ಹಾಸನ, ಅಕ್ಟೋಬರ್ 27: ಹಾಸನದ ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿ ವಿರುದ್ಧ ಮಹಿಳೆಯರನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದ್ದು, ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ತೋಟದಲ್ಲಿದ್ದಾರೆ. ಟೇಲರ್ ಲೇಡಿ ಈ ಮಹಿಳೆಯ ಬಳಿಯೇ ಅಂಗಡಿಗೆ ಬಾಡಿಗೆಗೆ ತೆಗೆದುಕೊಂಡಿದ್ದು, 2 ವರ್ಷದಿಂದ ಬಾಡಿಗೆ ನೀಡಿರಲಿಲ್ಲ. 16 ಲಕ್ಷದ ಕಾರು, ಕೋಟ್ಯಂತರ ರೂ. ಬೆಲೆ ಬಾಳುವ ಮನೆ ಖರೀದಿಸಿ ಹೈ ಫೈ ಜೀವನ ನಡೆಸುತ್ತಿದ್ದ ಟೇಲರ್ ಲೇಡಿಯ ಆಟ ಬಯಲಾಗಿತ್ತು, ಮೂರು ಕೋಟಿ ರೂ.ಗಳ ವಂಚನೆ ಮಾಡಿ ಕಾಣೆಯಾಗಿತ್ತು.
ನಿಮ್ಮ ಚಿನ್ನವನ್ನಾದರೂ ಅಡವಿಟ್ಟು ನನಗೆ ಹಣ ನೀಡಿ, ಚೀಟಿ ದುಡ್ಡು ಬಂದ ಮೇಲೆ ಹಿಂದಿರುಗಿಸುತ್ತೇನೆ. ನಿಮ್ಮನ್ನು ಬಿಟ್ಟು ಬೇರೆ ಯಾರ ಬಳಿಯೂ ಈ ವ್ಯವಹಾರ ನಡೆಸುತ್ತಿಲ್ಲವೆಂದು ಬಣ್ಣ ಬಣ್ಣದ ಮಾತನಾಡಿ 5 ತಿಂಗಳ ಹಿಂದೆ ನನ್ನ ಬಳಿಯೇ 7.5 ಲಕ್ಷ ರೂ. ತೆಗೆದುಕೊಂಡಿದ್ದಾಳೆ. ಹಿಂದಿರುಗಿಸಿಲ್ಲವೆಂದು ನೊಂದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಹಾಸನ: ಕೋಟಿ ಕೋಟಿ ಲಪಟಾಯಿಸಿದ ಹಾಸನದ ಟೈಲರಮ್ಮನ ಕಥೆ: 16 ಲಕ್ಷದ ಕಾರು, ಕೋಟಿ ಬೆಲೆ ಬಾಳುವ ಮನೆ! ಇಷ್ಟೆಲ್ಲ ಸಂಪಾದಿಸಿದ್ದಕ್ಕೆ!?
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.