೆ ಅದಕ್ಕೆ ನಿಜವಾದ ಕಾರಣ ಇರುತ್ತದೆ. ಒಂದು ಪಾತ್ರಕ್ಕೆ ವರ್ತೂರು ಅವರನ್ನು ಕೇಳಿದ್ವಿ. ಅವರಿಗೆ ನಟನೆ ಮಾಡೋಕೆ ಬರಲ್ಲ ಎಂಬ ಕಾರಣಕ್ಕೆ ಅವರನ್ನು ಬಿಡಬೇಕು’ ಎಂದು ತನಿಷಾ ಕುಪ್ಪಂಡ.

‘ಸಿನಿಮಾ, ಧಾರಾವಾಹಿ, ಬಿಗ್ ಬಾಸ್ ಮುಂತಾದ ಕ್ಷೇತ್ರದಿಂದ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹೊಸ ಕಲಾವಿದರು ಕೂಡ ನಟಿಸಿದ್ದಾರೆ. ತುಕಾಲಿ ಸಂತೋಷ್, ಗೋಲ್ಡ್ ಸುರೇಶ್, ಮಂಜು ಪಾವಗಡ, ಶಿಶಿರ್ ಶಾಸ್ತ್ರಿ, ನಮ್ರತಾ ಗೌಡ, ವಿನಯ್ ಗೌಡ ಬಿಗ್ ಬಾಸ್ ಮೂಲಕ ಜನರಿಗೆ ಹತ್ತಿರವಾದವರು. ಅವರಿಗೆ ಎಲ್ಲಾ ಮನರಂಜನೆ ಇದೆ’ ಎಂದು ತನಿಷಾ ಕುಂಡ ಹೇಳಿದ್ದಾರೆ.

ಇದನ್ನೂ ಓದಿ: ತನಿಷಾ ಜೊತೆ ಕಾರ್ತಿಕ್ ಮಹೇಶ್ ಸ್ನೇಹಕ್ಕೆ ಸಾಕ್ಷಿ ಈ ಫೋಟೋಗಳು

ತನಿಷಾ ಅವರು ‘ಕೋಣ’ ಸಿನಿಮಾದಲ್ಲಿ ಮೃದು ಸ್ವಭಾವದ ಹುಡುಗಿಯ ಪಾತ್ರ ಮಾಡಿದ್ದಾರೆ. ‘ನಿಜ ನನ್ನನ್ನು ಯಾರೂ ಕೂಡ ಈ ರೀತಿ ನೋಡಿಲ್ಲ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಕಾಣಿಸಿಕೊಂಡಿದ್ದೇನೆ’ ಎಂದು ತನಿಷಾ ಹೇಳಿದ್ದಾರೆ. ಸಾಕಷ್ಟು ಟ್ವಿಸ್ಟ್‌ಗಳು ಕೂಡ ಈ ಪಾತ್ರಕ್ಕೆ ಇದೆ ಎಂದು ಹೇಳುವ ಮೂಲಕ ಅವರು ಕುತೂಹಲ ಮೂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *