Food Sanctity: ಊಟ ಮಾಡುವಾಗ ಈ ತಪ್ಪು ಮಾಡಲೇಬೇಡಿ; ರೋಗರುಜಿನೆಗಳ ಕಾಟ ತಪ್ಪಿದ್ದಲ್ಲ!

Food Sanctity: ಊಟ ಮಾಡುವಾಗ ಈ ತಪ್ಪು ಮಾಡಲೇಬೇಡಿ; ರೋಗರುಜಿನೆಗಳ ಕಾಟ ತಪ್ಪಿದ್ದಲ್ಲ!


ಆಹಾರದ ಪಾವಿತ್ರ್ಯತೇಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿರ್ಮಿಸಿದ ಡಾ. ಬಸವರಾಜ್ ಗುರೂಜಿಅವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ “ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದ್ ಅನ್ನ-ಸಂಭವಃ ಯಜ್ಞಾದ್, ಭವತಿ ಪರ್ಜನ್ಯೋ ಯಜ್ಞಃ ಕರ್ಮ-ಸಮುದ್ಭವಃ”. ಇದರ ಅರ್ಥ ಎಲ್ಲಾ ಜೀವಿಗಳು ಆಹಾರದಿಂದ ಬದುಕುತ್ತವೆ ಮತ್ತು ಆಹಾರವು ಮಳೆಯಿಂದ ಉತ್ಪತ್ತಿಯಾಗುತ್ತದೆ. ಮಳೆಯು ಯಜ್ಞಗಳನ್ನು ಮಾಡುವುದರಿಂದ ಬರುತ್ತದೆ ಮತ್ತು ಯಜ್ಞವು ನಿಗದಿತ ಕರ್ತವ್ಯ ಮಾಡುವುದರಿಂದ ಉತ್ಪತ್ತಿಯಾಗುತ್ತದೆ.

ಅಂತಹ ಪವಿತ್ರವಾದ ಅನ್ನವನ್ನು ಸೇವಿಸುವಾಗ ನಾವು ಅತ್ಯಂತ ಶ್ರದ್ಧೆ ಮತ್ತು ಗೌರವದಿಂದ ವರ್ತಿಸಬೇಕು. ಅದು ಶುಭ ಸಮಾರಂಭಗಳಿರಬಹುದು, ಮದುವೆ, ಮಹೋತ್ಸವಗಳು, ದೇವತಾ ಪ್ರತಿಷ್ಠಾಪನೆಗಳು, ಉಪನಯನಗಳು ಅಥವಾ ಗೃಹಪ್ರವೇಶಗಳಂತಹ ಕಾರ್ಯಕ್ರಮಗಳು, ಅಥವಾ ಮನೆಯಲ್ಲಿ ಊಟದ ಸಮಯದಲ್ಲಿ ದುರಾಸೆಯಿಂದ ಅಥವಾ ಕಣ್ಣಿನ ಆಸೆಯಿಂದ ಹೆಚ್ಚಿನ ಆಹಾರವನ್ನು ಸೇವಿಸಿದರೆ, ಅರ್ಧದಲ್ಲಿಯೇ ಎದ್ದು ಹೋಗುವುದು ತಪ್ಪುತ್ತದೆ. ಇದು ಕೇವಲ ಪ್ರಸ್ತುತ ಜನ್ಮಕ್ಕೆ ಕಾರಣವಾಗಿದೆ, ಮುಂದಿನ ಜನ್ಮಕ್ಕೂ ಕಂಟಕಪ್ರಾಯವಾಗುತ್ತದೆ ಎಂದು ಡಾ. ಬಸವರಾಜ್ ಗುರೂಜಿ.

