ಬೆಂಗಳೂರು, ಅಕ್ಟೋಬರ್ 27: 2025ರ ನವೆಂಬರ್ ತಿಂಗಳಿನಲ್ಲಿ (ನವೆಂಬರ್ ಮಾಸಿಕ ಜಾತಕ) ಗ್ರಹಗಳ ಬದಲಾವಣೆಯಾಗಲಿದೆ. ಮಂಗಳನು ಸ್ವಕ್ಷೇತ್ರ ಜಾಗೂ ಸೂರ್ಯ ಹಾಗೂ ಶುಕ್ರರು ಮಿತ್ರ ಸಮಕ್ಷೇತ್ರದಲ್ಲಿ ಇದ್ದು ಅಶುಭವನ್ನು ಕಡಿಮೆ ಮಾಡುವುದರ ಜೊತೆಗೆ ಗುರುವು ತನ್ನ ಉಚ್ಚ ಸ್ಥಾನಕ್ಕೆ ಬಂದಿದ್ದು ಪೂರ್ವಕೃತ ದೋಷಗಳು ನಾಶವಾಗಲಿವೆ ಅಥವಾ ದೋಷನಾಶಕ್ಕೆ ದಾರಿಯೂ ಸಿಗಲಿದೆ. ಈ ತಿಂಗಳ ಎಲ್ಲಾ ಪಾಲಿಗೆ ಶುಭವೇ ಆಗಿದ್ದು, ಎಲ್ಲಾ ಶುಭಫಲವನ್ನು ಎಲ್ಲ ಗ್ರಹರೂ ನೀಡಲಿ.
ಮೇಷ ರಾಶಿ: ನವೆಂಬರ್ ತಿಂಗಳ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ಸ್ವಸ್ಥಾನವಾದ ವೃಶ್ಚಿಕದಲ್ಲಿದ್ದಾನೆ. ಪತ್ನಿ ಅಥವಾ ಸ್ತ್ರೀಯರು ನಿಮ್ಮನ್ನು ಒಪ್ಪಿಕೊಳ್ಳದೇ ತಿರಸ್ಕರಿಸುವರು. ಮಕ್ಕಳ ವಿಚಾರಕ್ಕೆ ನಿಮಗೆ ಸಮಾಧಾನ ಸಿಗದು. ಬುಧನ ದೃಷ್ಟಿ ಈ ರಾಶಿಗೆ ಇದ್ದು ಬರವಣಿಗೆಗೆ ಪ್ರೋತ್ಸಾಹ ಸಿಗುತ್ತದೆ. ಇದೆ ಸಂಪಾದನೆಯ ಮೂಲವೂ ಆಗಲಿದೆ. ಅಪೇಕ್ಷೆ ಇಲ್ಲದೇ ಇದ್ದರೂ ನಿಮ್ಮನ್ನು ಸಮ್ಮಾನಿಸುವರು. ವ್ಯಾಪಾರ ವಹಿವಾಟುಗಳಿಗೆ ಬಂಧುಗಳಿಂದ ಸಹಕಾರ ಸಿಗಲಿದೆ. ಧನಸಂಪಾದನೆಗೆ ಆತಂಕವು ಬಾರದೇ ಉತ್ತಮ ರೀತಿಯಲ್ಲಿ ಈ ತಿಂಗಳು ಕಳೆಯುವುದು. ಕುಜ ದಶೆಯುಳ್ಳವರಿಗೆ ಈ ತಿಂಗಳ ಶುಭಪ್ರದವಾಗಿದೆ.
