ಬಿಗ್ ಬಾಸ್ ಮನೆಯ ಒಳಗೆ ರಾಶಿಕಾ ಶೆಟ್ಟಿ (Rashika Shetty) ಮತ್ತು ಸೂರಜ್ ಅವರು ಪ್ರೇಮಿಗಳ ರೀತಿ ಕ್ಲೋಸ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ಬಿಗ್ ಬಾಸ್ ಒಂದು ಹೊಸ ಟಾಸ್ಕ್ ಹೇಳಿದೆ. ಈ ವಾರ ಪೂರ್ತಿ ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ ಸೀಸನ್ 12) ಮನೆ ಒಂದು ಕಾಲೇಜ್ ಕ್ಯಾಂಪಸ್ ರೀತಿ ಆಗಿರುತ್ತದೆ. ಈ ಯುವ ಹೃದಯಗಳ ನಡುವೆ ಪ್ರೀತಿ ಚಿಗುರಲು ಪ್ರೇರಣೆ ಸಿಕ್ಕಂತೆ ಆಗಿದೆ. ಆಪ್ತವಾಗಿರುವ ರಾಶಿಕಾ ಶೆಟ್ಟಿ ಮತ್ತು ಸೂರಜ್ (ಸೂರಜ್ ಸಿಂಗ್) ಅವರು ಇನ್ನಷ್ಟು ಹತ್ತಿರ ಆಗಿದ್ದಾರೆ. ‘ಲೈನ್ ಹೊಡೆಯಬಹುದಾ’ ಎಂದು ಸೂರಜ್ ಕೇಳಿದ್ದಾರೆ. ಟಾಸ್ಕ್ ನಲ್ಲಿ ಇಲ್ಲದೇ ಇದ್ದರೂ ಸೂರಜ್ ಹಾಗೂ ರಾಶಿಕಾ ಶೆಟ್ಟಿ ಭಾರಿ ಆಪ್ತವಾಗಿ ನಡೆದುಕೊಂಡಿದ್ದಾರೆ. ಅದನ್ನು ನೋಡಿ ಕಾಕ್ರೋಜ್ ಸುಧಿ ಅವರಿಗೆ ಅಚ್ಚರಿ ಆಗಿದೆ. ಅ.27ರ ಎಪಿಸೋಡ್ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.