ಸಿನಿಮಾದ ಹೆಸರು ‘ಪಡೆಯಪ್ಪ’ ರಜನೀಕಾಂತ್ (ರಜಿನಿಕಾಂತ್) ನಾಯಕ, ಆ ಸಿನಿಮಾದಲ್ಲಿ ಸೌಂದರ್ಯ ನಾಯಕಿ. ಅದೇ ಸಿನಿಮಾದಲ್ಲಿ ನಟಿ ರಮ್ಯಾಕೃಷ್ಣ ವಿಲನ್ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್ ಅಂಥಾ ಮಾಸ್ ಹೀರೋ ಎದುರು ಮಹಿಳಾ ವಿಲನ್. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ರಮ್ಯಾಕೃಷ್ಣ ನಟನೆಗೆ ಭಾರಿ ಮೆಚ್ಚುಗೆ ಸೂಚಿಸಿತ್ತು. ಇತ್ತೀಚೆಗಷ್ಟೇ ಅದೇ ಸಿನಿಮಾದ ದೃಶ್ಯ ನೋಡುತ್ತಾ ಕಣ್ಣೀರು ಹಾಕಿದರು ನಟಿ ರಮ್ಯಾ ಕೃಷ್ಣ. ಕಾರಣವೇನು?
‘ಪಡೆಯಪ್ಪ’ ಸಿನಿಮಾದಲ್ಲಿ ರಜನೀಕಾಂತ್ ಗೆ ಸೌಂದರ್ಯದ ಮೇಲೆ ಪ್ರೀತಿ, ಆದರೆ ರಮ್ಯಾಕೃಷ್ಣಗೆ ರಜನೀಕಾಂತ್ ಗೆ ಪ್ರೀತಿ. ಇದೇ ಕಾರಣಕ್ಕೆ ರಮ್ಯಾಕೃಷ್ಣ ಪಾತ್ರ, ಸೌಂದರ್ಯ ಪಾತ್ರವನ್ನು ತುಚ್ಛವಾಗಿ ಕಾಣುತ್ತಿರುತ್ತದೆ. ಒಂದು ದೃಶ್ಯದಲ್ಲಿ ರಮ್ಯಾಕೃಷ್ಣ, ತಮ್ಮ ಕಾಲಿನಿಂದ ಸೌಂದರ್ಯ ಕೆನ್ನೆ ಸವರುತ್ತಾರೆ. ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ, ಸಿನಿಮಾದ ಇದೇ ದೃಶ್ಯವನ್ನು ನೋಡುತ್ತಾ ತಡೆಯಲಾರದೆ ಕಣ್ಣೀರು ಹಾಕಿದರು.
ತೆಲುಗಿನ ನಟ ಜಗಪತಿ ಬಾಬು ಹೊಸದೊಂದು ಟಾಕ್ ಶೋ ನಡೆಸುತ್ತಿದ್ದಾರೆ. ಶೋಗೆ ಅತಿಥಿಯಾಗಿ ರಮ್ಯಾಕೃಷ್ಣ ಬಂದಿದ್ದರು. ಆಗ ‘ಪಡೆಯಪ್ಪ’ ಸಿನಿಮಾದ ಈ ಫೇಮಸ್ ದೃಶ್ಯವನ್ನು ಪ್ರಸಾರ ಮಾಡಲಾಯ್ತು. ದೃಶ್ಯ ನೋಡುತ್ತಿದ್ದಂತೆ ರಮ್ಯಾಕೃಷ್ಣಗೆ ಅಳು ತಡೆಯಲಾಗಲಿಲ್ಲ. ಸೌಂದರ್ಯದ ಬಗ್ಗೆ ಮಾತನಾಡುತ್ತಾ, ‘ಒಬ್ಬ ಮುಗ್ಧ ಹೆಣ್ಣು ಮಗು ಪ್ರಬುದ್ಧ ನಟಿಯಾಗಿದ್ದನ್ನು ನಾನು ಸೌಂದರ್ಯದಲ್ಲಿ ನೋಡಿದೆ. ಜನಪ್ರಿಯತೆ, ಆಕೆಯ ಮುಗ್ಧತೆಯನ್ನು ಹಾಳು ಮಾಡಲಿಲ್ಲ. ಅದರಂತೆಯೇ ಆಕೆಯ ಮನಸ್ಸು ಸೌಂದರ್ಯದಿಂದ ಕೂಡಿತ್ತು. ಆಕೆಯೊಂದಿಗೆ ಹಲವು ಒಳ್ಳೆಯ ನೆನಪುಗಳು ನನಗೆ ಇವೆ, ನನಗೆ ಬಹಳ ಆಪ್ತ ಗೆಳತಿ ಆಗಿದ್ದರು’ ಎಂದರು ರಮ್ಯಾಕೃಷ್ಣ.
ಇದನ್ನೂ ಓದಿ:ಗ್ಲಾಮರ್ ಅವತಾರದಲ್ಲಿ ಬಾಹುಬಲಿ ರಾಜಮಾತೆ ರಮ್ಯಾ ಕೃಷ್ಣನ್
ಅಂದಹಾಗೆ ಜಗಪತಿ ಬಾಬುಗೆ ಸಹ ಸೌಂದರ್ಯ ಬಲು ಆಪ್ತವಾಗಿತ್ತು. ಹಲವು ಸಿನಿಮಾಗಳಲ್ಲಿ ಸೌಂದರ್ಯ ಮತ್ತು ಜಗಪತಿ ಬಾಬು ಒಟ್ಟಿಗೆ ನಟಿಸಿದ್ದರು. ಸೌಂದರ್ಯ ಹಾಗೂ ಜಗಪತಿ ಬಾಬು ವಿವಾಹ ಆಗಲಿದ್ದಾರೆ ಎಂಬ ಸುದ್ದಿಗಳು ಸಹ ಆಗ ಹರಿದಾಡಿದ್ದವು. ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ಇಬ್ಬರಿಗೂ ಮದುವೆ ಆಗಲಿಲ್ಲ. 2004 ರ ಏಪ್ರಿಲ್ ತಿಂಗಳಿನಲ್ಲಿ ಸೌಂದರ್ಯ ಖಾಸಗಿ ವಿಮಾನದಲ್ಲಿ ಹೊರಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