ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿತ ಕಂಡಿದೆ: ಸುಧಾಮೂರ್ತಿ ವಿಷಾದ

ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿತ ಕಂಡಿದೆ:  ಸುಧಾಮೂರ್ತಿ ವಿಷಾದ


ಹುಬ್ಬಳ್ಳಿ, ಅಕ್ಟೋಬರ್ 28: ಹುಬ್ಬಳ್ಳಿಯಲ್ಲಿ ಶತಮಾನದ ಶಾಲೆಯಾಗಿರೋ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆಯ ಬಗ್ಗೆ ಮಾಹಿತಿ ಹಂಚಿಕೊಂಡರು ಸುದ್ದಿಗೋಷ್ಠಿಯಲ್ಲಿ ಕರೆದಿದ್ದ ಸುಧಾ ಮೂರ್ತಿಯವರು, ನಾನು ಇದೇ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 6 ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ಕಲಿತ ಶಾಲೆಯ ಶಿಥಿಲಾವಸ್ಥೆಯನ್ನು ನೋಡಲು ಸಾಧ್ಯವಾಗದೆ ಇದರ ಅಭಿವೃದ್ಧಿ ಮಾಡಿದ್ದೇನೆ. ನಮ್ಮ ತಾಯಿ, ಅವರ ತಂದೆ ಇಬ್ಬರೂ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಈ ಶಾಲೆಗೆ ನನಗೂ ತಲತಲಾಂತರಗಳ ಸಂಬಂಧವಿದೆ ಎಂದು ಹೇಳಿದರು.

ನಾನು ಈ ಶಾಲೆಯಲ್ಲಿ ಓದುವಾಗ ಕನ್ನಡ ಮಾಧ್ಯಮದಲ್ಲಿ 1400 ರಷ್ಟು ವಿದ್ಯಾರ್ಥಿಗಳು ಇದ್ದರು. ಆದರೀಗ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಭಾರೀ ಇಳಿತ ಕಂಡಿದೆ. ಹೀಗಾಗಿ ಈ ಶಾಲೆಯನ್ನು ಆಂಗ್ಲವಾಗಿಸಲು ಸಾಧ್ಯವಾಗುತ್ತಿದೆ. ಜಾತಿ ಗಣತಿ ಸಮಯದಲ್ಲಿ ತಮ್ಮ ಜಾತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳದೆ ಇರುವ ವಿಚಾರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಸುದ್ದಿಗೋಷ್ಠಿಯಲ್ಲಿ ತಾನು ಈ ಶಾಲೆಯ ವಿಷಯ ಬಿಟ್ಟರೆ ಬೇರೆ ಏನನ್ನೂ ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *