Headlines

Namma Metro: ನಮ್ಮ ಮೆಟ್ರೋ ರೆಡ್ ಲೈನ್​ಗೆ ಇನ್ನೊಮ್ಮೆ ಡಿಪಿಆರ್ ಸಲ್ಲಿಕೆ; ಈ ಬಾರಿಯಾದ್ರು ಕೇಂದ್ರದಿಂದ ಸಿಗುತ್ತಾ ಗ್ರೀನ್ ಸಿಗ್ನಲ್

Namma Metro: ನಮ್ಮ ಮೆಟ್ರೋ ರೆಡ್ ಲೈನ್​ಗೆ ಇನ್ನೊಮ್ಮೆ ಡಿಪಿಆರ್ ಸಲ್ಲಿಕೆ; ಈ ಬಾರಿಯಾದ್ರು ಕೇಂದ್ರದಿಂದ ಸಿಗುತ್ತಾ ಗ್ರೀನ್ ಸಿಗ್ನಲ್


ಮೆಟ್ರೋ ಯೋಜನೆ ವೆಚ್ಚ ಇಳಿಸಿ ಮತ್ತೊಮ್ಮೆ ಡಿಪಿಆರ್ ಸಲ್ಲಿಸಿರುವ ಕುರಿತು ಮಾತನಾಡಿದ ಡಿಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್ 27: ಈ ಹಿಂದೆ ರಾಜ್ಯ ಸರ್ಕಾರ ಸರ್ಜಾಪುರ ಟು ಹೆಬ್ಬಾಳ ರೆಡ್ ಲೈನ್ ಯೋಜನೆ (ರೆಡ್‌ಲೈನ್ ಮೆಟ್ರೋ ಯೋಜನೆ) ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಆದರೆ ಯೋಜನೆಯ ವೆಚ್ಚ ಹೆಚ್ಚಾಗಿದೆ, ಕಡಿಮೆ ಮಾಡಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನೆಲೆ ರಾಜ್ಯ ಸರ್ಕಾರ ಯೋಜನೆಯ ವೆಚ್ಚವನ್ನು ಕಡಿಮೆ ಮಾಡಿ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಯೋಜನೆ ಸಂಪೂರ್ಣ ಮಾಹಿತಿ ಕಳುಹಿಸಲಾಗಿದೆ. ಈ ಬಾರಿಯಾದರೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ.

ಯೋಜನಾ ವೆಚ್ಚ ಕಡಿಮೆ ಮಾಡಿ ಮತ್ತೊಮ್ಮೆ ಡಿಪಿಆರ್ ಸಲ್ಲಿಕೆ

ನಮ್ಮ ಮೆಟ್ರೋ ಹೆಬ್ಬಾಳ ಟು ಸರ್ಜಾಪುರ ಹಂತ 3A. ಯೋಜನೆಗೆ ಈ ಹಿಂದೆ ರಾಜ್ಯ ಸರ್ಕಾರ 28,405 ಕೋಟಿಯ ಡಿಪಿಆರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಯೋಜನೆ ವೆಚ್ಚಕ್ಕಿಂತ ಕಡಿಮೆ ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಥರ್ಡ್ ಪಾರ್ಟಿಯಿಂದ ಮತ್ತೊಮ್ಮೆ ಹೊಸ DPR ರೆಡಿ ಮಾಡಿದ್ದು, ಇದರಲ್ಲಿ 28,405 ಕೋಟಿಯಿಂದ 25,485 ಗೆ ವೆಚ್ಚವನ್ನು ಇಳಿಸಲಾಗಿದೆ. ಅಂದರೆ 2,920 ಕೋಟಿಗಳಷ್ಟು ಯೋಜನೆ ವೆಚ್ಚವನ್ನು ಕಡಿಮೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಿಂದೆ ಒಂದು ಕಿ.ಮೀಗೆ 767 ಕೋಟಿ ವೆಚ್ಚವಾಗುತ್ತದೆ ಎಂದು ಡಿಪಿಆರ್ ಮಾಡಲಾಗಿತ್ತು. ಇದೀಗ ಒಂದು ಕಿ.ಮೀ ಗೆ 688 ಕೋಟಿ ವೆಚ್ಚ ಎಂದು ವರದಿ ನೀಡಿದೆ.

