ಸ್ಲೌಚ್ ಹ್ಯಾಟ್‌ಗೆ ಗುಡ್ ಬೈ, ಕಾನ್‌ಟೇಬಲ್‌ಗಳಿಗಿನ್ನು ನೇವಿ ಬ್ಲೂ ಪೀಕ್ ಕ್ಯಾಪ್
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ಪೊಲೀಸ್ ಕಾನ್‌ಟೇಬಲ್‌ಗಳು ಹಾಲಿ ಧರಿಸುತ್ತಿದ್ದ ಸ್ಲಾಚ್ ಹ್ಯಾಟ್‌ಗೆ (ಸ್ಲೋಚ್ ಹ್ಯಾಟ್ಸ್) ರಾಜ್ಯ ಸರ್ಕಾರ ಗುಡ್ ಬೈ ಹೇಳಿದ್ದು, ಇಂದಿನ ನೇವಿ ಬ್ಲೂ ಪೀಕ್ ಕ್ಯಾಪ್‌ಗಲ್ಲಿ ಪೇದೆಗಳು ಕಾಣಿಸಿಕೊಳ್ಳಲಿವೆ. ಹೊಸ ಮಾದರಿಯ ಕ್ಯಾಪ್ಗಳು ತೆಲಂಗಾಣ ಪೊಲೀಸ್ ಯೂನಿಫಾರಂನಿಂದ ಪ್ರೇರಿತವಾಗಿದ್ದು, ನಾಲ್ಕು ಧರಿಸಿ ಈ ಕರ್ನಾಟಕದಲ್ಲಿ ಪೊಲೀಸ್ ಕಾನ್ಫರೆನ್ಸ್ ಸ್ಲಾಚ್ ಹ್ಯಾಟ್ ಇತಿಹಾಸದ ಪುಟ ಸೇರಿದೆ.
ಬದಲವಾಣೆ ಯಾಕೆ?
ದೀರ್ಘಾವಧಿಯಲ್ಲಿ ಸ್ಲಾಚ್ ಹ್ಯಾಟ್‌ಗಳ ಬಳಕೆಯಿಂದಾಗಿ ತೊಂದರೆ ಉಂಟಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿಗಳು ಹೇಳಿವೆ. ಜೊತೆಗೆ ಇವುಗಳನ್ನು ಧರಿಸುವುದರಿಂದ ತಲೆ ಭಾಗದಲ್ಲಿ ಗಾಳಿಯ ಸಂಚಾರದ ಕೊರತೆ ಉಂಟಾಗಿ ಕಾನ್ಸ್‌ಟೇಬಲ್‌ಗಳ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಪ್ರತಿಭಟನೆಗಳು, ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್‌ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಈ ಮಾದರಿಯ ಹ್ಯಾಟ್‌ಗಳು ಅನುಕೂಲಕರವಾಗಿಲ್ಲ. ಅದರ ಗಾತ್ರ ಮತ್ತು ಆಕಾರದಿಂದ ಅದು ಬಿದ್ದುಹೋಗುವ ಅಥವಾ ಜಾರುವ ಸಾಧ್ಯತೆ ಹೆಚ್ಚಿದೆ ಎಂದು ಬಹಳ ಸಮಯದಿಂದ ಕಾನ್‌ಟೇಬಲ್‌ಗಳು ದೂರವಿರುತ್ತವೆ. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್‌ಗಳನ್ನು ರಾಜ್ಯ ಸರ್ಕಾರ ಬದಲಾಯಿಸಿದೆ.
ಇದನ್ನೂ ಓದಿ: ಸ್ಲೋಚ್ ಹ್ಯಾಟ್ಗೆ ಕೊಕ್: ಎ 28ರಿಂದ ಕರ್ನಾಟಕ ಪೊಲೀಸರು ಕೈಸೇರಲಿವೆ ಹೊಸ ಟೋಪಿ
ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳು ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್ ಮಾದರಿಗಳನ್ನು ಪರಿಶೀಲಿಸಿದ್ದಾರೆ, ಅಂತಿಮವಾಗಿ ತೆಲಂಗಾಣ ಮಾದರಿ ಕ್ಯಾಪ್‌ಗಳನ್ನು ಕರ್ನಾಟಕದ ಕಾನ್‌ಟೇಬಲ್‌ಗಳಿಗೆ ಒದಗಿಸಲು ತೀರ್ಮಾನಿಸಿದ್ದಾರೆ. ತೆಲಂಗಾಣ ಮಾದರಿಯ ನೇವಿ ಬ್ಲೂ ಕ್ಯಾಪ್‌ಗಳು ಸೂಕ್ತವಾದ ವಿನ್ಯಾಸ, ಉತ್ತಮ ಫಿಟ್ ಮತ್ತು ವೃತ್ತಿಪರ ಆಕರ್ಷಣೆ ಹೊಂದಿರುವ ಕಾರಣ ಈ ಮಾದರಿಯ ಬಗ್ಗೆ ಕರ್ನಾಟಕ ಸರ್ಕಾರ ಒಲವು ತೋರಿತ್ತು.
ಸ್ಲಾಚ್ ಕ್ಯಾಪ್ ಇತಿಹಾಸ
ಕರ್ನಾಟಕದ ಕಾನ್‌ಟೇಬಲ್‌ಗಳು ಹಾಲಿ ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಸುಮಾರು ನಾಲ್ಕು ಪ್ರದರ್ಶನ ಇತಿಹಾಸವಿದ್ದು, 1980–83ರ ಅವಧಿಯಲ್ಲಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಕಾಲದಲ್ಲಿ ಇವುಗಳನ್ನು ಪರಿಚಯಿಸಲಾಯಿತು. ಅಂದಿನ ನೀಲಿ ಮತ್ತು ಕೆಂಪು ಪಟ್ಟಿಯ ಪೇಟದ ಬದಲಿಗೆ ಈ ಕ್ಯಾಪ್‌ಗಳು ದಿನನಿತ್ಯದ ಕರ್ತವ್ಯಕ್ಕಾಗಿ ಅಳವಡಿಸಲ್ಪಟ್ಟಿವೆ. ಸ್ವಾತಂತ್ರ್ಯಾನಂತರವೂ ಕೆಂಪು-ನೀಲಿ ಪಾಗಡಿಗಳು ಸಮಾರಂಭ ಮತ್ತು ಮೆರವಣಿಗೆಗಳ ವೇಳೆ ಉಳಿದ 1980 ರ ದಶಕದಿಂದ ಸ್ಲಾಚ್ ಕ್ಯಾಪ್‌ಗಳು ದಿನನಿತ್ಯದ ಉಡುಪುಗಳಾಗಿ ಪ್ರಚಲಿತಕ್ಕೆ ಬಂದವು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:49 pm, ಮಂಗಳವಾರ, 28 ಅಕ್ಟೋಬರ್ 25