ವೃಷಭ ರಾಶಿ: ನವೆಂಬರ್ ತಿಂಗಳಿನಲ್ಲಿ ಎರಡನೇ ರಾಶಿಯವರಿಗೆ ಅಸುಖ. ಸಂಗಾತಿಯ ಜೊತೆ ಕಲಹ. ಎಲ್ಲರೆದುರು ಸೌಮ್ಯತೆ ಇದ್ದರೂ ಅನಂತರ ಕೋಪಗೊಳ್ಳುವಿರಿ. ಪರರ ವಿಚಾರದಲ್ಲಿ ಆಸಕ್ತಿ ಹೆಚ್ಚು. ಅವರಿಗಾಗಿ ಏನನ್ನೂ ಮಾಡಲು ಶಕ್ತರಾಗುವಿರಿ. ಮನೆಯಲ್ಲಿ ನಿಮ್ಮ ನಿಷ್ಪ್ರಯೋಜಕರಂತೆ ನೋಡುತ್ತಾರೆ. ಸ್ತ್ರೀಯರಿಗೆ ಎಂತಹ ಕಾರ್ಯವನ್ನು ಮಾಡಲೂ ಸಿದ್ಧರಿರುವಿರಿ. ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುವ ಕಾರಣ ಪುರುಷ ಪ್ರಯತ್ನವನ್ನು ವಿಧಿಯೇ ಬದಲಿಸಲಿದೆ. ಶುಕ್ರದಶೆ ಭೋಗದ, ವಿಲಾಸಿಯ ದೃಷ್ಟಿಯಿಂದ ಉತ್ತಮ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯ ಬುಧನು ಪಂಚಮದಲ್ಲಿರುವನು. ಕ್ಲಿಷ್ಟಕರವಾದ ಸಂದರ್ಭವನ್ನು ಸರಳವಾಗಿ ನಿಭಾಯಿಸುವುದು ತಿಳಿದಿರುವುದು. ಕಾರ್ಯ ಸಾಧನೆಗೆ ಬೇಕಾದ ಉಪಾಯಗಳನ್ನು ಚಿಂತಿಸಿ. ಸಂಪತ್ತನ್ನು ಸಪರಿಚಿತರಿಗೆ ಅಪೇಕ್ಷೆಯಿಂದ ದಾನ ಮಾಡುವಿರಿ. ಹಣದ ಬದಲಾಗಿ ಅದಕ್ಕಿಂತ ದೊಡ್ಡ ಮೊತ್ತದ ಬೇರೆಯದನ್ನು ಅವರಿಂದ ಪಡೆದುಕೊಳ್ಳಿ. ಗುರುವಿನಲ್ಲಿ, ಹಿರಿಯರಲ್ಲಿ ಶ್ರದ್ಧೆ, ಪ್ರೀತಿ ಇರುವುದು. ವಿದೇಶದ ವ್ಯವಹಾರದಲ್ಲಿ ಪ್ರಗತಿಯೂ ಸಿಗಲಿದೆ. ಬುಧ ದಶೆ ಅನುಕೂಲಕರವಾಗಿದೆ. ಕುಜನ ದೃಷ್ಟಿ ಈ ರಾಶಿಯ ಮೇಲೆ ಇರುವ ಕಾರಣ ಸಿಟ್ಟು, ಅಸಹನೆ, ಹಿಂಬುತನ ಎಲ್ಲವೂ ಆಗಾಗ ಕಾಣಿಸಿಕೊಂಡು ಮಾಯವಾಗುವುದು.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ಗುರುವು ಕೆಲವು ದಿನಗಳ ಕಾಲ ಈ ರಾಶಿಯಲ್ಲಿ ಇರುವನು. ಸಕಾರಾತ್ಮಕ ಆಲೋಚನೆಗಳಿಂದ ಪರಿವರ್ತನೆ ಸಾಧ್ಯ. ಹೊಸ ವಸ್ತ್ರಗಳ ಬಗ್ಗೆ ಆಸಕ್ತಿ, ಶತ್ರುಗಳಿಂದ ಜಯ. ಪರರ ವಸ್ತುಗಳನ್ನು ಬಯಸುವುದು, ಗೊತ್ತಾಗದಂತೆ ತನ್ನದನ್ನಾಗಿಸಿಕೊಳ್ಳುವ ಮನಸ್ಸು ಆಗಾಗ ಬರಲಿದೆ. ಸಂಸಾರದ ಕಡೆಗೆ ಹೆಚ್ಚು ಗಮನವಿರಲಿದೆ. ಕಫದಿಂದ ಬಾಧೆಪಡಬೇಕಾಗುವುದು. ಕೃಷಿ ಉತ್ಪನ್ನಗಳ ತಯಾರಿಕೆಗೆ ಮನಸ್ಸು ತುಡಿಯುವುದು. ಕಾವ್ಯ ಮೊದಲಾದ ಸೃಜನಾತ್ಮಕ ವಿಚಾರಕ್ಕೆ ಸಮಯಕೊಡುವಿರಿ. ಧರ್ಮಕಾರ್ಯಗಳನ್ನು ಮಾಡುವಿರಿ ಅಥವಾ ಮಾಡಿಸುವಿರಿ. ಗುರು ದಶೆ ನಿಮಗೆ ಸಕಲವನ್ನು ಸಾಧಿಸಿಕೊಡುವುದು.
