ಗೋಲ್ಗಪ್ಪಾ (ಗೋಲ್ಗಪ್ಪ) ಭಾರತದ ಸ್ಟ್ರೀಟ್ ಫುಡ್ ಗಳಲ್ಲಿ ಒಂದು. ಆದರೆ ತನ್ನ ವಿಶಿಷ್ಟ ರುಚಿಯಿಂದಾಗಿ ಎಲ್ಲರ ಮನಸ್ಸು ಗೆದ್ದಿದೆ. ಕೆಲವರಿಗೆ ಫ್ರೆಂಡ್ಸ್ ಜೊತೆಗೆ ಹೊರಗೆ ಹೋದಾಗ ಗೋಲ್ಗಪ್ಪಾ ತಿನ್ನದೇ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ. ಆದರೆ ಇಲ್ಲೊಬ್ಬ ವೃದ್ಧೆಯೂ (ಮುದುಕಿ) ಬೀದಿ ಬದಿಯಲ್ಲಿ ಗೋಲ್ಗಪ್ಪಾವನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿರುತ್ತಾರೆ. ಆದರೆ ಈ ವಿಡಿಯೋ ವೈರಲ್ ಆಗಲು ಕಾರಣ ಈ ವೃದ್ಧೆಯ ವಯಸ್ಸು ಅಲ್ಲವೇ, ಬದಲಾಗಿ ತಿನ್ನುವ ವೇಗ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೃದ್ಧೆ ಗೋಲ್ಗಪ್ಪ ತಿನ್ನೋ ಪರಿಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಅಜ್ಜಿ ಗೋಲ್ಗಪ್ಪಾ ತಿನ್ನೋ ಸ್ಫೀಡ್ ನೋಡಿ
idiotic media ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಬ್ಬ ವೃದ್ಧ ಮಹಿಳೆಯೊಬ್ಬರು ರಸ್ತೆಬದಿಯಲ್ಲಿ ನಿಂತು ಪಾನಿಪುರಿ ತಿನ್ನುವುದನ್ನು ನೀವು ನೋಡಬಹುದು. ಆ ಮಹಿಳೆ ಪಾನಿಪುರಿ ತಿನ್ನುವುದನ್ನು ಎಷ್ಟು ಬೇಗನೆ ತಿನ್ನುತ್ತಿದ್ದಳೆಂದರೆ, ಆ ವಯಸ್ಸಿನಲ್ಲಿ ಆಕೆ ತಿನ್ನುವ ವೇಗವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಈ ವೀಡಿಯೊ ಸ್ಪರ್ಧೆಯಿಂದ ಬಂದಿರುವಂತೆ ತೋರುತ್ತಿದೆ, ಅಲ್ಲಿ ಸಾಧ್ಯವಾದಷ್ಟು ಬೇಗ ಪಾನಿಪುರಿ ತಿನ್ನುವುದು ಸವಾಲಾಗಿದೆ.
ಇದನ್ನೂ ಓದಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಫೋರ್ಕ್ ಸ್ಪೂನ್ , ಚಾಕುವಿನಿಂದ ಸಮೋಸಾ ತಿನ್ನುವುದು ಹೇಗೆಂದು ಕಲಿಸಿದ ತರಬೇತುದಾರ
ಈ ವಿಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರ ದಾದಿ ರಾಕ್, ಪಬ್ಲಿಕ್ ಶಾಕ್ ಅಂಗಡಿ. ಇತರರು, ಈ ಅಜ್ಜಿಗೆ ಗೋಲ್ಗಪ್ಪಾ ಫೇವರಿಟ್ ಅಂತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಳೆಯ ಆಟಗಾರರು ಮತ್ತೆ ಮೈದಾನಕ್ಕೆ ಬಂದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವು ಅಜ್ಜಿ ಆ ಕಾಲದಲ್ಲಿ ಹೇಗಿದ್ದರು ಎಂದು ಹೇಳಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