ಬೆಳಗಾವಿ, (ಅಕ್ಟೋಬರ್ 27): ಸ್ನೇಹಿತನನ್ನೇ ಕೊಡಲಿಯಿಂದ ಕೊಚ್ಚಿ ಕೊಂಡು ಬಳಿಕ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ನಡೆದಿದೆ. ಗಿರಿಯಾಲ್ ಗ್ರಾಮದ ಮಂಜುನಾಥ ಗೌಡರ(30) ಕೊಲೆಯಾದ ಯುವಕ. ದಯಾನಂದ ಗುಂಡ್ಲೂರ ಎಂಬಾತನೇ ಹತ್ಯೆ ಮಾಡಿದ ಆರೋಪಿ. ದಯಾನಂದ ಗುಂಡ್ಲೂರ ಹಾಗೂ ಕೊಲೆಯಾದ ಮಂಜುನಾಥ ಗೌಡರ ಸ್ನೇಹಿತರಾಗಿದ್ದರೆ, ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಸಿಟಿನಲ್ಲಿ ದಯಾನಂದ, ಸ್ನೇಹಿತ ಮಂಜುನಾಥನನ್ನು ಕೊಡಲಿಯಿಂದ ಕೊಚ್ಚಿ ಪರಾರಿಯಾಗಿತ್ತು. ಬಳಿಕ ಮಂಜುನಾಥನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆರೋಪಿ ದಯಾನಂದ ನೇರವಾಗಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಎಸ್ಪಿ ಶಾಕಿಂಗ್ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.