ಬೆಂಗಳೂರು, ಅಕ್ಟೋಬರ್ 28: ಆರು ವರ್ಷಗಳ ಪರಿಶ್ರಮ ಫಲ ಕೊಟ್ಟಿದೆ. ಬೆಂಗಳೂರಿನ ಆರ್ವಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿ ಡ್ರೈವರ್ಲೆಸ್ ಕಾರು ಅಥವಾ ಸ್ವಯಂಚಾಲಿತ ಕಾರು (ಚಾಲಕರಹಿತ ಕಾರು) ಪ್ರೋಟೋಟೈಪ್ ಅನ್ನು ಅನಾವರಣಗೊಳಿಸಲಾಗಿದೆ. ವಿಪ್ರೋ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಆರ್ವಿ ಎಂಜಿನಿಯರಿಂಗ್ ಕಾಲೇಜುಗಳು (RV ಕಾಲೇಜ್ ಆಫ್ ಇಂಜಿನಿಯರಿಂಗ್) ಸಂಸ್ಥೆಯಲ್ಲಿ ಈ ಪ್ರೋಟೋಟೈಪ್ ಕಾರನ್ನು ನಿರ್ಮಿಸಲಾಗಿದೆ.
ಮೈಸೂರು ರಸ್ತೆಯಲ್ಲಿರುವ ಆರ್ವಿ ಕಾಲೇಜು ಕ್ಯಾಂಪಸ್ನಲ್ಲಿ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮಿಗಳು ಈ ಡ್ರೈವರ್ಸ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಇದರ ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ನಿನ್ನೆ (ಅಕ್ಟೋಬರ್ 27) ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಖುಷಿ; ಟರ್ಮ್ಸ್ ಆಫ್ ರೆಫರೆನ್ಸ್ ಜಾರಿ, ಗ್ರಾಚುಟಿ ಮಿತಿ ಮೀರಿದೆ
ಈ ಡ್ರೈವರ್ಲೆಸ್ ಪ್ರೋಟೋಟೈಪ್ ಕಾರನ್ನ ಅನಾವರಣಗೊಳಿಸಿರುವ ಬಗ್ಗೆ ಐಐಎಸ್ ಸಿಯಿಂದಾಗಲೀ, ವಿಪ್ರೋ ಸಂಸ್ಥೆಯಿಂದ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. ವಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಪತ್ರಿಕಾ ಹೇಳಿಕೆ ಬಂದಿಲ್ಲ. ಈ ಪ್ರೋಟೋಟೈಪ್ ಇನ್ನೂ ಪ್ರಾಯೋಗಿಕ ಹಂತದಲ್ಲಿ ಇರುವ ಸಾಧ್ಯತೆಯಿಲ್ಲ.
ಎಕ್ಸ್ನಲ್ಲಿ ಬಂದ ಪೋಸ್ಟ್
ಉತ್ತರಾದಿಮಠದ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರು RV ಕಾಲೇಜಿನಲ್ಲಿ ಚಾಲಕ ರಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ವಿಪ್ರೋ ಎಂಜಿನಿಯರಿಂಗ್ನಿಂದ ಯೋಜಿತ ಯೋಜನೆ, ವಿಪ್ರೋ, IISc ಮತ್ತು RV ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ…🙂👌👏 ಅತ್ಯುತ್ತಮ ತಂತ್ರಜ್ಞಾನ. 🤘@ಆನಂದಮಹೀಂದ್ರ @elonmusk @nikhilkamathcio . pic.twitter.com/m3khFWgEQU
