Horoscope Today 27 Oct: ಈ ರಾಶಿಯವರಿಗೆ ಕೆಟ್ಟವರನ್ನೇ ನಂಬುವ ಸ್ಥಿತಿ ಬರಬಹುದು ಎಚ್ಚರ!

Horoscope Today 27 Oct: ಈ ರಾಶಿಯವರಿಗೆ ಕೆಟ್ಟವರನ್ನೇ ನಂಬುವ ಸ್ಥಿತಿ ಬರಬಹುದು ಎಚ್ಚರ!


ಬೆಂಗಳೂರು, ನಿತ್ಯ ಪಂಚಾಗ, ಅಕ್ಟೋಬರ್ 26: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಶೋಭನ, – 6 ಕರಣ : ಕೌಲವ, – ೬. 05 – 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:41 – 09:08 ಗುಳಿಕ ಕಾಲ 13:31 – 14:58, ಯಮಗಂಡ ಕಾಲ 10:36 – 12:03.

ಮೇಷ ರಾಶಿ: ನಿಮಗೆ ಬಿಡುಗಡೆಯಾದಂತಹ ಅನುಭವ ತಾನಾಗಿಯೇ ಬರಲಿದೆ. ನಿಮ್ಮ ದಾಖಲೆಗಳು ಕಳ್ಳತನವಾಗುವ ಸಾಧ್ಯತೆ ಇದೆ. ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ನಿಮ್ಮ ಕೈಯಲ್ಲಿ ಒಗ್ಗೂಡಿಸುವಿಕೆ ಇರಲಿದೆ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಕುಳಿತು ಮಾತನಾಡುವಿರಿ. ಕುಕ್ಕಿ ಮಾತನಾಡುವುದು ನಿಮಗೆ ಸಹಿಸಲಾಗದು. ವ್ಯವಹಾರದಲ್ಲಿ ಬಿಗುಮಾನವನ್ನು ಸಡಿಲಮಾಡಿಕೊಳ್ಳಬೇಕು. ಮನಸ್ಸು ಹಗುರವಾಗಿದ್ದರೆ ಉತ್ಸಾಹವು ನಿಮ್ಮ ಮುಖದಲ್ಲಿ ಕಾಣುವುದು. ನಿಮ್ಮ ನಿಯಮಗಳೇ ನಿಮಗೆ ಹಿಂಸೆಯಾಗುವುದು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳಲು ಕಷ್ಟವಾಯಿತು. ಎಲ್ಲರ ಮೇಲಿನ ನಂಬಿಕೆಯನ್ನು ನೀವು ಕಳೆದುಕೊಂಡು ಆರಾಮಾಗಿ ಇರುವಂತೆ ನಟಿಸುವಿರಿ. ಇಂದಿನ ಮಂದಗತಿಯ ಕೆಲಸಗಳಿಗೆ ಚುರುಕು ನೀಡುವಿರಿ. ಸಮಾರಂಭಕ್ಕೆ ಆಪ್ತರು ಒತ್ತಾಯ ಮಾಡಬಹುದು. ಸಹೋದರನಿಂದ ಉದ್ಯಮಕ್ಕೆ ನಿಮಗೆ ಸಲಹೆಗಳು ಸಿಗಬಹುದು. ಸಮೀಪವರ್ತಿತ್ವವೂ ಅಪಾಯ ಕೊಡುವುದು. ಕಛೇರಿಯಲ್ಲಿಂದು ಅತ್ಯುತ್ಸಾಹದಿಂದ ಕೆಲಸ ಮಾಡಲು ಆಗದು.

ವೃಷಭ ರಾಶಿ: ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸುವ ಸ್ಥಿರ ಕುಂಠಿತ ವಸ್ತು. ಕಛೇರಿಯ ಕೆಲಸವನ್ನು ಬಿಡುವಿನ ವೇಳೆಯಲ್ಲಿ ಮಾಡುವಿರಿ. ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ದಿನವನ್ನು ಕಳೆಯಿರಿ. ಮನೆಯ ಕಾರ್ಯಕ್ಕಾಗಿ ನೀವು ಓಡಾಟ ಮಾಡಬೇಕಾಗುವುದು. ಹೆಚ್ಚಿನ ಶ್ರಮವು ಅವಶ್ಯಕ. ಕೆಟ್ಟವರನ್ನೇ ಮತ್ತು ನಂಬುವ ಸ್ಥಿತಿ ಬರಬಹುದು. ಇಂದು ಹೆಚ್ಚಿನ ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ಕಳೆಯುವಿರಿ. ನಿಮ್ಮ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುತ್ತಾರೆ. ಪರರ ಭಾವನೆಗೆ ಅನಾದರ ತೋರುವುದು ಬೇಡ. ಸ್ವಾರ್ಥವು ನಿಮ್ಮನ್ನು ಚಿಕ್ಕವ ಮಾಡುವುದು. ಅನಿವಾರ್ಯವಾಗಿ ಮನೆಯಿಂದ ದೂರವಿರುವ ಬೇರೆ ಸ್ಥಳದಲ್ಲಿ ವಾಸಮಾಡಬೇಕಾಗುವುದು. ತೆರೆಯಲ್ಲಿ ಕಾಣಲು ಪರದೆ ಸರಿಯಬೇಕು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ: ಇಬ್ಬರು ಹಿರಿಯರ ತಾಪವನ್ನು ಶಮನ ಮಾಡಲು ನೀವು ಪ್ರವೇಶಿಸಬೇಕಾಗುವುದು. ವ್ಯಾಪಾರದ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಸರಿಮಾಡಿಕೊಳ್ಳಿ. ಇನ್ನೊಬ್ಬರ ವೈಯಕ್ತಿಕ ಬದುಕನ್ನು ಆಡಿಕೊಳ್ಳಿ. ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಸಂಗಾತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳ ವಸ್ತು. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಬಳಿ ಪಡೆಯಿರಿ. ಅಪರೂಪದ ಬಂಧುಗಳ ಜೊತೆ ಸಮಯ ಕಳೆಯುವುದು. ಏಕಾಂಗಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ನಿಮ್ಮೊಳಗಿನ ಬದಲಾವಣೆಯನ್ನು ನೀವೇ ಕಂಡುಕೊಂಡರೆ ಸೂಕ್ತ. ಅಶಿಸ್ತಿನಿಂದ ವರ್ತಿಸಿದ್ದಕ್ಕೆ ನಿಮಗೆ ಎಲ್ಲರೆದುರು ಅಪಮಾನವಾಗಬಹುದು. ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ನೀವು ಮಗ್ನರಾಗುವಿರಿ. ಅಂದುಕೊಂಡಿದ್ದು ಆಗಿದ್ದು ನಿಮಗೂ ಅಚ್ಚರಿಯಾಗಲಿದೆ. ಯಾರನ್ನೂ ಮೆಚ್ಚಿಸುವುದು ನಿಮಗೆ ಇಷ್ಟವಾಗದು. ದುಷ್ಕೃತ್ಯಕ್ಕೆ ಅಪ್ರತ್ಯಕ್ಷವಾಗಿ ಅನುಮೋದನೆ ಸಿಗಲಿದೆ.

ಕರ್ಕಾಟಕ ರಾಶಿ: ಆಹಾರ ಮೊದಲಾದವನ್ನು ಆಹಾರದಿಂದ ಕಡಿಮೆ ಮಾಡಿ. ಚಿಕಿತ್ಸೆಗೆ ಹೆಚ್ಚಿನ ಪ್ರಾಶಸ್ತ್ಯ ಬೇಡ. ವೃತ್ತಿಗಿಂತ ಹೆಚ್ಚು ಬೇರೆ ಕೆಲಸದಿಂದ ಹಣವನ್ನು ಗಳಿಸುವಿರಿ. ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬರಲಿದೆ. ಮನೆಯಿಂದ ಹೊರ ಹೋಗುವುದು ನಿಮಗೆ ಇಂದು ನಿಮಗೆ ಇಷ್ಟವಾಗುವುದು. ಯಾರ ಒತ್ತಡಕ್ಕೂ ನೀವು ಮಣಿಯದವರು ಇಂದು ಮಣಿಯುವಿರಿ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಬಂದಾಗ ನೀವು ತಪ್ಪಿಸಿಕೊಳ್ಳುವಿರಿ. ಹೇಳುವ ಸತ್ಯವನ್ನು ಪ್ರೀತಿಯಿಂದ ಮನ ನೋಯದಂತೆ ಹೇಳಿ. ಮನಸ್ಸು ಭಾರವಾಗಿದ್ದು ಎಲ್ಲರಿಂದ ದೂರವಿರಲು ಇಷ್ಟಪಡುವಿರಿ. ಹೊಸ ಮನೆಯ ಖರೀದಿಗೆ ಸಣ್ಣ ಹೆಜ್ಜೆ ಇಡುವಿರಿ. ಆದಾಯವು ಮತ್ತಷ್ಟು ಬೇಕೆನಿಸುವುದು. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುತ್ತೀರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಬಹುದು. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವಾಯಿತು.

ಸಿಂಹ ರಾಶಿ: ಸ್ತ್ರೀಯರ ಪ್ರಾಬಲ್ಯವೇ ಇರುವಲ್ಲಿ ನೀವು ಹಸ್ತಕ್ಷೇಪ ಮಾಡುವುದು ಬೇಡ. ನಿಮ್ಮೊಳಗೆ ಎಲ್ಲವನ್ನೂ ಬಿಡುವ ಆಲೋಚನೆ ಬರುವುದು. ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ತೋರುತ್ತದೆ. ಸಹೋದ್ಯೋಗಿಗಳ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟವಾಗುವುದು. ಸ್ನೇಹಿತರ ಸಹಕಾರದಿಂದ ಪ್ರವಾಸ ಹೋಗುವಿರಿ. ದೂರದ ಬಂಧುಗಳ ಭೇಟಿಯು ಸಂತೋಷ ಕೊಡುವುದು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಕಲಹವಾಗುವುದು. ಮನೆಯಲ್ಲಿ ಕೆಲವು ದುರಸ್ತಿ ಕೆಲಸಗಳನ್ನು ನೀವೇ ಮಾಡಬೇಕಾಗುವುದು. ಶಕ್ತಿಮೀರಿ ದುಡಿಯಲು ಹೋಗುವುದು ಬೇಡ. ನಿಮಗೆ ಇಂದು ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುವುದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ. ಆಕಸ್ಮಿಕ ಓಡಾಟದಿಂದ ಆಯಾಸವಾಗುವುದು. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಿರಲಿಲ್ಲ.

ಕನ್ಯಾ ರಾಶಿ: ಕುಟುಂಬದವರು ನಿಮಗೆ ಇತರರ ಕುರಿತಾದ ಹಲವು ವಿಚಾರಗಳನ್ನು ತಲೆಗೆ ತುಂಬುತ್ತಾರೆ. ನಿಮಗೆ ಇಂದು ಮಾಡಲಾಗದ ಕಾರ್ಯವನ್ನು ಇತರರಿಗೆ ವಹಿಸಿಕೊಡುವಿರಿ. ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಹಣದ ಹೂಡಿಕೆಯನ್ನು ಮಾಡುವ ಆಲೋಚನೆಯು ಇರಲಿದೆ. ಪ್ರೇಮದಲ್ಲಿ ನೀವು ಬೀಳಲಿದ್ದೀರಿ. ಸರಿಯಾದ ಜೊತೆ ಆರೋಗ್ಯವನ್ನು ತೋರಿಸಿ. ಹಳೆಯ ಖಾಯಿಲೆಯು ಕಾಣಿಸಿಕೊಳ್ಳಬಹುದು. ರಪ್ತು ವ್ಯವಹಾರದಲ್ಲಿ ಪ್ರಗತಿ ಕಾಣಿಸುವುದು. ಹಿರಿಯರ ಮಾತನ್ನು ನಿರ್ಲಕ್ಷಿಸುವಿರಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂದು ಅಂದುಕೊಳ್ಳುವಿರಿ. ಸಂಗಾತಿಯ ಮನವೊಲಿಸಿ ಹಣ ಪಡೆಯುವುದು ಕಷ್ಟ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ವೆಚ್ಚಕ್ಕೆ ನೀವು ಕಡಿವಾಣ ಹಾಕಿದ್ದೀರಿ. ಮಕ್ಕಳ ಸಂತೋಷದಲ್ಲಿ ಭಾಗವಹಿಸುವಿರಿ. ಉತ್ತಮ ಆಹಾರವನ್ನು ಸ್ವೀಕರಿಸುವಿರಿ. ನಿಮ್ಮ ಕೆಲವು ಮಾತುಗಳು ಬೇರೆಯವರಿಗೆ ಬೇಸರ ತರಬಹುದು. ಮಕ್ಕಳನ್ನು ಪಡೆಯುವ ಆಸೆಯಾಗಲಿದೆ. ನೌಕರರಿಂದ ಅಸಮಾಧಾನ.

