ಅಂಗಾಂಗ ದಾನ ಒಪ್ಪಂದದ ಬಳಿಕ ಮದ್ವೆ: ಈ ಜೋಡಿಯ ಪ್ರೀತಿಯಲ್ಲಿ ಕರಗಿ ಹೋಯ್ತು ಕ್ಯಾನ್ಸರ್​

ಅಂಗಾಂಗ ದಾನ ಒಪ್ಪಂದದ ಬಳಿಕ ಮದ್ವೆ: ಈ ಜೋಡಿಯ ಪ್ರೀತಿಯಲ್ಲಿ ಕರಗಿ ಹೋಯ್ತು ಕ್ಯಾನ್ಸರ್​


ಚೀನಾದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೊಸ ಹೊಸ ವಿಚಾರಗಳು ಹಾಗೂ ವಿಚಿತ್ರ ಸಂಗತಿಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚೀನಾದಲ್ಲಿ ನಡೆದ ವಿಚಿತ್ರ ಮದುವೆಯ ಬಗ್ಗೆ ವೈರಲ್ ಆಗಿದೆ. ಒಂದು ಒಪ್ಪಂದಕ್ಕಾಗಿ (ಚೀನಾ ಒಪ್ಪಂದದ ಮದುವೆ) ಈ ಮದುವೆ ಮಾಡಿಕೊಂಡು ಕೊನೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣ. ಅಷ್ಟಕ್ಕೂ ಆ ಏನು ಒಪ್ಪಂದ? ಇಲ್ಲಿದೆ ನೋಡಿ. ಚೀನಾದ ಯುವತಿಯೊಬ್ಬರು ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದಾರೆ. ಈ ವಿವಾಹ ಮಾಡಿಕೊಳ್ಳುವುದಕ್ಕೂ ಒಂದು ಒಪ್ಪಂದ ಮಾಡಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಈ ವ್ಯಕ್ತಿ ಮರಣ ಹೊಂದಿದ ನಂತರ ಅವರ ಮೂತ್ರಪಿಂಡವನ್ನು ಈ ಯುವತಿಗೆ ಸೇರಿಸಲಾಗಿದೆ. ಏಕೆಂದರೆ ಈ ಯುವತಿ ಯುರೇಮಿಯಾದಿಂದ ಬಳಲುತ್ತಿದ್ದಾರೆ. ಆದರೆ ಈಗ ಈ ಒಪ್ಪಂದದ ಮದುವೆ ನಿಜವಾದ ಪ್ರೀತಿಗೆ ತಿರುಗಿದೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮ್ಯಾರೇಜ್ ಅಂಡ್ ಫ್ಯಾಮಿಲಿ ಎಂಬ ನಿಯತಕಾಲಿಕೆ ಪ್ರಕಾರ, ಶಾಂಕ್ಸಿ ಪ್ರಾಂತ್ಯದ 24 ವರ್ಷದ ವಾಂಗ್ ಕ್ಸಿಯಾವೊ ಎಂಬ ಯುವತಿಗೆ ಯುರೇಮಿಯಾ ಇರುವುದು ಪತ್ತೆಯಾಯಿತು. ಇದನ್ನು ಸರಿಯಾಗಬೇಕಾದರೆ ಮೂತ್ರಪಿಂಡವನ್ನು ಕಸಿ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ಅವರು ಒಂದು ವರ್ಷದೊಳಗೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ಯುವತಿಯ ಕುಟುಂಬದಲ್ಲಿ ಇವರಿಗೆ ಹೊಂದಾಣಿಕೆ ಆಗುವ ಮೂತ್ರಪಿಂಡ ಸಿಗಲಿಲ್ಲ, ಇದೇ ವೇಳೆ ಪೇಪರ್‌ನಲ್ಲಿ ಒಂದು ಜಾಹಿರಾತು ಬಂದಿತ್ತು, ನಾನು ಕ್ಯಾನ್ಸರ್ ವ್ಯಕ್ತಿ ನನ್ನನ್ನು ಮದುವೆಯಾದರೆ ಹಣ ಹಾಗೂ ನನ್ನ ಆಸ್ತಿಯನ್ನು ನೀಡುತ್ತೇನೆ ಎಂದು ಜಾಹೀರಾತು ನೀಡಿದ್ದರು. ಇದನ್ನು ನೋಡಿ ವಾಂಗ್ ಕ್ಸಿಯಾವೊ ಅವರು ಆ ವ್ಯಕ್ತಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ನಿಮ್ಮ ಸಾವಿನ ನಂತರ ನನಗೆ ಮೂತ್ರಪಿಂಡವನ್ನು ದಾನ ಮಾಡಬೇಕು ಎಂದು. ಇದಕ್ಕೆ ಒಪ್ಪಿ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೆ ಕೆಲಸದ ಅವಧಿಯ ಬಗ್ಗೆ ಶುರುವಾಯ್ತು ಚರ್ಚೆ: ವಾರಕ್ಕೆ 80 ಗಂಟೆ ಕೆಲಸ ಮಾಡುವವರು ಬೇಕಾಗಿದ್ದಾರೆ ಬೆಂಗಳೂರು ಉದ್ಯಮಿ!

ಜುಲೈ 2013ರಲ್ಲಿ ಇಬ್ಬರು ಕೂಡ ಯಾರಿಗೂ ತಿಳಿಯದಂತೆ ಮಾಡುವೆ. ಈ ಒಪ್ಪಂದದ ಪ್ರಕಾರ ಯಾರಿಗೂ ಹೇಳಬಾರದು, ಮತ್ತು ಹಣಕಾಸಿನ ವಿಚಾರಗಳ ಬಗ್ಗೆಯೂ ಗುಟ್ಟಾಗಿರಬಹುದು ಎಂದು ಹೇಳಲಾಗಿದೆ. ಇದರೊಂದಿಗೆ ಈ ವ್ಯಕ್ತಿಯ ಮರಣದ ನಂತರ ಅವರ ಮೂತ್ರಪಿಂಡವನ್ನು ವಾಂಗ್ ಕ್ಸಿಯಾವೊಗೆ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಮನುಷ್ಯ ನಿರ್ಧಾರವೇ ಒಂದು ದೈವದ ಇಚ್ಛೆಯೇ ಬೇರೆ ಆಗುತ್ತಿದೆ. ಈ ಒಪ್ಪಂದದ ಮದುವೆ ಪ್ರೀತಿಗೆ ತಿರುಗಿದೆ. ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸಲು ಶುರು ಮಾಡಿದ್ದಾರೆ. ಅವರ ನಡುವೆ ಇದ್ದ ಸಲುಗೆ, ಕಾಳಜಿ, ಪ್ರೀತಿ ಇಬ್ಬರನ್ನು ಒಮ್ಮೆ ಮಾಡಿದ್ದಾರೆ.ಜತೆಗೆ ಇಬ್ಬರು ಸೇರಿ ಬೀದಿ ಬದಿಯಲ್ಲಿ ಹೂವಿನ ಅಂಗಡಿ ಇಟ್ಟುಕೊಂಡು ಸಂತೋಷದ ಜೀವನವನ್ನು ಹೊಂದಿದ್ದಾರೆ. ದಿನಗಳು ಹೋದಂತೆ ಇಬ್ಬರ ನಡುವೆ ಸಕಾರಾತ್ಮಕ ವಿಚಾರಗಳು ಬೆಳೆದು ತಮಗೆ ಬಂದ ಕಾಯಿಲೆಯನ್ನು ದೂರು ಮಾಡಿಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *