ಹೆಚ್ಡಿ ಕುಮಾರಸ್ವಾಮಿ, ರಾಮಲಿಂಗರೆಡ್ಡಿ
ಬೆಂಗಳೂರು, ಅಕ್ಟೋಬರ್ 26: ದಿನದಿಂದ ದಿನಕ್ಕೆ ಬಿಎಂಟಿಸಿಯ ಇಟಿಕ್ಲಿಕ್ ಬಸ್ಗಳಿಂದ (ಬಿಎಂಟಿಸಿ ಎಲೆಕ್ಟ್ರಿಕ್ ಬಸ್) ಅಪಘಾತಗಳು ಆಗುತ್ತಿವೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೋನಸ್ಗಾಗಿ ಪ್ರತಿಭಟನೆಗಳು ನಡೆಯುತ್ತಿವೆ, ಇದರಿಂದ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗ ರೆಡ್ಡಿ, ಇಲೆಕ್ಟಿಕ್ ಬಸ್ಗಳಿಗೆ ಖಾಯಂ ಡ್ರೈವರ್ಗಳನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಗೆ (ಎಚ್.ಡಿ.ಕುಮಾರಸ್ವಾಮಿ) ಪತ್ರ ಬರೆಯಲು ಮುಂದಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿಯ ಇಟಿಕ್ಲಿಕ್ ಬಸ್ಗಳಿಂದ ವಿಪರೀತವಾಗಿ ಆಕ್ಸಿಡೆಂಟ್ ಆಗುತ್ತಿದೆ. ಎಲಿಕಲ್ ಬಸ್ ಕಂಡರೆ ಜನರು ಭಯ ಬೀಳುತ್ತಾರೆ. ಬಿಎಂಟಿಸಿಯ ಎಲೆಟಿಕ್ ಬಸ್ಗಳಿಂದಲೇ ಮೂರು ವರ್ಷದಿಂದ 23ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ 3 ಸಾವಿರ ಬಸ್ ಡ್ರೈವರ್ಗಳಿಗೆ ಗೇಟ್ ಪಾಸ್ ನೀಡಲು ಸಾರಿಗೆ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆಯಲು ಮುಂದಾದ ಸಚಿವ ರಾಮಲಿಂಗ ರೆಡ್ಡಿ
ಇಲಿಟಿಕ್ ಬಸ್ಗಳಿಗೆ ಖಾಸಗಿ ಚಾಲಕರು ಬೇಡ, ಬಿಎಂಟಿಸಿಯ ಪರ್ಮನೆಂಟ್ ಚಾಲಕರನ್ನೇ ನೇಮಕ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ನಾಳೆ ಪತ್ರ ಬರೆಯಲು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಬಸ್ ಪ್ರಯಾಣಿಕರು ಸಾರಿಗೆ ಸಚಿವರು ಮಾಡುತ್ತಿರುವುದು ಸರಿ ಇದೆ.
ಬಿಎಂಟಿಸಿ ಇಟಿಕ್ಲಿಕ್ ಬಸ್ ಆಕ್ಸಿಡೆಂಟ್ಗಳ ಮಾಹಿತಿ
- 1-ವರ್ಷ- 2023 ಸಾವು- 3 ಆಕ್ಸಿಡೆಂಟ್- 6
- 2-ವರ್ಷ- 2024-25 ಸಾವು- 11 ಆಕ್ಸಿಡೆಂಟ್- 29
- 3-ವರ್ಷ – 2025-26 ಸಾವು- 9 ಆಕ್ಸಿಡೆಂಟ್- 33
ಇನ್ನು ಬಿಎಂಟಿಸಿ ಬಸ್ಗೆ ಶನಿವಾರ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ನಗರದ ಹಂಪಿನಗರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದ ಒಳಗೆ ಬಲ ತಿರುವು ಪಡೆಯುವಾಗ ಈ ಆಕ್ಸಿಡೆಂಟ್ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಮಾಲಾ ಎಂಬ 58 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಕರ್ನೂಲ್ ಬಸ್ ದುರಂತದ ಬಳಿಕ ಎಚ್ಚೆತ್ತ ಕರ್ನಾಟಕ ಸಾರಿಗೆ ಇಲಾಖೆ, ಇನ್ಮುಂದೆ ಈ ರೂಲ್ಸ್ ಕಡ್ಡಾಯ
ಇತ್ತೀಚೆಗಷ್ಟೇ ಬಿಎಂಟಿಸಿಯ ಬೈಕ್ ಚಾಲಕರು ಕುಡಿದು ಡ್ಯೂಟಿಗೆ ಬರ್ತಿರೋ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಚಾಲಕರಿಂದ ಆಗುತ್ತಿರುವ ಅಪಘಾತಗಳಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಲೆಕ್ಟಿಕ್ ಬಸ್ ಡ್ರೈವರ್ಗಳಿಂದ ಆಗುತ್ತಿರುವ ಹತ್ತು ಸಮಸ್ಯೆಗಳನ್ನು ಪಟ್ಟಿ ಮಾಡಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಾರಿಗೆ ಸಚಿವರು ಸಿದ್ದತೆ ಮಾಡಿಕೊಂಡಿದ್ದಾರೆ.
ಇಲಿಟಿಕ್ ಬಸ್ ಡ್ರೈವರ್ಗಳು ತುಂಬಾ ಬೇಜಾವ್ದಾರಿ, ಅವರಿಂದ ಆಕ್ಸಿಡೆಂಟ್ಗಳು ಹೆಚ್ಚಾಗುತ್ತಿವೆ. ಇಲೆಕ್ಟಿಕ್ ಬಸ್ಗಳಿಗೆ ಪರ್ಮನೆಂಟ್ ಡ್ರೈವರ್ಗಳನ್ನೇ ನೇಮಕ ಮಾಡಿಕೊಂಡರೆ ಒಳ್ಳೆಯದು ಅಂತಾರೇ ಬಿಎಂಟಿಸಿ ಬಸ್ ಪ್ರಯಾಣಿಕರಾದ ಗುರುಮೂರ್ತಿ ಅವರು.
ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು
ಒಟ್ಟಿನಲ್ಲಿ ದಿನಕ್ಕೆ ಈ ಇಟಿಕ್ಲಿಕ್ ಬಸ್ಗಳಿಂದ ಆಕ್ಸಿಡೆಂಟ್ಗಳನ್ನು ಹಾಕುವ ದಿನ, ಇದಕ್ಕೆ ಕಡಿವಾಣ ಸಾರಿಗೆ ಸಚಿವರು ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ ಆದರೆ ಇದಕ್ಕೆ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.