ತುಲಾ ರಾಶಿ: ನಿಮಗೆ ಆಸ್ತಿ ಅಥವಾ ವಾಹನ ಖರೀದಿಯ ಆಯ್ಕೆಗಳು ಬರಬಹುದು. ಸಮಸ್ಯೆಗಳನ್ನು ಹುಡುಕುವ ಪ್ರಯತ್ನವನ್ನು ಮೊದಲು ಮಾಡಿ. ಇಂದು ಕುರುಡ ಕತ್ತನ್ನು ಹೊಸೆದಂತೆ ಆಗಬಹುದು. ಬಂಧುಗಳ ಮನೆಗೆ ಹೋಗಿ ಬರಲಿದ್ದೇನೆ. ದಾನವಾಗಿ ಕೊಟ್ಟಿದ್ದನ್ನು ಎಲ್ಲಿಯೂ ಹೇಳಲಾರಿರಿ. ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಇಂದಿನ ಸುತ್ತಾಟವು ನಿಮಗೆ ಆಯಾಸವನ್ನು ಕೊಡಲಿದೆ. ಔಷಧ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯ ಮತ್ತು ಹೆಚ್ಚಿನ ಮೌಲ್ಯವನ್ನು ನಿರೀಕ್ಷಿಸುವಿರಿ. ನಿಮ್ಮದೇ ಸರಿ ಎನ್ನುವ ಬುದ್ಧಿಗೆ ಕಾಲವೇ ಉತ್ತರಿಸುತ್ತದೆ. ಸಮೂಹದಲ್ಲಿ ಕೆಲಸ ಮಾಡುವುದು ನಿಮಗೆ ಇಷ್ಟವಾಗುವುದು. ಆರೋಗ್ಯದ ಸುಧಾರಣೆಯಿಂದ ಮನೋಬಲವು ಹೆಚ್ಚಾಗುವುದು. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವವರಾದರೂ ಕೇಳುವ ಮನಃಸ್ಥಿತಿಯು ಯಾರಲ್ಲಿಯೂ ಇರದು. ನಿಮ್ಮನ್ನು ದ್ವೇಷಿಸುವ ಜನರನ್ನು ನೀವು ನಿರ್ಲಕ್ಷಿಸಿ ಮುನ್ನಡೆದರೆ ಉತ್ತಮ. ಎನಗಿಂತ ಕಿರಿಯರಿಲ್ಲ ಎನ್ನುವ ಭಾವವಿರಲಿ.