ಕೇಂದ್ರ ಸಚಿವರೊಡನೆ ನೂತನ ಮೆಟ್ರೋ ಯೋಜನೆಯನ್ನು ಕುರಿತು ಮಾತನಾಡುತ್ತೇನೆ ಎಂದ ಡಿಸಿಎಂ

ಸರ್ಜಾಪುರದಿಂದ ಹೆಬ್ಬಾಳ ಮಾರ್ಗದಲ್ಲಿ ಒಟ್ಟು- 28 ಮೆಟ್ರೋ ನಿಲ್ದಾಣಗಳು ಬರಲಿದೆ. ಈ ಬಗ್ಗೆ ಮಾತನಾಡಿದ ಡಿಸಿಎಂ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ನಾವು ಜನರಿಗಾಗಿ ಆದಷ್ಟು ಮೆಟ್ರೋ ಜಾಸ್ತಿ ಮಾಡಲು ಡಿಪಿಆರ್ ಸಿದ್ಧವಾಗಿದೆ. ಅಕ್ಟೋಬರ್- 30 ರಂದು ಬೆಂಗಳೂರಿಗೆ ಸಚಿವರು ಬರುತ್ತಿದ್ದಾರೆ. ಆ ವೇಳೆ ಅವರ ಮುಂದೆ ಈ ಬಗ್ಗೆ ಒತ್ತಡ ಹಾಕುತ್ತೇವೆ.

ಪ್ರಧಾನ ಮಂತ್ರಿಗಳಿಗೆ ಈ ಬಗ್ಗೆ ತಿಳಿಸಿದ್ದೀವಿ. ಸದ್ಯ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ. ಕೇವಲ 13% ರಿಂದ 14% ರಷ್ಟು ಮಾತ್ರ ಹಣ ನೀಡಲಾಗುತ್ತಿದೆ. ಉಳಿದ ಹಣ ನಮ್ಮದೇ ಆಗಿರುತ್ತದೆ. ಅದು ನಮ್ಮ ಕರ್ತವ್ಯ ನಮ್ಮ ಕೆಲಸ ನಾವು ಮಾಡುತ್ತೇವೆ. ಈ ಕೆಂಪು ಮೆಟ್ರೋ ಮಾರ್ಗವು ಹೆಬ್ಬಾಳದಲ್ಲಿ ನೀಲಿ ಮಾರ್ಗ, ಕೆಆರ್‌ ವೃತ್ತದಲ್ಲಿ ‘ನೇರಳೆ ಮಾರ್ಗಕ್ಕೆ ಕನೆಕ್ಟ್ ಮಾಡಲಿದೆ. ಡೈರಿ ವೃತ್ತದಲ್ಲಿ ಗುಲಾಬಿ ಮಾರ್ಗ ಹಾಗೂ ಆಗರದಲ್ಲಿ ‘ನೀಲಿ ಮಾರ್ಗ’ವನ್ನು ಸಹ ಕನೆಕ್ಟ್ ಮಾಡಲಿದೆ. ಹೀಗಾಗಿ ಇಲ್ಲಿ ನಾಲ್ಕು ಇಂಟರ್‌ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಯಾವ್ಯಾವ ಏರಿಯಾದಲ್ಲಿ ಮೆಟ್ರೋ ಸ್ಟೇಷನ್‌ಗಳು ಬರಲಿವೆ

ಹೆಬ್ಬಾಳ, ಗಂಗಾನಗರ, ಪಶುವೈದ್ಯಕೀಯ ಮಹಾವಿದ್ಯಾಲಯ, ಮೇಖ್ರಿ ಸರ್ಕಲ್, ಗಾಲ್ಫ್ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆಆರ್ ಸರ್ಕಲ್, ಟೌನ್ ಹಾಲ್, ಶಾಂತಿನಗರ, ನಿಮ್ಹಾನ್ಸ್, ಡೈರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಕಾರ್ಕಳ, ಬೆಳ್ಳೂರು, ಬೆಳ್ಳೂರು, ಬೆಳ್ಳೂರು, ಗ್ರಾ.ಪಂ. ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರ ಈ ಮಾರ್ಗಗಳಲ್ಲಿ ಮೆಟ್ರೋ ನಿಲ್ದಾಣಗಳು ಬರಲಿವೆ.



Source link

Leave a Reply

Your email address will not be published. Required fields are marked *