ಬೆಂಗಳೂರು, (ಅಕ್ಟೋಬರ್ 27): ಬೆಂಗಳೂರಿನ ಬೆಚ್ಚಿಬೀಳಿಸಿದ್ದ ತಿಲಕನಗರದ ಸಲ್ಮಾ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು 24 ಗಂಟೆಗಳಲ್ಲಿ ಬಂಧಿಸಿದ್ದು, ಸದ್ಯ ಇಬ್ಬರನ್ನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಈ ವೇಳೆ ಪೊಲೀಸರಿಗೆ ಮತ್ತಷ್ಟು ಕಹಾನಿ ನಡೆದಿದೆ. ಸುಬ್ರಹ್ಮಣಿ ಮತ್ತು ಸೆಂಥಿಲ್ ಇಬ್ಬರು ಸೇರಿ ಸಲ್ಮಾಳನ್ನ ಕೊಲೆ ಮಾಡಿ ಮೃತದೇಹ ಬಿಸಾಕಿದ್ದೇಗೆ? ನಂತರ ಅದ್ಯಾವದರಲ್ಲಿ ತಲೆಮರೆಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ರು ಬಟಾಬಯಲು. ಸುಬ್ರಮಣಿಯೇ ಸಲ್ಮಾಳನ್ನ ಕೊಲೆ ಮಾಡಿರುವುದು ಗೊತ್ತಾಗಿದೆ. ಅಚ್ಚರಿ ಅಂದ್ರೆ ಸುಬ್ರಮಣಿ, ಸಲ್ಮಾಳ ಮೃತದೇಹ ಸಾಗಿಸಲು ಆಕೆಯ ಸ್ನೇಹಿತ ಸೆಂಥಿಲ್ ಸಹಾಯ ಪಡೆದಿರುವುದು ಬೆಳಕಿಗೆ ಬಂದಿದೆ.
ವಿಚಿತ್ರ ಅಂದ್ರೆ ಸಲ್ಮಾ ಹಾಗೂ ಸುಬ್ರಹ್ಮಣಿ ಅನೈತಿಕ ಸಂಬಂಧ ಹೊಂದಿದ್ದರು. ಆಕೆ ಶುಕ್ರವಾರ ಸುಬ್ರಹ್ಮಣಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸಲ್ಮಾ ಸೆಂಥಿಲ್ ಜೊತೆ ಸಲುಗೆಯಿಂದ ಇದ್ದಂತೆ. ಇದರಿಂದ ಆಕ್ರೋಶಗೊಂಡಿದ್ದ ಸುಬ್ರಹ್ಮಣಿ, ಕುಡಿತ ಮತ್ತಿನಲ್ಲಿಯೇ ಮನೆಯಲ್ಲಿದ್ದ ರಾಗಿ ಮುದ್ದೆ ತಿರುಗಿಸುವ ಹಿಟ್ಟಿನ ಕೋಲಿನಲ್ಲಿ ಸಲ್ಮಾಳ ತಲೆಗೆ ಹೊಡೆದು ಹಲ್ಲೆ ಮಾಡಿದ. ಹಾಗೆ ಸ್ನೇಹಿತ ಸೆಂಥಿಲ್ ಗೂ ಹೊಡೆದಿದ್ದ. ಈ ಸಲ್ಮಾ ಸ್ಥಳದಲ್ಲೇ ಆಗಿತ್ತು.
ಇದನ್ನೂ ಓದಿ: 4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?
ಇನ್ನು ಸಲ್ಮಾಳ ಮೃತದೇಹವನ್ನು ಮಧ್ಯರಾತ್ರಿ 1.30 ರ ಹೊತ್ತಿಗೆ ಮನೆಯಿಂದ 100 ಮೀ ದೂರದಲ್ಲಿರುವ ಜಾಗಕ್ಕೆ ಕೊಂಡೊಯ್ದಿದ್ದು, ಕಳೆದ 2 ವರ್ಷಗಳಿಂದ ಅದೇ ಜಾಗದಲ್ಲಿ ಕೆಟ್ಟು ನಿಂತಿದ್ದಆಟೋ ಇಟ್ಟು ಪರಾರಿಯಾಗಿದ್ದರು.
ಹಂತಕರು ಸಿಕ್ಕಿಬಿದ್ದಿದ್ಹೇಗೆ?
ಇನ್ನು ಸಲ್ಮಾಳನ್ನ ಕೊಲೆ ಮಾಡಿ ಆರೋಪಿಗಳು ಪಾಂಡಿಚೇರಿಗೆ ಎಸ್ಕೇಪ್ ಆಗುವ ಪ್ಲಾನ್ ಅಲ್ಲಿದ್ದರು. ಹೀಗಾಗಿ ಮಧ್ಯರಾತ್ರಿಯೇ ಮೆಜೆಸ್ಟಿಕ್ ವರೆಗೆ ನಡೆದುಕೊಂಡೇ ಹೋಗಿದ್ದ ಆರೋಪಿಗಳು ಬಳಿಕ ತುಮಕೂರಿಗೆ ಬಸ್ ನಲ್ಲಿ ಎಸ್ಕೇಪ್ ಆಗಿದ್ದರು. ಇತ್ತ ಕೊಲೆಯಾದ ಒಂದು ದಿನಕ್ಕೆ ಮಹಿಳೆಯ ಶವ ಇದ್ದಿತ್ತು. ತಿಲಕನಗರ ಪೊಲೀಸರಿಗೆ ಈ ಇಬ್ಬರ ಮೇಲೆಯೇ ಅನುಮಾನ ಬಂದ ಕಾರಣ ಇಬ್ಬರ ಬೆನ್ನುಬಿದ್ದರು. ಬಳಿಕ ಸುಬ್ರಮಣಿ ಮತ್ತು ಸೆಂಥಿಲ್ ಇಬ್ಬರು ತುಮಕೂರಿನಲ್ಲಿ ಇರುವುದನ್ನು ಪತ್ತೆ ಮಾಡಿ ತುಮಕೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತುಮಕೂರು ಈ ಪಡೆದ ಆರೋಪಿಗಳ ಪತ್ತೆ ಮಾಡಿ ಆರೋಪಿಗಳ ಬಟ್ಟೆ ಉಗುರಿನಲ್ಲಿ ರಕ್ತದ ಕಲೆ ಹಾಕಿತ್ತು. ಇದ್ರಿಂದ ಕೊಲೆಗಡುಕರು ಅವರೇ ಕನ್ಫರ್ಮ್ ಆಗಿದ್ದು, ನಂತರ ತಿಲಕ ನಗರ ಪೊಲೀಸರು ತುಮಕೂರಿಗೆ ಬಂದು ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ಒಟ್ನಲ್ಲಿ ಶವ ಸಿಕ್ಕ 24 ಗಂಟೆಯೊಳಗೆ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದು, ಇಬ್ಬರನ್ನ ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಆದರೆ ಅನೈತಿಕ ಸಂಬಂಧ ಇದ್ದ ವ್ಯಕ್ತಿಯ ಗೆಳೆಯನ ಜೊತೆ ಸಲುಗೆಯಿಂದ ಇದ್ದ ಸಲ್ಮಾಳ ಕೊಲೆ ನಿಜಕ್ಕೂ ವಿಚಿತ್ರ ಕಹಾನಿ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು.
ರಂದು ಪ್ರಕಟಿಸಲಾಗಿದೆ – 10:43 pm, ಸೋಮ, 27 ಅಕ್ಟೋಬರ್ 25