ವೃಶ್ಚಿಕ ರಾಶಿ: ಯಾವುದನ್ನೂ ಒಪ್ಪಿಕೊಳ್ಳುವ ಮನಸ್ಸಾಗದು. ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಅನಾವರಣ ಪ್ರದರ್ಶನ. ಇಂದು ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡಿ ಮುಂದುವರಿಯಿರಿ. ಅನವರತ ಕಾರ್ಯಗಳಿಂದ ದೇಹವು ಆಯಾಸಗೊಳ್ಳಬಹುದು. ಸುಂದರ ದಿನದ ನಿರೀಕ್ಷೆಯಲ್ಲಿ ಇರುವಿರಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ತೆಗೆದುಹಾಕಲಾಗಿದೆ. ಕಾಲಹರಣಕ್ಕೆ ಇನ್ನೊಬ್ಬರ ವಿಚಾರವೇ ಬೇಕಾಗುವುದು. ಭವಿಷ್ಯದ ಬಗ್ಗೆ ನಿಮಗೆ ಸ್ಪಷ್ಟವಾದ ನಿಲುವು ಸಿಗದು. ಯಾರೋ ತಪ್ಪು ಮಾಡಿದ ನಿಮಗೆ ಪಶ್ಚಾತ್ತಾಪ ಕೆಲಸ. ನೀವು ಹೇಳಿದ ಕೆಲಸ ಆಗಲಿಲ್ಲ ಎಂಬ ಬೇಸರ ನಿಮ್ಮಲ್ಲಿರಲಿದೆ. ನಿಮ್ಮ ಸಂಗಾತಿಯ ಮನಸ್ಸನ್ನು ನೋಯಿಸಿ ಸರಿಪಡಿಸಿ. ಮರಗೆಲಸದವರಿಗೆ ಲಾಭ ಕಾಣಿಸುವುದು. ಇಂದಿನ ಖರ್ಚಿನ ಲೆಕ್ಕಾಚಾರವು ಬುಡಮೇಲಾಗವುದು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು.

ಧನು ರಾಶಿ: ಬಂಧುಗಳ ಮನೆಗೆ ಬಹಳ ದಿನಗಳ ಅನಂತರ ಹೋಗುವಿರಿ. ಇಂದು ಬೇರೆಯವರು ಮಾಡುತ್ತಾರೆ ಎಂದು ನೀವೂ ಬೇಡ. ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಹಣಕಾಸಿನ ವಿಚಾರದಲ್ಲಿ ನೀವು ಹತಾಶಭಾವದಿಂದ ಇರುತ್ತೀರಿ. ಭೂಮಿಯ ಖರೀದಿಗೆ ಹುಡುಕಾಟ ಮಾಡುವಿರಿ. ನಿಮಗೆ ಸ್ಥಿರ ಬುದ್ಧಿಯನ್ನು ತಂದುಕೊಳ್ಳಲು ಆಗದು.’ ಹತ್ತಾರು ಯೋಚನೆಗಳು ಒಂದಾದಮೇಲೆ ಒಂದರಂತೆ ಬರುವುದು. ನೀವು ಮಾಡಿದ ಕೆಲಸವು ನಿಮಗೇ ಇಷ್ಟವಾಗದು. ತಾಯಿಯ ಮಾತನ್ನು ನೀವು ಅಸಡ್ಡೆಯಿಂದ ಕೇಳುವಿರಿ. ಸುಂದರ ಸ್ಥಳಗಳು ನಿಮ್ಮ ಗಮನವನ್ನು ಸೆಳೆಯಬಹುದು. ಬಾಡಿಗೆಯ ವಸ್ತುಗಳನ್ನು ತಡಮಾಡದೇ ಹಿಂದಿರುಗಿಸಿ. ಸಾಹಸಮಯವಾದ ಕೆಲಸಕ್ಕೆ ಹೋಗುವುದು ಬೇಡ. ನಿಮ್ಮ ಕೌಶಲವನ್ನು ಕೆಲಸದಲ್ಲಿ ತೋರಿಸಿ. ಯಾರ ಜೊತೆಗೋ ವಾಗ್ವಾದಕ್ಕೆ ಹೋಗಿ ನೀವೇ ಸಿಕ್ಕಿಸಿಕೊಳ್ಳಿರಿ. ಉತ್ತಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ.

ಮಕರ ರಾಶಿ: ಸಾಲ ಪಡೆದವರು ನಿಮಗೆ ಗೊತ್ತಾಗದಂತೆ ತಿರುಗಾಟ ಮಾಡುವರು. ಇಂದು ಮಾಡಬೇಕಾದ ಕಾರ್ಯವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಉದ್ಯೋಗವನ್ನು ಪ್ರಾಮಾಣಿಕತೆಯಿಂದ ಮಾಡಿರಿ. ಕೆಲವು ಉದ್ಯೋಗಿಗಳ ಸಮಸ್ಯೆ ಮೇಲಧಿಕಾರಿಗಳ ಮೂಲಕ ಪರಿಗಣಿಸಿ. ಮನಸ್ಸಿನಲ್ಲಿ ಇರುವ ವಿಚಾರವನ್ನು ಯಾರ ಜೊತೆಗಾದರೂ ಹೇಳಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದಿಸಲು ಸಿಗುವರು. ಕೆಟ್ಟ ಅನುಭವಗಳನ್ನು ಮರೆಯಲಾಗದು. ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ವಿದ್ಯಾರ್ಥಿಗಳ ಆಟದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ಉಂಟಾದ ಪ್ರೀತಿಯನ್ನು ಇರಿಸಿಕೊಂಡು ನೋಡಿ, ಸತ್ಯವೇ ಸುಳ್ಳೆ ಎಂದು. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ.

ಕುಂಭ ರಾಶಿ: ನಿಮ್ಮಲ್ಲಾಗುವ ಬದಲಾವಣೆ ಏನನ್ನೂ ಮಾಡದೇಹೋಗಬಹುದು. ಹಳೆಯ ಕಾರ್ಯಕ್ಕೆ ಹೊಸ ತಂತ್ರವನ್ನು ಬಳಸಿ ಕಾರ್ಯವನ್ನು ಸಾಧಿಸುವಿರಿ. ಇಂದು ನೀವು ಪ್ರಾಮಾಣಿಕವಾಗಿ ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಹೋಗುವಿರಿ. ವಿದ್ಯಾರ್ಥಿಗಳು ಕೌಶಲವನ್ನು ಪ್ರದರ್ಶಿಸುತ್ತಾರೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿರಿ. ವೈವಾಹಿಕ ಮಾತುಕತೆಗೆ ನಿಮ್ಮನ್ನು ಯಾರಾದರೂ ಕೇಳಬಹುದು. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸಿ ಸಮಾಧಾನ ಮಾಡುವಿರಿ. ಅಸಮಯದ ಭೋಜನದಿಂದ ನಿಮಗೆ ಆರೋಗ್ಯವು ಹಾಳಾಗುವುದು. ನಿಂದನೆಯನ್ನು ನೀವು ಸಹಿಸಿರಿ. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ನಿಮ್ಮ ತಪ್ಪನ್ನೂ ನೀವೇ ಸಮರ್ಥಿಸಿಕೊಳ್ಳಿರಿ. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು. ಸಂತೋಷವನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ.

ಮೀನ ರಾಶಿ: ಎರಡು ವಿರುದ್ಧ ಧ್ರುವಗಳ ಮಧ್ಯೆ ಸಿಲುಕಿ ಒದ್ದಾಡುವಿರಿ. ಅಲೆಗಳು ಶಾಂತವಾಗಿರುತ್ತವೆ, ಆದರೆ ಅಲ್ಲಿಯವರೆಗೆ ಕಾಯುವಿಕೆ ಬೇಕು. ಅಷ್ಟರೊಳಗೇ ಕಲ್ಲೆಸೆಯಬಹುದು ಯಾರಾದರೂ. ಇಂದು ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸಿ. ಒಬ್ಬರೇ ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾದೀತು. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಜಾಗರೂಕರಾಗಿರಿ. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಆರ್ಥಿಕ ಮೌಲ್ಯವನ್ನು ನೀವು ತಿಳಿದುಕೊಳ್ಳಿ. ಕಠಿಣತೆಯನ್ನು ಸಹಿಸಲಾರಿರಿ. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೆ ಬೇಸರಿಸುವಿರಿ. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಿದೆ. ಎಲ್ಲ ಗೊತ್ತಿದೆ ಎಂದು ಹುಂಬುತನವನ್ನು ಮಾಡುವುದು ಬೇಡ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ.

ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *