‘ನಿನ್ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್

‘ನಿನ್ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್


‘ಬಿಗ್ ಬಾಸ್ ಕನ್ನಡ ಸೀಸನ್ 12’ರ (ಬಿಬಿಕೆ 12) ನಾಲ್ಕನೇ ವೀಕೆಂಡ್‌ನಲ್ಲಿ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಗಿದೆ. ದೀಪಾವಳಿ ಪ್ರಯುಕ್ತ ಯಾವುದೇ ಎಲಿಮಿನೇಷನ್ ಇರೋದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿದೆ. ಆದರೆ, ಬಿಗ್ ಬಾಸ್ ನಲ್ಲಿ ಇದ್ದ ಸ್ಪರ್ಧಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಪ್ರ್ಯಾಂಕ್ ಎಲಿಮಿನೇಷನ್ ಗೆ ರಾಶಿಕಾ ಹಾಗೂ ಸ್ಪಂದನಾ ಸೋಮಣ್ಣ ಒಂದು ಕ್ಷಣ ಕಂಗಾಲಾದರು. ಮನೆಯಿಂದ ಹೊರ ಹೊರಟ ರಾಶಿಕಾನ ಸೂರಜ್ ತಬ್ಬಿದ್ದಾರೆ.

ಸೂರಜ್ ಹಾಗೂ ರಾಶಿಕಾ ಮಧ್ಯೆ ಪ್ರೀತಿ ಮೂಡುತ್ತಿದೆ. ಆದರೆ, ನೋಡುಗರಿಗೆ ಇದು ತುಂಬಾನೇ ನಾಟಕೀಯ ಎನಿಸುತ್ತಿದೆ. ಜನಪ್ರಿಯತೆ ಗಳಿಸಬೇಕು ಎಂಬ ಕಾರಣಕ್ಕೆ ರಾಶಿಕಾ ಅವರು ಈ ರೀತಿಯ ಪ್ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಸುದೀಪ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಹೀಗೆ ಮುಂದುವರಿದರೆ ಆಟ ಶೀಘ್ರವೇ ಕೊನೆಗೊಳ್ಳುತ್ತದೆ ಎಂದು ರಾಶಿಗೆ ಸುದೀಪ್ ಬುದ್ಧಿಮಾತು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಗ್ ಬಾಸ್ಕಾಗೆ ಚಮಕ್ ಆಯ್ಕೆ. ನಾಮಿನೇಟ್ ಆದವರ ಮೇಲಕ್ಕೆ ಧ್ರುವಂತ್, ರಾಶಿಕಾ ಹಾಗೂ ಸ್ಪಂದನಾ ಅವರು ಅಂತಿಮವಾಗಿ ಉಳಿದುಕೊಂಡರು. ಈ ಮೇಲಕ್ಕೆ ಧ್ರುವಂತ್ ಸೇವ್ ಆದರು. ಈ ಬೆನ್ನಲ್ಲೇ, ‘ರಾಶಿಕಾ ಹಾಗೂ ಸ್ಪಂದನಾ ನೀವಿನ್ನು ಮನೆಯಿಂದ ಹೊರಡಬಹುದು’ ಎಂದರು. ಇದರಿಂದ ರಾಶಿಕಾ ಹಾಗೂ ಸ್ಪಂದನಾ ಕಣ್ಣೀರು ಹಾಕಲು ಆರಂಭಿಸಿದರು.

ಇದನ್ನೂ ಓದಿ

ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್: ಸ್ಪರ್ಧಿಗಳ ಎದೆಯಲ್ಲಿ ಆಘಾತವನ್ನು ಹೆಚ್ಚಿಸಿದ ಕಿಚ್ಚ ಸುದೀಪ್

ಓಡಿ ಬಂದ ಸೂರಜ್ ಅವರು ರಾಶಿಕಾನ ತಬ್ಬಿಕೊಂಡರು. ಸೂರಜ್‌ಗೂ ಇದು ಸಾಕಷ್ಟು ಬೇಸರ ಮೂಡಿಸಿತು. ‘ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದ ಸೂರಜ್. ಆ ಬಳಿಕ ಮುಖ್ಯದ್ವಾರ ತೆರೆದಾಗ, ‘ಎಲಿಮಿನೇಷನ್ ಇರೋದಿಲ್ಲ’ ಎಂಬ ಬೋರ್ಡ್ ಕಂಡು ರಾಶಿಕಾ ಹಾಗೂ ಸ್ಪಂದನಾ ಖುಷಿ ಆದರು. ಈ ವೇಳೆ ಮತ್ತೆ ಓಡೋಡಿ ಬಂದ ಸೂರಜ್ ರಾಶಿಕಾನ ಮತ್ತೆ ತಬ್ಬಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ

ರಂದು ಪ್ರಕಟಿಸಲಾಗಿದೆ – 9:01 am, ಸೋಮ, 27 ಅಕ್ಟೋಬರ್ 25



Source link

Leave a Reply

Your email address will not be published. Required fields are marked *