ಪ್ರತೀಕಾ ರಾವಲ್ ಬಳಿಕ ಅವರ ಜಾಗಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೀಗ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಪ್ರತೀಕಾ ಬದಲಿಗೆ ಶೆಫಾಲಿ ವರ್ಮಾ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ. ವಾಸ್ತವವಾಗಿ ಶೆಫಾಲಿ ವರ್ಮಾ ಅವರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ತಂಡದಿಂದ ಹೊರಗಿಡಲಾಯಿತು. ಆದಾಗ್ಯೂ, ಪ್ರತೀಕಾ ಅವರ ಗಾಯವು ಈಗ ವರದಾನವಾಗಿದೆ.