ಖಮ್ಮಂ, ಅಕ್ಟೋಬರ್ 29: ತೆಲಂಗಾಣದಲ್ಲಿ (ತೆಲಂಗಾಣ ಪ್ರವಾಹ) ಭಾರೀ ಮಳೆಯಾಗುತ್ತಿದೆ. ಎಂಕೂರು ಮಂಡಲದ ಜನ್ನಾರಂ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ನಿಮ್ಮವಾಗು ಹೊಳೆಯಲ್ಲಿ ಗೂಡ್ಸ್ ಟ್ರಕ್ ಒಂದು ಅದರ ಚಾಲಕನೊಂದಿಗೆ ಕೊಚ್ಚಿ ಹೋಗಿದೆ. ಚಂಡಮಾರುತ ಮೊಂತಾದಿಂದ (Cyclone Montha) ಉಂಟಾದ ಭಾರೀ ಮಳೆಯಿಂದಾಗಿ ಪಲ್ಲಿಪಾಡು-ಎಂಕೂರು ಮಾರ್ಗದಲ್ಲಿರುವ ಹೊಳೆ ಇಂದು ಬೆಳಿಗ್ಗೆಯಿಂದ ತುಂಬಿ ಹರಿಯುತ್ತಿದೆ. ಸ್ಥಳೀಯರು ಹೋಗಬೇಡಿ ಎಂದು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ಚಾಲಕ ಹೊಳೆ ಅಡ್ಡಲಾಗಿ ಇರುವ ಸೇತುವೆಯನ್ನು ದಾಟಲು ಪ್ರಯತ್ನಿಸಿದನು. ಆಗ ಟ್ರಕ್ ನೀರಿನಲ್ಲಿ ಕೊಚ್ಚಿಹೋಗಿದೆ. ಎನ್ಡಿಆರ್ಎಫ್ ಸಿಬ್ಬಂದಿ ಹುಡುಕಾಡಿದರೂ ಚಾಲಕನನ್ನು ಹುಡುಕಲು ಸಾಧ್ಯವಾಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