ನವದೆಹಲಿ, (ಅಕ್ಟೋಬರ್ 28): ದೆಹಲಿಯ ಗಾಂಧಿ ವಿಹಾರ್‌ನಲ್ಲಿ ಯುಪಿಎಸ್‌ಸಿ ಆಕಾಂಕ್ಷಿಯಾಗಿದ್ದ 32 ವರ್ಷದ ರಾಮಕೇಶ್ ಮೀನಾ ಕೊಲೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಲಿವಿಂಗ್ ಟುಗೆದರ್ ನಲ್ಲಿದ್ದ ಅಮೃತಾ ಚೌಹಾಣ್ ತನ್ನ ಮಾಜಿ ಪ್ರಿಯಕರನ ಜೊತೆ ಸೇರಿಕೊಂಡು ಪ್ರಿಯಕರ ರಾಮಕೇಶನನ್ನು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ತನ್ನ ಖಾಸಗಿ ವಿಡಿಯೋ ಡಿಲೀಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿ ಬಳಿಕ ಬೆಂಕಿ ಹಚ್ಚಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಯುಪಿಎಸ್‌ಸಿ ಆಕಾಂಕ್ಷಿ 32 ವರ್ಷದ ರಾಮಕೇಶ್ ಮೀನಾ ಕೊಲೆ ಕೇಸ್ ಆಳಕ್ಕಿಳಿದಂತೆಲ್ಲಾ ಹೊಸ ಹೊಸ ಸಂಗತಿಗಳು ತೆರೆದುಕೊಳ್ಳುತ್ತಿವೆ. ಮೃತ ರಾಮಕೇಶ್ ನಿವಾಸದಿಂದ ವಶಪಡಿಸಿಕೊಂಡ ಹಾರ್ಡ್ ಡಿಸ್ಕ್‌ನಲ್ಲಿ ರಾಮ್ ಲಿವ್-ಇನ್ ಪಾರ್ಟ್‌ನರ್ ಅಮೃತಾ ಸೇರಿದಂತೆ 15ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವೀಡಿಯೊಗಳು ಇವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ವಿಡಿಯೋಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.