ಜುಲೈ, ಅಕ್ಟೋಬರ್ 28: ಕೇಂದ್ರ ಸರ್ಕಾರದ ಕೋಟಿಗೂ ಅಧಿಕ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಸಮಾಧಾನ ತರುವ ಸುದ್ದಿ ಇದು. ನರೇಂದ್ರ ಮೋದಿ (ನರೇಂದ್ರ ಮೋದಿ) ನೇತೃತ್ವದ ಕೇಂದ್ರ ಸಂಪುಟವು ಇಂದು ಮಂಗಳವಾರ 8ನೇ ವೇತನ ಆಯೋಗಕ್ಕಾಗಿ ರಚಿಸಲಾದ ಟರ್ಮ್ಸ್ ಆಫ್ ರೆಫರೆನ್ಸ್ಗೆ (ToR- ಉಲ್ಲೇಖದ ನಿಯಮಗಳು) ಅನುಮೋದಿಸಿದೆ. ಎಂಟನೇ ವೇತನ ಆಯೋಗವು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಈ ಟಿಒಆರ್ ಅಗತ್ಯವಿದೆ. ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಜೈಂಟ್ ಕನ್ಸಲ್ಟೇಶನ್ ಮೆಷಿನರಿಯ ಸಿಬ್ಬಂದಿಗಳೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಿ ಟರ್ಮ್ಸ್ ಆಫ್ ರೆಫರೆನ್ಸ್ ಅನ್ನು ರಚಿಸಲಾಗಿದೆ.
ವೇತನ ಆಯೋಗಕ್ಕೆ ಟರ್ಮ್ಸ್ ಆಫ್ ರೆಫರೆನ್ಸ್ ಯಾಕೆ ಮಹತ್ವದ್ದು?
ಟರ್ಮ್ಸ್ ಆಫ್ ರೆಫರೆನ್ಸ್ ಎಂಬುದು ಮಾರ್ಗಸೂಚಿ ಇದ್ದಂತೆ. ವೇತನ ಆಯೋಗವು ಹೇಗೆ ಕಾರ್ಯನಿರ್ವಹಿಸಬೇಕು, ಯಾವ ಅಂಶಗಳನ್ನು ಗಮನಿಸಬೇಕು, ಶಿಫಾರಸು ಮಾಡಬೇಕು, ವೇತನ ಶ್ರೇಣಿ, ಭಟ್ಯೆ, ಪಿಂಚಣಿ ಪರಿಷ್ಕರಣೆ, ನಿವೃತ್ತಿ ಸೌಲಭ್ಯ ಇತ್ಯಾದಿ ಹಲವು ಸಂಗತಿಗಳ ಬಗ್ಗೆ ಎಷ್ಟು ಅವಲೋಕನ ನಡೆಸಬೇಕು ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ತಿಳಿಸಬೇಕು.
ಇದನ್ನೂ ಓದಿ: ಎಸ್‌ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯಾದ ಕಂಪನಿಯೊಂದಿಗೆ ಎಚ್‌ಎಲ್‌ನಿಂದ ಒಪ್ಪಂದ
ಟರ್ಮ್ಸ್ ಆಫ್ ರೆಫರೆನ್ಸ್ ಒಂದು ರೀತಿಯಲ್ಲಿ ಮಾರ್ಗಸೂಚಿಯಂತಿರುತ್ತದೆ. ವೇತನ ಆಯೋಗಕ್ಕೆ ಇದು ಮೂಲ ದಾಖಲೆಯಾಗಿದೆ. ಸರ್ಕಾರದ ನಿರೀಕ್ಷೆಗಳು ಮತ್ತು ಗುರಿಯನ್ನು ಇದು ಆಯೋಗಕ್ಕೆ ತಿಳಿಸುತ್ತದೆ. ಅದರ ಪ್ರಕಾರ ವೇತನ ಆಯೋಗವು ಕಾರ್ಯನಿರ್ವಹಿಸುತ್ತದೆ. ಟರ್ಮ್ಸ್ ಆಫ್ ರೆಫರೆನ್ಸ್ ಇಲ್ಲದಿದ್ದರೆ ವೇತನ ಆಯೋಗ ಒಂದು ಸ್ಪಷ್ಟ ಉದ್ದೇಶವಿಲ್ಲದೆ ಡಮ್ಮಿಯಾಗುತ್ತದೆ.
18 ತಿಂಗಳ ಶಿಫಾರಸುಗಳ ವರದಿ ವೇತನ ಆಯೋಗ…
ಟರ್ಮ್ಸ್ ಆಫ್ ರೆಫರೆನ್ಸ್ ನಿಗದಿಯಾಗಲು ಈಗ 8ನೇ ವೇತನ ಆಯೋಗವು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇವತ್ತು ಟಿಒಆರ್ ನೋಟಿಫೈ ಮಾಡಿಸಿದ್ದಾರೆ ಮುಂದಿನ 18 ತಿಂಗಳೊಳಗೆ ವೇತನ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. 2027ರ ಏಪ್ರಿಲ್ ನೊಳಗೆ ಇದು ಆಗಬೇಕು.
ವರದಿ ಸಲ್ಲಿಸಿದ ಬಳಿಕ ಸರ್ಕಾರ ಅದನ್ನು ಪರಿಶೀಲಿಸಿದೆ, ಶಿಫಾರಸುಗಳನ್ನು ಜಾರಿಗೆ ತರಲು 6 ತಿಂಗಳು ಬೇಕು. ಅಂದರೆ, 2027ರ ಅಂತ್ಯದಲ್ಲಿ ಅಥವಾ 2028ರ ಆರಂಭದಲ್ಲಿ 8ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬಹುದು. ತಡವಾಗಿ ಅದು ಜಾರಿಯಲ್ಲಿದ್ದರೆ 2026ರ ಜನವರಿಯಿಂದಲೇ ಅದು ಅನ್ವಯವಾಗುತ್ತದೆ.
ಇದನ್ನೂ ಓದಿ: ಪ್ರಚಂಡ ವೇಗದಲ್ಲಿ ಹೆಚ್ಚುತ್ತಿರುವ ಭಾರತದ ಉತ್ಪಾದನೆಸ್ ರಫ್ತು; ಪೆಟ್ರೋಲಿಯಂ ಉತ್ಪನ್ನಗಳನ್ನೂ ಹಿಂದಿಕ್ಕುತ್ತಿದೆ
ಗ್ರಾಚುಟಿ 25 ಲಕ್ಷ ರೂಗೆ ಮಿತಿ ಏರಿಕೆ
ಇತ್ತೀಚೆಗೆ ಸರ್ಕಾರವು ಗ್ರಾಚುಟಿ ಮಿತಿಯನ್ನು 20 ಲಕ್ಷ ರೂನಿಂದ 25 ಲಕ್ಷ ರೂಗೆ ಏರಿಸಿತ್ತು. ಇದರಿಂದ ನಿವೃತ್ತಿಯಾಗುವ ಉದ್ಯೋಗಿಗಳಿಗೆ ಕೊನೆಯಲ್ಲಿ ಉತ್ತಮ ಮೊತ್ತ ಸಿಗಲು ಸಾಧ್ಯ. ಸೆಂಟ್ರಲ್ ಸಿವಿಲ್ ಸರ್ವೀಸ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಗ್ರಾಚುಟಿ ಮಿತಿ ಏರಿಕೆಯ ಲಾಭ ಸಿಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