– ಆದರ್ಶ ಹೆಗ್ಡೆ (@adarshahgd) ಅಕ್ಟೋಬರ್ 27, 2025
ಡ್ರೈವರ್ಲೆಸ್ ಕಾರು ಅಭಿವೃದ್ಧಿಗೆ 2019ರಲ್ಲಿ ಕೈಜೋಡಿಸಿದ್ದ ವಿಪ್ರೋ ಮತ್ತು ಐಐಎಸ್ಸಿ
2019ರಲ್ಲಿ ವಿಪ್ರೋ ಸಂಸ್ಥೆಯು ಆಟೋನೊಮಸ್ ಸಿಸ್ಟಮ್ಸ್, ರೋಟಿಕ್ಸ್ ಮತ್ತು 5ಜಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಐಐಎಸ್ಸಿ ಜೊತೆ ಕೈಜೋಡಿಸಿತ್ತು. ವಿಪ್ರೋ ಐಐಎಸ್ಸಿ ರಿಸರ್ಚ್ ಮತ್ತು ಇನ್ನೋವೇಶನ್ ನೆಟ್ವರ್ಕ್ (WIRIN) ಅನ್ನು ವಿಪ್ರೋ ಸ್ಥಾಪಿಸಿತು. ಎಐ, ಮೆಷಿನ್ ಲರ್ನಿಂಗ್, ವಿಷುವಲ್ ಕಂಪ್ಯೂಟಿಂಗ್, ಎಚ್ಎಸಿಬಿಷನ್, ವೆಹಿಕಲ್ ಟು ಎವಿರಿಥಿಂಗ್ ಕಮ್ಯೂನಿಕೇಶನ್ ಇತ್ಯಾದಿ ತಂತ್ರಜ್ಞಾನಗಳ ಮೇಲೆ ಗಮನ ಹರಿಸಲಾಗಿದೆ.
ಇದನ್ನೂ ಓದಿ: ಎಸ್ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯಾದ ಕಂಪನಿಯೊಂದಿಗೆ ಎಚ್ಎಲ್ನಿಂದ ಒಪ್ಪಂದ
ಸಂಪೂರ್ಣವಾಗಿ ಸಿದ್ಧವಾಗಿರುವ ಡ್ರೈವರ್ಲೆಸ್ ಕಾರು…
ವಿಪ್ರೋ ಸಂಸ್ಥೆಯು ಕೆಲ ಜಾಗತಿಕ ಡ್ರೈವರ್ಲೆಸ್ ಕಾರು ಪ್ರಾಜೆಕ್ಟ್ನಲ್ಲಿ ತೊಡಗಿಸಿಕೊಂಡಿದೆ. 2019ರಲ್ಲಿ WIRIN ಸ್ಥಾಪಿಸಿದಾಗ ಭಾರತದಲ್ಲೂ ಡ್ರೈವರ್ಲೆಸ್ ಕಾರನ್ನು ನಿರ್ಮಿಸುವ ಗುರಿ ಹೊಂದಿತ್ತು. ಆದರೆ, ಪ್ರಸ್ತುತ ರೂಪಿತವಾದ ವಿನ್ಯಾಸವನ್ನು ಬಿಟ್ಟು ಸಂಪೂರ್ಣವಾಗಿ ಹೊಸದಾಗಿ ಡಿಸೈನ್ ಮಾಡಲಾಗಿದೆ. ಭಾರತದ ರಸ್ತೆಗಳ ನಡುವೆ ಡ್ರೈವರ್ಲೆಸ್ ಕಾರುಗಳು ಸಾಗಲು ಎದುರಾಗುವ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರನ್ನು ನಿರ್ಮಿಸಲಾಗಿದೆ. 2020ರಲ್ಲೇ ಪ್ರೋಟೋಟೈಪ್ ಬರುವ ನಿರೀಕ್ಷೆ ಇತ್ತು. ನಾಲ್ಕೈದು ವರ್ಷ ವಿಳಂಬವಾದರೂ ಆಗಮಿಸಿದೆ. ಈ ಪ್ರಾಜೆಕ್ಟ್ನಲ್ಲಿ ಆರ್ವಿ ಎಂಜಿನಿಯರಿಂಗ್ ಕಾಲೇಜು ಕೂಡ ಕೈಜೋಡಿಸಿದೆ. ಕಾಲೇಜಿನ ವಿದ್ಯಾರ್ಥಿಗಳೂ ಈ ಪ್ರಾಜೆಕ್ಟ್ನಲ್ಲಿ ಕೂಡಿರುವುದುಂಟು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