ಸಿಂಹ ರಾಶಿ: ರವಿಯ ಅಧಿಪತ್ಯದ ಈ ರಾಶಿಗೆ ನವೆಂಬರ್ ತಿಂಗಳಿನಲ್ಲಿ ನೀಚ ಸ್ಥಾನದಿಂದ ಮುನ್ನಡೆಯುವನು. ಈ ಸಮಯದಲ್ಲಿ ಅಶುದ್ಧವಾದ ಕಲಬೆರಕೆ ವಸ್ತುಗಳ ಮಾರಾಟದಿಂದ ಹಣಸಂಪಾದನೆಯಾಗಲಿದೆ. ಇದರಿಂದ ತೊಂದರೆಯೂ ಬರಲಿದೆ. ಸರ್ಕಾರದಿಂದ ನಿಮಗೆ ದಂಡವೂ ವಿಧಿಸಬಹುದು. ಇನ್ನು ಸುತ್ತಾಟದಲ್ಲಿ ಆಸಕ್ತಿ ಹೆಚ್ಚು. ಅಕಾರಣವಾದ ತಿರುಗಾಟವನ್ನು ಮಾಡಬೇಕಾಗುವುದು. ಬಂಗಾರದ ಕೆಲಸ, ಬಂಗಾರವನ್ನು ಪರಿಶ್ರಮದಿಂದ ತೆಗೆಯುವ ಕೆಲಸವನ್ನು ಮಾಡುತ್ತೀರಿ. ಮೊದಲಾದ ದ್ರವ್ಯಗಳ ಮಾರಾಟ ಮಾಡುವರು. ಅದರಿಂದ ಲಾಭ ಪಡೆಯುವರು. ವಿದ್ಯಾಭ್ಯಾಸ ನಿಮಗೆ ಸಂತೃಪ್ತಿಯನ್ನು ಕೊಡಲಿದೆ. ರವಿದಶೆ ನಿಮಗೆ ಮಿಶ್ರದಶೆ, ಎಡವುವ ಸಂದರ್ಭದಲ್ಲಿ ಜಾಗರೂಕರಾಗಿರಿ.
ಕನ್ಯಾ ರಾಶಿ: ನವೆಂಬರ್ ತಿಂಗಳಿನಲ್ಲಿ ಆರನೇ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ದ್ವಿತೀಯ ಸ್ಥಾನದಲ್ಲಿರುವನು. ಬೋದಕ ವರ್ಗದಲ್ಲಿ ಗುರುತಿಸಿಕೊಳ್ಳುತ್ತಾರೆ. ವ್ಯಾಪಾರದಲ್ಲಿ ಬಹಳ ಅಚ್ಚುಕಟ್ಟಾಗಿ ಮಾತನ್ನಾಡಿ ವ್ಯವಹಾರವನ್ನು ಗಿಟ್ಟಿಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಧನಸಂಪಾದನೆಯನ್ನು ವ್ರತದ ರೀತಿಯಲ್ಲಿ ಕೈಗೊಳ್ಳುವರು. ವಾಗ್ಮಿಗಳಿಗೆ ಅವಕಾಶ ಹಾಗೂ ಮಾತಿನ ಕೌಶಲವಿರುವವರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಸೇರಿಕೊಳ್ಳುವ ಅವಕಾಶವೂ ಸಿಗಲಿದೆ. ಬುಧ ದಶೆ ಅನುಕೂಲ ದಶೆಯಾಗಿಯೇ ಇದೆ. ಶನಿ ದೃಷ್ಟಿ ಈ ರಾಶಿಗೆ ಇರುವ ಕಾರಣ ಸಾಮರ್ಥ್ಯದಿಂದ ಸ್ಥಾನ ಕಷ್ಟ. ಕಬ್ಬಿಣದ ಕೆಲಸಕ್ಕೂ ದಾರಿ ಸಿಗುವುದು. ಸೇವಕನಾಗಿಯೂ ಜೀವನ ಸಾಗಿಸಬೇಕಾಗುವುದು.
ತುಲಾ ರಾಶಿ: ಏಳನೇ ರಾಶಿಗೆ ನವೆಂಬರ್ ತಿಂಗಳಿನಲ್ಲಿ ಶುಭ. ರಾಶಿಯ ಅಧಿಪತಿ ತನ್ನ ರಾಶಿಯಿಂದ ಮಿತ್ರನ ರಾಶಿಗೆ ಹೋಗುವನು. ರಸಿಕತೆಯ ಮಾತುಗಳನ್ನು ಹೆಚ್ಚಾಡುವರು. ಸ್ತ್ರೀಯರ ಸಂಗದಲ್ಲಿ ಸದಾ ಇರುತ್ತಾರೆ. ಅವರ ಜೊತೆ ಮಾತನಾಡಲು, ಸುತ್ತಾಡಲು ಬಹಳ ಇಷ್ಟ. ಅವರಿಗೋಸ್ಕರ ಸಂಪತ್ತು ಕಳೆದುಕೊಳ್ಳುವುದು ಆಗಲಿದೆ. ತಿಂಗಳ ಆರಂಭದಲ್ಲಿ ಇದ್ದ ಕಾರ್ಯನಿಷ್ಠೆ, ಸಂಪಾದನೆಯ ಕುಶಲತೆ, ಎಲ್ಲವೂ ಅನಂತರ ಕಾಮದಿಂದಾಗಿ ನಷ್ಟವಾಗುವುದು. ಬಂಧುಗಳಲ್ಲಿ ಗುರುತಿಸಲ್ಪಡುವ ಸಂಪತ್ತು ಇವರದಾಗಿರುತ್ತದೆ. ಶುಕ್ರದಶೆ ಚೆನ್ನಾಗಿ ಇವರಿಗೆ ಆಗಬಾರದಿದ್ದರೂ ಉಳಿದ ವಿಚಾರಕ್ಕೆ ಜಾಗರೂಕತೆ ಬೇಕು. ಮಕ್ಕಳು ದಾರಿ ತಪ್ಪುವ ಸಾಧ್ಯತೆ ಈ ತಿಂಗಳಲ್ಲಿ ಅಧಿಕ.
ವೃಶ್ಚಿಕ ರಾಶಿ: ಎಂಟನೆಯ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಶುಭ. ರಾಶಿಯ ಅಧಿಪತಿ ಸ್ವರಾಶಿಯಲ್ಲಿಯೇ ಇದ್ದು, ರಾಶಿಕರಿಗೆ ಒಳ್ಳೆಯದನ್ನೇ ಮಾಡುವನು. ನಿಮ್ಮ ಕಾರ್ಯಕ್ಕೆ ಹಲವರಿಂದ ಹಲವು ಕಡೆಗಳಿಂದ ಪ್ರಶಂಸೆಯ ಪ್ರವಾಹವೇ ಬರುವುದು. ರಾಜಮರ್ಯಾದೆ ಸಿಗಲಿದೆ. ಸ್ವಂತ ಕಾರ್ಯಕ್ಕಾಗಿ ಹೆಚ್ಚು ಓಡಾಟವನ್ನೂ ಮಾಡಬೇಕು. ಶ್ರಮವಹಿಸದೆ ಸ್ಥಾನ ಸಿಗದು. ಸ್ಥಾನಮಾನದ ಆಸಕ್ತಿಯೂ ಇರುವುದು. ಆದ್ದರಿಂದ ಉತ್ಸಾಹಕ್ಕೆ ಯಾರಿಂದಲೂ ಭಂಗವಿಲ್ಲ. ಇದ್ದರೂ ಅದು ಇವರನ್ನು ಬಾಧಿಸದು. ಸೈನ್ಯ ಅಥವಾ ರಕ್ಷಣೆಯ ವಿಷಯದಲ್ಲಿ ನೇತೃತ್ವ ಸಿಗುವುದು. ಆಯುಧಗಳಿಂದ ದೇಹಕ್ಕೆ ಘಾಸಿಯಾಗಲಿದೆ. ಮನಸ್ಸಿಗೂ ಕೆಲವರ ಮಾತು ಚುಚ್ಚಲಿದೆ. ಗುರುದೃಷ್ಟಿ ಇರುವಾಗ ಅದು ಮನಸ್ಸಿಗೆ ಅಂಟಿಕೊಳ್ಳದೆ ದೂರವಾಗುವುದು. ಕುಜ ದಶೆಯಿದ್ದವರಿಗೆ ಶ್ರೇಯಸ್ಸು.