ವಿಡಿಯೋ ಇಲ್ಲಿದೆ ನೋಡಿ:

ಊಟ ಮಾಡುವ ಸಂದರ್ಭದಲ್ಲಿ ಫೋನ್ ಕರೆಗಳು, ಮನೆಯ ಗಂಡ-ಹೆಂಡತಿಯರ ನಡುವಿನ ಕೋಪ, ಅಥವಾ ಇತರ ವಿಷಯಗಳಿಂದ ಅಡ್ಡಿಯುಂಟುಮಾಡುವ ಊಟವನ್ನು ಅರ್ಧಕ್ಕೆ ಬಿಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಆಹಾರವನ್ನು ಪರಿಗಣಿಸಬೇಕು. ಯಜ್ಞ ಮಾಡುವಾಗ ನಾವು ಎಷ್ಟು ಭಕ್ತಿ ಮತ್ತು ಏಕಾಗ್ರತೆಯಿಂದ ಇರುತ್ತೇವೆಯೋ, ಅದೇ ರೀತಿ ಅನ್ನ ಸೇವಿಸುವಾಗಲೂ ಇರಬೇಕು. ಕೆಲವೊಮ್ಮೆ ರಾಜಕೀಯ ವ್ಯಕ್ತಿಗಳು ಅಥವಾ ಸ್ಥಾನಮಾನ ಇರುವವರು ಒಂದು ಕಾರ್ಯಕ್ರಮಕ್ಕೆ ಬಂದು ನಿಂತರು ಅನ್ನ ತಿಂದು ಅರ್ಧಕ್ಕೆ ಬಿಟ್ಟು ಹೊರಟು ಹೋಗುತ್ತಾರೆ. ಈ ರೀತಿ ಆಹಾರವನ್ನು ತ್ಯಜಿಸುವುದರಿಂದ ಕರ್ಮ, ಪಾಪ ಹೆಚ್ಚುತ್ತದೆ ಮತ್ತು ನಮಗೆ ಬರಬೇಕಾದ ಅದೃಷ್ಟವು ದೂರವಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯದಿರಿ

ಇದರಿಂದ ಅನ್ನಪೂರ್ಣೇಶ್ವರಿಯ ಕೃಪೆ ದೊರೆಯುವುದಿಲ್ಲ ಮತ್ತು ದೇಹದಲ್ಲಿ ರೋಗರುಜಿನಗಳ ಕಾಟ. ಇಲ್ಲಿ “ಅನ್ನ” ಎಂದರೆ ಕೇವಲ ಬೇಯಿಸಿದ ಅಕ್ಕಿಯಲ್ಲ, ತಿನ್ನಲು ಯೋಗ್ಯವಾದ ಎಲ್ಲಾ ಆಹಾರವೂ ಅನ್ನವೇ. ಹಣ್ಣುಗಳೂ ಸಹ ಆಹಾರದ ಭಾಗವೇ. ಆದ್ದರಿಂದ, ಅರ್ಧದಲ್ಲಿಯೇ ಬಿಟ್ಟು ಹೋಗಬಾರದು. ನಮಗೆ ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಳ್ಳಬೇಕು ಮತ್ತು ಅದನ್ನು ಪೂರ್ಣಗೊಳಿಸಬೇಕು. ಇಂದಿನ ದಿನಗಳಲ್ಲಿ ಎಷ್ಟೋ ಆಹಾರ ವ್ಯರ್ಥವಾಗುತ್ತಿದೆ. ಅದಕ್ಕೆ ನಾವೇ ಕಾರಣರಾಗುತ್ತೇವೆ. ನಮ್ಮ ಲೆಕ್ಕ ತಪ್ಪಿದರೂ ಭಗವಂತನ ಲೆಕ್ಕ ತಪ್ಪುವುದಿಲ್ಲ ಎಂಬ ಮಾತಿದೆ.

ಯಾರಿಗಾದರೂ ಹೋಗಬೇಕಾದ ಅನಿವಾರ್ಯತೆ ಇದ್ದರೆ, ಮೊದಲೇ ತಿಳಿಸಿ, ಅಷ್ಟಕ್ಕೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ ಹೊರಡುವುದು ಸೂಕ್ತ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:34 am, ಮಂಗಳವಾರ, 28 ಅಕ್ಟೋಬರ್ 25



Source link

Leave a Reply

Your email address will not be published. Required fields are marked *