Headlines

ಹಂಪಿಗೆ 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು, ಶನಿವಾರ ಬರೋಬ್ಬರಿ 90 ಸಾವಿರ ಟೂರಿಸ್ಟ್! | Unesco Site Hampi Weekend Tourist Rush

ಹಂಪಿಗೆ 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು, ಶನಿವಾರ ಬರೋಬ್ಬರಿ 90 ಸಾವಿರ ಟೂರಿಸ್ಟ್! | Unesco Site Hampi Weekend Tourist Rush



ಹಂಪಿಗೆ 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು, ಶನಿವಾರ ಬರೋಬ್ಬರಿ 90 ಸಾವಿರ ಟೂರಿಸ್ಟ್! | Unesco Site Hampi Weekend Tourist Rush

Hampi weekend tourist rush: ವಿಶ್ವಪಾರಂಪರಿಕ ತಾಣವಾದ ಹಂಪಿಗೆ ವಾರಾಂತ್ಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಶನಿವಾರ ಭಾನುವಾರದಂದು ಆಗಮಿಸಿದ ದೇಶ ವಿದೇಶಿ ಪ್ರವಾಸಿಗರು, ವಿರೂಪಾಕ್ಷೇಶ್ವರ ದೇವಾಲಯ ಸೇರಿದಂತೆ ಹಂಪಿಯ ಪ್ರಮುಖ ಐತಿಹಾಸ ಸ್ಮಾರಕ ವೀಕ್ಷಿಸಿ ಆನಂದಿಸಿದರು.

ಹೊಸಪೇಟೆ (ಅ.27): ವಿಶ್ವಪ್ರಸಿದ್ಧ ಯುನೆಸ್ಕೋ ವಿಶ್ವಪಾರಂಪರಿಕ ಸ್ಥಳವಾದ ಹಂಪಿಗೆ ವಾರಾಂತ್ಯದಲ್ಲಿ ಭಾರೀ ಪ್ರವಾಸಿಗರ ಆಗಮನ ಕಂಡುಬಂದಿದೆ. ಶನಿವಾರ ಮತ್ತು ಭಾನುವಾರದ ಎರಡು ದಿನಗಳಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿ ಖುಷಿಗೊಂಡಿದ್ದಾರೆ.

ಶನಿವಾರ ಬರೋಬ್ಬರಿ 90 ಸಾವಿರ ಪ್ರವಾಸಿಗರು!

ಶನಿವಾರ ಏಕಾಏಕಿ 90 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದರೆ, ಭಾನುವಾರ ಸುಮಾರು 60 ಸಾವಿರಕ್ಕೂ ಅಧಿಕ ಜನ ಧಾವಿಸಿದ್ದಾರೆ. ಪ್ರವಾಸಿಗರು ಹಂಪಿಯ ಪ್ರಮುಖ ಆಕರ್ಷಣೆಗಳಾದ ವಿರೂಪಾಕ್ಷೇಶ್ವರ ದೇವಾಲಯ, ಬಸವಣ್ಣ ಮಂಟಪ, ಕಡಲೆಕಾಳು ಮತ್ತು ಸಾಸಿವೆಕಾಳು ಗಣಪತಿ ಮಂಟಪಗಳು, ಶ್ರೀಕೃಷ್ಣ ದೇವಾಲಯ, ಹಜಾರ ರಾಮ ದೇವಾಲಯ, ಮಹಾನವಮಿ ದಿಬ್ಬ, ಕೋದಂಡ ರಾಮ ದೇವಾಲಯ, ಕಮಲ ಮಹಲ್‌, ಆನೆಲಾಯ, ರಾಜರ ರಹಸ್ಯ ಸಭಾಗೃಹ, ಪುಷ್ಕರಣಿಗಳು, ಪುರಂದರ ದಾಸರ ಮಂಟಪ ಹಾಗೂ ರಾಜರ ತುಲಾಭಾರ ಸ್ಥಳಗಳನ್ನು ಭೇಟಿ ನೀಡಿ ಆನಂದಿಸಿದ್ದಾರೆ.

ಹಂಪಿ ಪ್ರವಾಸಿಗರ ಆಕರ್ಷಣೆ:

ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಪ್ರತಿಬಿಂಬಿಸುವ ಈ ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸಿವೆ.ಈ ಭಾರೀ ಆಗಮನದಿಂದ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆತಿದ್ದು, ಹೋಟೆಲ್‌ಗಳು, ಸಾರಿಗೆ ಮತ್ತು ಮಾರ್ಗದರ್ಶಕರ ಬೇಡಿಕೆ ಹೆಚ್ಚಾಗಿದೆ. ಪ್ರಾಧಿಕಾರಗಳು ಸುರಕ್ಷತೆ ಮತ್ತು ಸ್ವಚ್ಛತೆಗೆ ಒತ್ತು ನೀಡಿವೆ. ಹಂಪಿಯ ಐತಿಹಾಸಿಕ ಶ್ರೀಮಂತಿಕೆ ಪ್ರವಾಸಿಗರನ್ನು ಮತ್ತೆ ಮತ್ತೆ ಆಕರ್ಷಿಸುತ್ತಿದೆ.



Source link

Leave a Reply

Your email address will not be published. Required fields are marked *