ಧನು ರಾಶಿ: ನವೆಂಬರ್ ತಿಂಗಳಿನಲ್ಲಿ ನೀವು ಅಷ್ಟೊಂದು ಶುಭದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಗುರುವು ಅಷ್ಟಮದಲ್ಲಿ ಸ್ಥಿತನಾಗಿದ್ದಾನೆ. ಸಂತತಿ ಸಂಸಾರ ಎಲ್ಲವೂ ಇದ್ದರೂ ಅವರ ಜೊತೆ ಸುಖವಾಗಿ ಸಂತೋಷಪಡಲಾರರು. ಕೊರತರಗಳೇ ಕಾಣಿಸುವುದು. ಕಫಕ್ಕೆ ಸಂಬಂಧಿಸಿದ ರೋಗದ ಆಧಿಕ್ಯವೂ ಆಗಲಿದೆ. ಮನಸ್ಸೂ ದುರ್ಬಲವಾಗುವುದು. ತಿಂಗಳ ಅಂತ್ಯದಲ್ಲಿ ಪ್ರಭಾವಿಗಳ ಸಹವಾಸ, ಮಕ್ಕಳ ಜೊತೆಗಿನ ಮನಸ್ತಾಪ, ಬೋಧನೆಯಿಂದ ಅರ್ಥ ಲಾಭ. ಸಂಗಾತಿಯೂ ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ಕಲಾವಿದರಿಗೆ ನಿರೀಕ್ಷಿತ ಸ್ಥಾನ, ಮನ್ನಣೆ ಸಿಗಲಿದೆ. ಗುರುದಶೆ ನಿಮಗೆ ಉತ್ತಮ.
ಮಕರ ರಾಶಿ: ಹತ್ತನೇ ರಾಶಿಯೂ ಶನಿಯ ಆಧಿಪತ್ಯದ್ದೇ ಆಗಿದ್ದು ಈ ವಾರ ಶುಭ. ತನಗೆ ಸಮಾನವಾದ ರಾಶಿಯಲ್ಲಿಯೂ ತೃತೀಯದಲ್ಲಿಯೂ ಇರುವ ಕಾರಣ ಎಲ್ಲ ಕಾರ್ಯಗಳನ್ನೂ ಬುದ್ಧಿವಂತಿಕೆಯಿಂದ ಮಾಡುವಿರಿ. ಆತ್ಮವಿಶ್ವಾಸಕ್ಕೂ ಯಾವ ಅಡ್ಡಿಯೂ ಆಗದು. ನಕಾರಾತ್ಮಕ ಅಂಶಗಳನ್ನು ಮನಸ್ಸಿಗೆ ತಂದುಕೊಳ್ಳದೇ ಮಾಡಬೇಕಾದುದನ್ನು ಮಾಡುತ್ತೀರಿ. ವೃದ್ಧಾಪ್ಯದವರಾಗಿದ್ದರೆ ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದು. ಅಧಿಕಾರಿಗೆ ನಿಷ್ಠರಾಗಿ ಅಥವಾ ಯಾವುದಾದರೂ ಪ್ರಭಾವಿಗಳ ಸಹವಾಸ ನಿಮಗೆ ಸಿಗಲಿದೆ. ಶನಿದಶೆ ನಿಮಗೆ ಉತ್ತಮವೇ. ಗುರುವಿನ ವಿಶೇಷ ದೃಷ್ಟಿ ಈ ತಿಂಗಳ ಮಧ್ಯದವರೆಗೂ ಇರಲಿದೆ, ನಿಮ್ಮ ಕಾರ್ಯಕ್ಕೆ ಉಂಟಾಗುವ ಅಡೆತಡೆಗಳೂ ನಿರ್ಮೂಲವಾಗಲಿವೆ.
ಕುಂಭ ರಾಶಿ: ಈ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ರಾಶಿಯ ಅಧಿಪತಿ ದ್ವಿತೀಯ ಸ್ಥಾನದಲ್ಲಿರುವನು. ರಾಜರಿಗೆ ಸಮಾನವಾದ ಗೌರವ ಆದರಗಳು ನಿಮಗೆ ಅನಾಯಾಸವಾಗಿ ನಿಮಗೆ ಮುಖಂಡತ್ವ ಸಿಗುವುದು. ವಿದ್ಯೆಯ ಸಂಪಾದನೆಯನ್ನೂ ವಿದ್ಯೆಯಿಂದ ಸಂಪಾದನೆಯನ್ನೂ ಮಾಡಲು ಸಾಧ್ಯ. ಆದರೆ ಇದಕ್ಕೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಇಲ್ಲವಾದರೆ ಲೆಕ್ಕಪರಿಶೋಧನೆಯಿಂದ ಸ್ವಯಾರ್ಜಿತ ಸಂಪತ್ತು ನಾಶವಾಗಬಹುದು. ಮುಖ, ಕಣ್ಣು, ಕಿವಿಯ ರೋಗಗಳು ಕಾಣಿಸಿಕೊಳ್ಳುವುದು. ಔಷಧೋಪಚಾರವನ್ನು ಅಲಕ್ಷ್ಯ ಮಾಡುವುದು ಬೇಡ. ಶನಿ ದಶೆ ಸದ್ಯ ಅನುಕೂಲವನ್ನೇ ಮಾಡಿಕೊಡುವುದು. ಸಾಡೇಸಾಥ್ ಎಂಬ ಭಯಬಿಟ್ಟು ಕಾರ್ಯಪರರಾಗಿ.
ಮೀನ ರಾಶಿ: ನವೆಂಬರ್ ತಿಂಗಳಿನಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಈ ತಿಂಗಲ ಮಧ್ಯಭಾಗದವರಿಗೆ ಪಂಚಮದಲ್ಲಿರುವನು. ಕರ್ಕಾಟಕ ರಾಶಿಯಲ್ಲಿರುವ ಗುರು ಒಳ್ಳೆಯ ಮಕ್ಕಳನ್ನೂ, ನಿಮ್ಮನ್ನು ಅನುಸರಿಸುವ ಸಂಗಾತಿಯನ್ನು ಕೊಡುವನು. ಸುಖವಾದ ಜೀವನ ಮಧ್ಯಾವಧಿಯ ತನಕ ಇರಲಿದೆ. ಅನಂತರ ನಿಮಗೆ ಹೆಚ್ಚು ಉಪಕರಣಗಳನ್ನು ಬಳಸುತ್ತಾರೆ, ಮಕ್ಕಳು ನಿಮ್ಮ ಜೊತೆಗೇ ಇರುವರು. ನಿರಂತರ ಯಾವುದಾದರೊಂದು ಆಲೋಚನೆಯಲ್ಲಿ ಸರ್ವದಾ ಮುಳುಗಿರುವಿರಿ. ಆದರೆ ಯಾವುದೇ ಸುಖಕ್ಕೆ ಕೊರತೆಯಾಗದು. ಗುರು ದಶೆ ನಿಮಗೆ ಉತ್ತಮವಾದುದು. ಇದರ ಜೊತೆಗೆ ಶನಿಯೂ ನಿಮ್ಮ ರಾಶಿಯವರಲ್ಲಿ ಇರುವ ಕಾರಣರ ಹಣವನ್ನು ಆಶ್ರಯಿಸಬೇಕಾಗುವುದು. ಸರ್ಕಾರದ ಕಾರ್ಯಗಳಿಗಾಗಿ ಬೇಗ ಮಾಡಿಕೊಳ್ಳುವ ಚತುರತೆ ಇರುವುದು. ಯಾವುದೇ ನಾಯಕತ್ವವನ್ನು ಪಡೆಯಿರಿ.
ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)